ಪ್ರೊ ವಿಜಯಲಕ್ಷ್ಮಿ ಪುಟ್ಟಿ-ಹೀಗೊಬ್ಬಳು ಅನಾಮಿಕೆ.

ಕಾವ್ಯ ಸಂಗಾತಿ

ಹೀಗೊಬ್ಬಳು ಅನಾಮಿಕೆ.

ಪ್ರೊ ವಿಜಯಲಕ್ಷ್ಮಿ ಪುಟ್ಟಿ

ಹೀಗೋಬ್ಬಳು ಅನಾಮಿಕೆ ಒಬ್ಬಂಟಿಯಾಗಿ
ದಿಕ್ಕು ದೆಸೆ ಅರಿಯದೆ ಅಲೆದಾಡುವಳು
ಚಿಕ್ಕ ಮಕ್ಕಳಿಗೆ ಗುಬ್ಬಚ್ಚಿ ಕಥೆ ಕೇಳಿಸುವಳು
ನವಿಲಿಗೆ ಹಂಸದ ಕಥೆ ಕಟ್ಟುವಳು
ಹಂಸಕೆ ತೂಗು ಕಲ್ಪವ ತೊಡಿಸುವಳು
ಬೋರೆಂಬ ಮಳೆಗೆ ಸುಮ್ಮನೆ ಅಂಗಳದಿ ನಿಂತು
ತಪ್ಪನೆ ತೋಯಿದು ನಿಂತು ಸುಖಿಸುವಳು
ಹಿಗೊಬ್ಬಳು ಅವಳು ಅನಾಮಿಕೆ….

ಆಗಾಗ ಅವಳ ಕನಸಲ್ಲಿ ಮತ್ತೊಂದು ಕನಸು
ಅವಳ ಅಪ್ಪಣೆ ಇಲ್ಲದೆ ಕನಸಲ್ಲೊಂದು
ಬಿಳಿ ಕೊಕ್ಕರೆ,
ಅವಳ ದೇಹ ಇದೀಗ ಕಿರುತೊರೆ,
ತುಂಬೆಲ್ಲ ಕುಪ್ಪಳಿಸುವ ಪುಟ್ಟ ಪುಟ್ಟ ಮೀನುಗಳು
ಮನ ಸಂಭ್ರಮದ ತೊಂದೀಲ
ಕೈಚಾಚಿದಾಗ ಕನಸೆಂಬ ಭ್ರಮೆ
ಅದೇಕೋ ಅವಳೊಬ್ಬ ಅನಾಮಿಕೆ..

ಅದೊಮ್ಮೆ ಅವಳು ಮರಳುತ್ತಾಳೆ ಮತ್ತೆ ಮನೋಭಾವಿಕೆಗೆ
ಅದು ಯಾವಾಗ ಅವಳು ಮತ್ತೆ ಮರಳಿದಳು ಅರಿವಾಗುವುದೇ ಇಲ್ಲ
ನನ್ನ ಹಿತೋಪದೇಶ ಉಪದೇಶ ಆದೇಶ
ಅವಳ ಕಿಡಿಗಣ್ಣು ಕಿಡಿಮಾತು ಕಿಡಿನೋಟ,
ಸಾಕಿದ ನಾಯ ಕಣ್ಣಲ್ಲಿ ಪ್ರಶ್ನೆ
ಮನೆ ಬೆಕ್ಕು ದೂರ ನಿಂತೆ ಅವಳ ನಿರೂಕಿಸುತ್ತದೆ ಇದೀಗ ಮನೆಯ ಮುಂದಿನ ಗೇಟು ಯಾವಾಗಲೂ ಮುಚ್ಚಿದಂತಿದೆ
ಅವಳ ಮನ ದಂಗುಡಿಗಳ ಹತೋಟಿಯಲ್ಲಿ ಇಟ್ಟಿದೆ ಅದೇಕೋ ಬರಬರುತ್ತಾ ಅವಳೊಬ್ಬ ಅನಾಮಿಕೆ..

ಅವಳಿಗ ಯಾಕೋ ಹೊರ ಹೋಗುತ್ತಿಲ್ಲ
ಒಳ ಕುಳಿತು ಏನು ದೇನಿಸುತ್ತಿದ್ದಾಳೆ
ಯಾರ ಕನಸ ಒಕ್ಕಲು ತಯಾರಿಸುತ್ತಿದ್ದಾಳೆ
ಅದೇಕೋ ಅವಳಿಗೆ ಎಲ್ಲರಲ್ಲೂ ಅಪನಂಬಿಕೆ
ಇವೆಲ್ಲದರ ಗೊಡವೆ ಬೇಡ ಎಂದು ಮೌನ ಅಪ್ಪಿ … ಗೊತ್ತಿಲ್ಲ ಇವಳು ಯಾಕೋ
ಬರ ಬರುತ್ತಾ ಅನಾಮಿಕೆ…


Leave a Reply

Back To Top