ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ವ್ಯಾಲಂಟೈನ್ ವಿಶೇಷ

ಶರಣಪ್ಪ ತಳ್ಳಿ ಕುಪ್ಪಿಗುಡ್ಡ

ಬಾಧೆಗೆ ಪರ್ಯಾಯ ದಿನ

ಇವತ್ತು ಪ್ರೇಮಿಗಳ ದಿನವಂತೆ.,
ನೆನಸಿಕೊಂಡ್ರೆsss
ವಿದ್ಯುತ್ ಪ್ರವಹಿಸುತೈತಿ
ಪ್ರೀತಿಯ ಭ್ರಮೆಗೆ
ಭಾದೆಗಳು ವಿಭ್ರಮೆ
ವ್ಯಾಧಿಗಳಾಗೈತಿss

ಪ್ರೀತಿ ಯೆಲ್ಲೈತಿ
ಮೈ ನಡುಕ ಬರುತೈತಿ
ಹಳೆಯ ಪಲ್ಲವಿ ಕೆಟ್ಟೈತಿ
ನವತೆಯ ಮಮತೆಗೆ
ಹುಳುಕ್ಹಿಡಿದ ಸಂಸ್ಕೃತಿಯಾಗೈತಿ
ಪಕ್ಕೆಯೊಳಗss ಅಸ್ತಮಾ ಪೀಡಿತ ಕಫಾ ಪೀಡಿತವಾಗೈತಿ

ಹರಿದೈತಿ ಕನಸ ನೂಲು
ಕಣ್ಣಾಗ ಅಡಗೈತಿss
ಬದುಕಿದ್ದೂ ಸುಣ್ಣದ ಕಲ್ಲಾಗೈತಿ
ಹೃದಯದ ಗಾಯಗಳಿಗೆ
ಮೆದುಳು ಮರುಗಟ್ಟೈತಿ
ನಾಳಿನ ಬೆಳಕ ಮ್ಯಾಲsss
ಹಲಸಿನ ತೊಳೆ ಬಿಡಿಸಿದ್ರ…
ಬಯಲು ಬಂಜೆಯಾಗುತೈತಿ

ಹೂವು ಅರಳುವ ಹೊತ್ತಿಗೆ ಬೆಂಕಿ ಬುಡಕೆ ಬಿದ್ದಂಗ್ಹಾಗೈತಿ
ಸಾಯಲೊಲ್ಲದ ಪ್ರೀತಿ
ಹೊರಗsss ಬೆರತೈತಿ
ನನ್ನೊಳಗsss
ನನ್ನ ನೆರಳು ಇಚ್ಛಿತಗಳ
ಹೇಳಿ….ಹೇಳಿ ನಗುತೈತಿ
ಮತ್ತಾssss ಕಕ್ಕುಲಾತಿಗೆ
ನನ್ನುಳಿವು ಕುರಿತು ರೇಗಾಡುತೈತಿ

ನನಗಿಂದು-
ಸತ್ತ ಬದುಕಿನ ಬಾದೆಯ ಪರ್ಯಾಯ ದಿನ
ಮಾತು-ಮೌನ
ರೂಪ-ಸ್ಥೂಪ
ಕಂದಿ ಕಮರಿ ಹೋಗೈತಿ
ಯೆಲ್ಲೈತಿ ಪ್ರೀತಿ…!
ಕರಳು ನರಗಳ ಜಿವ್ವನೆ ಜಗ್ಗೈತಿ
ಮನದ ಮಸಣದಾಗss
ಸಶಸ್ತ್ರ ಪಹರೆ ಇಟ್ಟೈತಿ


About The Author

Leave a Reply

You cannot copy content of this page

Scroll to Top