ಅನಸೂಯಾ ಜಹಗೀರದಾರ

ವ್ಯಾಲಂಟೈನ್ ವಿಶೇಷ

ಅನಸೂಯ ಜಹಗೀರದಾರ

ಗಜಲ್

ನೀನು ನಗುತ್ತಿದ್ದೆ ಆದರೆ ಆ
ನಗು ನಿನ್ನಲ್ಲಿರಲಿಲ್ಲವೆಂದು ಗೊತ್ತು
ತಿಂಗಳಿನ ಬೆಳಕಿತ್ತು ಕಡವದು
ಶಶಿಯಲ್ಲಿರಲಿಲ್ಲವೆಂದು ಗೊತ್ತು

ನಿನ್ನ ಬನದ ತುಂಬಾಅರಳಿವೆ
ವರ್ಣಮಯ ಗುಲ್ಮೊಹರ್
ಕುಸುಮ ಸೆಳೆಯಿತು ಆದರೆ
ಗಂಧವಿರಲಿಲ್ಲವೆಂದು ಗೊತ್ತು

ತಂಗಾಳಿಯ ಅನುಭೂತಿಯಿತ್ತು
ತಂಪಾದ ಮರದ ನೆರಳಿತ್ತು
ಇರುಳಲಿ ನೆರಳೆಲ್ಲಿ ಮರ ಜೊತೆ
ಬಯಸಲಿಲ್ಲವೆಂದು ಗೊತ್ತು

ನಿನ್ನ ಶೃಂಗರಿಸಿದ ಮಾತು ಗಾಳಿ
ಗೋಪುರ ಶಿಖರದಿ ಹರಿದಾಡಿತು
ಇಲ್ಲಿ ಉಲಿವ ಮಾತೆಲ್ಲ ನಿಜದಿ
ನಲಿಯುವುದಿಲ್ಲವೆಂದು ಗೊತ್ತು

ಬಲಿಗೆ ಬಲೆಯ ಹೆಣೆವ ಜೇಡ ತಲ್ಲೀನ
ಸದಾ ಕಾರ್ಯದಿ ಮಗ್ನವೆ ಅನು
ಕಲಾತ್ಮಕವೆ ಆದರೂ ಬಲೆ ಬಲೆಯೆ
ಬಲವಾಗುವುದಿಲ್ಲವೆಂದು ಗೊತ್ತು


2 thoughts on “ಅನಸೂಯಾ ಜಹಗೀರದಾರ

Leave a Reply

Back To Top