ವ್ಯಾಲಂಟೈನ್ ವಿಶೇಷ
ಸ್ಮಿತಾ ಅಮೃತರಾಜ್. ಸಂಪಾಜೆ
ಸುಮ್ಮಗೆ ಕೆಲ ಒಲವ ಸಾಲುಗಳು
ಸೂರ್ಯ ಕಂತುವ ಹೊತ್ತಿನಲ್ಲಿ
ಹೂಗಳ ಒಡಲೊಳಗಿನ ಪ್ರೇಮ
ಪಕಳೆ ತುದಿಗೆ ಬಂದು ನಿಂತೀತೇ?
ಅದಕ್ಕೇ ಹೂವಿನ ವಿರಹಕ್ಕೂ ಈ ಪರಿಯ
ಸೊಬಗು ದಕ್ಕಿದ್ದಾ
* * *
ಅವಳ ಹೂದೋಟದ ಪ್ರತೀ ಹೂದಳದ ಮೇಲೆ
ಚಿಟ್ಟೆ ಹಾರಿ ಬಂದು ಕೂರುತ್ತದೆ
ಗುಲಾಬಿ ಅದರ ದಳಗಳಿಗೆ ಕೆಂಪು ಬಣ್ಣ
ಬಳಿಯುತ್ತದೆ
ಸೇವಂತಿಗೆ ಹಳದಿಯನ್ನೂ,ಬುಗುಡಿ ಕೇಸರಿಯನ್ನೂ
ಮಲ್ಲಿಗೆ ಅಚ್ಚಬಿಳುಪನ್ನು ಕೊಡುತ್ತದೆ
ರಂಗಿನ ಚಿಟ್ಟೆ ನೀಲಿ ಶಂಖಪುಷ್ಪದತ್ತ
ಹಾರುತ್ತದೆ
ಮತ್ತೆ ಮುಂಜಾವಿನಲಿ ಚಿಟ್ಟೆಯ ರೆಕ್ಕೆಗೆ ಬಣ್ಣ ಹಚ್ಚಲು ಹೂಗಳು ಕತ್ತು ಕೊಂಕಿಸಿ ನಿರುಕಿಸುತ್ತಿದೆ
ಯಾವ ಹೂವಿನ ಮೇಲೂ ಒಲವು ಹುಟ್ಟದ ಚಿಟ್ಟೆ
ಹಾರುತ್ತಲೇ ಇದೆ;ಹೂವು ಕಾಯುತ್ತಲೇ ಇದೆ
- * * *
ಬೋರೆಂದು ಸುರಿದು ಬತ್ತಿದೆದೆಯ
ತುಂಬಿಸಿದ ಬಾನಕರುಣೆಗೆ ಯಾವುದೋ
ಕ್ಷಣದಲ್ಲಿ ನದಿಗೆ ಒಲವು ಹುಟ್ಟಿಕೊಂಡಿತು
ಈ ಬೇಸಗೆಯಲ್ಲಾದರೂ ತನ್ನೊಲವ
ತಲುಪಿಸಲು ಅದಕೆ ಸಾಧ್ಯವಾಯಿತು.
- ** * **
ಹಗಲ ಒಲವ ಹಾಡು ಮರಳುವುದಿಲ್ಲ
ಇರುಳ ವಿರಹ ಗೀತೆ ಮುಗಿಯುವುದಿಲ್ಲ
ಒಡಲ ಸುಡುವ ಒಳಗಿನ ಕಾವು ಹೊರಕ್ಕೆ
ರಾಚುವುದಿಲ್ಲ
ಹೊಕ್ಕಳಿನಾಳಕ್ಕೆ ಕೈ ಹಾಕಿದರೂ ಕೆಲವು
ಹನಿ ಒಲವುಗಳು ದಾಖಲಾಗುವುದೇ ಇಲ್ಲ
ಒಲವಿನ ಕವಿತೆ ಚಂದ ಇದೆ
ಕವಿತೆ ಇಷ್ಟ ಆಯಿತು.
ಕವಿತೆ ಇಷ್ಟ ಆಯಿತು.
ಆರ್ದ ಕವಿತೆ..
ಆರ್ದ್ರ ಕವಿತೆ ಸ್ಮಿತಾ
ಸುಂದರ ಕವಿತೆ ಸ್ಮಿತಾ…
ಅಬ್ಬಾ ಎಂತಹ ಸಾಲುಗಳು…
“ಹಗಲ ಒಲವ ಹಾಡು ಮರಳುವುದಿಲ್ಲ
ಇರುಳ ವಿರಹ ಗೀತೆ ಮುಗಿಯುವುದಿಲ್ಲ
ಒಡಲ ಸುಡುವ ಒಳಗಿನ ಕಾವು ಹೊರಕ್ಕೆ
ರಾಚುವುದಿಲ್ಲ
ಹೊಕ್ಕಳಿನಾಳಕ್ಕೆ ಕೈ ಹಾಕಿದರೂ ಕೆಲವು
ಹನಿ ಒಲವುಗಳು ಸಿಗುವುದೇ ಇಲ್ಲ.”
ಒಡಲಾಳದ ನೋವಿಗೆ ಗೊಂದಲಕ್ಕೆ ಸಾಂತ್ವನ ಹೇಳುವ ಸಾಲುಗಳು
ಪ್ರೇಮದಂತ ಸುಕೋಮಲ ಕವಿತೆ ಸಾಲುಗಳು ಸ್ಮಿತಾ….. ಇಷ್ಟ ಆಯ್ತು
ನವಿರಾದ ಒಲವು ತುಂಬಿದ ಹೃದಯಗೀತೆಗಳು.
ನವಿರಾದ ಒಲವು ತುಂಬಿದ ಹೃದಯಗೀತೆಗಳು.
ಚಂದದ ಕವಿತೆ ಸ್ಮಿತಾ