ಇಂಗ್ಲೀಷ್ ಕವಿತೆಯ ಅನುವಾದ ಭಿಕ್ಷುಕ ಬಾಲೆ

ಅನುವಾದ ಸಂಗಾತಿ

ಭಿಕ್ಷುಕ ಬಾಲೆ

ಮೂಲ ಆಂಗ್ಲ; ಆಲ್ಫರ್ಡ್ ಲಾರ್ಡ್ ಟೆನಿಸನ್
ಅನುವಾದ. ; ಬಾಗೇಪಲ್ಲಿ ಕೃಷ್ಣಮೂರ್ತಿ
.

ಮಹರಾಜ ‘ಕ್ಯುಪಿಚುವಾ’ ನ ಸಮ್ಮುಖಕೆ ಅಂದು

ಕಿರೀಟ ಹೊತ್ತ ಭವ್ಯ ಪೋಷಾಕು ಧರಿಸಿದ ರಾಜ
ಸ್ವತಃ ವಂದಿಸುತ ಬಂದ ಅವಳೆಡೆಗೆ ಹೆಜ್ಜೆಯ ಇಡುತ

“ಇದು ಆಶ್ಚರ್ಯ ವೇನಲ್ಲಾ” ಎಂದರು ರಾಜ ಪ್ರಮುಖರು
ಬೆಳಕಿಗಿಂತ ಭವ್ಯವಾದ ಆಕೆ ಸೌಂದರ್ಯ ಸಿರಿಯ ಕಂಡು

ನೀಲಾಕಾಶದ ಮೋಡದಿ ಇಣುಕಿದ ಚಂದ್ರ ಪ್ರಜ್ವಲಿಸಿದಂತೆ
ತನ್ನ ಮೈ ಪೂರ್ಣ ಮುಚ್ಚಲಾಗದ ಉಡುಪಿನಲಿ ಕಂಡಳಾಕೆ
ಒಬ್ಬರಾಕೆಯ ಮೊಣಕೈಗಾಲ್ಗಳ ಹೊಗಳೆ ಮತ್ತೊಬ್ಬರು ಆಕೆಯ ನಯನಂಗಳನು
ಮತ್ತೋರ್ವರು ಆಕೆ ದಟ್ಟ ಮುಂಗುರಳ ಮುಖಭಾವವ

ಅಂತ ಸವಿಯಾದ ದೇವ ಕನ್ಯೆಯರ ವರ ಹೊತ್ತ ಮುಖ
ಅವರ ಸಾಮ್ರಾಜ್ಯದಿ ಎಲ್ಲೂ ಕೇಳಿ ಕಂಡಿರಲಿಲ್ಲ
ಅಂದಿಗೆ

ಸಾಮ್ರಾಟ ‘ಕ್ಯುಪಿಚುವಾ’ ಆ ಸ್ಥಳದೇ ಪ್ರತಿಜ್ಞೆ ಮಾಡಿದ
ಈ ಬಿಕ್ಷುಕ ಬಾಲೆ ನನ್ನ ಪಟ್ಟದರಸಿ ಎಂದು ಘೋಷಿಸಿದ.


ಮೂಲ ಆಂಗ್ಲ; ಆಲ್ಫರ್ಡ್ ಲಾರ್ಡ್ ಟೆನಿಸನ್
ಅನುವಾದ. ; ಬಾಗೇಪಲ್ಲಿ ಕೃಷ್ಣಮೂರ್ತಿ.

Leave a Reply

Back To Top