ಸಿದ್ದಲಿಂಗಪ್ಪ ಬೀಳಗಿ-ಹಾಯ್ಕುಗಳು

ಕಾವ್ಯ ಸಂಗಾತಿ

ಹಾಯ್ಕುಗಳು

ಸಿದ್ದಲಿಂಗಪ್ಪ ಬೀಳಗಿ


ಮೌನದೊಳಗೂ
ಮಾತಿದೆ; ಹೃದಯದ
ಭಾಷೆಯದುವೆ!

ಸುಂದರಾಂಗನೆ
ಕಂಡ ಕ್ಷಣ; ಮನದಿ
ಮಹಾ ಸುನಾಮಿ

ಗೊರಕೆ ಸದ್ದು
ಅಬ್ಬಾ! ಒದರುವಂತೆ
ಹಳೆಯ ಬಸ್ಸು!!



ಹದವರಿತು
ಬೀಜ ಹಾಕು ಭೂಮಿಗೆ
ಸಮೃದ್ಧ ಬೆಳೆ

ಬರೀ ಸೋಲಲ್ಲ
ಅದು; ಸದ್ದು ಮಾಡದ
ಶರಣಾಗತಿ


Leave a Reply

Back To Top