ಸಂತೆಬೆನ್ನೂರು ಫೈಜ್ನಟ್ರಾಜ್

ವ್ಯಾಲಂಟೈನ್ ವಿಶೇಷ

ಸಂತೆಬೆನ್ನೂರು ಫೈಜ್ನಟ್ರಾಜ್

ಒಲವ ಹಾದಿಯಲ್ಲಿ

ಎದೆಯ ಕದವ ತೆರೆದಂತೆ
ಸರಿಸಿ ಕೆಂಪು ಸೆರಗು ಒಲವೇ ಮೈ ತುಂಬಾ
ಕಣ್ಣ ಮಿಂಚು..ಹೂ ಹೊಳಪು
ತುಟಿಯಲೇನೋ ಸವಿ ನೀನೇ ಕಣ್ಣ ಬಿಂಬ

ಕೈಯ ಮೆಹಂದಿ ಕೊರಳ ಹಾರ
ಜುಂ ಎನಿಸಿದೆ ಮನಸಿಗೆ ಕೆಂಪೇ ಕೆಂಪು
ನೋಟ ಎತ್ತ ಇತ್ತ…ಚಿತ್ತ
ಮದುವಣಗಿತ್ತಿ ನೀ ಕಣ್ಣಿಗಂತೂ ತಂಪು

ಒಲವ ಹೊತ್ತ ಕಣ್ಣಲ್ಲಿ
ಅದೆಷ್ಟು ಕವಿತೆ ಬರೆಸುವೆ ಹೇಳು ಎದುರಾಗಿ
ಬರೆವೆ ಸದಾ ನಿನಗಾಗಿ
ಒಲವೇ ಸೆರಗ ಹೊದ್ದಿದೆ ಮಧುರ ಒಲವಾಗಿ!

ತುಟಿಗಳೇನೋ ನೋಡು
ಮೌನವಾಗಿವೆ ತಮ್ಮೊಳಗೆ ಒಲವಲಿ
ಕಚ್ಚೊ ತುಟಿಗಳಿಗೆ ಭಯ
ಕೆಂಪೇ ಒಲವು ಸಾಗಲಿ ಒಲವ ಗೆಲುವಲಿ

ಎದೆಯ ಹಾಡಿಗೆ ತುಟಿಗಳು
ಕೆಂಡವಾಗಿ ನೋಡು ಹಾಡ್ತಾ ತನನ
ಗುಲಾಬಿಗೇನು ಗೊತ್ತು ಒಲವು
ಅರಳಿರೋ ಜೇನ್ದುಟಿಗಳಿಗೆ ಅದೇ ಮನನ

ಅರಳಿದ ತುಟಿಯಲ್ಲಿ
ಕೆಂಗುಲಾಬಿ ಹೊಳಪಿದೆ
ನಕ್ಕ ಮೊಗದ ತುಂಬಾ
ಒಲವ ಚೆಲುವ ಸೆಳಪಿದೆ

ಅರಳಿದ ಗುಲಾಬಿಗಳ ನಡುವೆ
ಹಾರೋ ದುಂಬಿಗೆ ಕನ್ ಪ್ಯೂಜ್
ಇಲ್ಲಿರೋದ್ ಯಾವುದೀ
ಅದಾ..ಇದಾ…ಅಂತ ಕೆಂಪ್ ರೋಜ್!

ಎದೆಯಲಿ ಉಳಿದ ಚಳಿ
ಹಿಮವಾಗಿದೆ ತುಟಿಗಳಲಿ ನೋಡಬಾರದೇ
ಗಾಳಿಯೂ ಅಲೆದಾಡದಂತೆ
ಬಿಗಿದೊಮ್ಮೆ ಉಸಿರಾಡದಂತೆ ಕಾಡಬಾರದೇ!


Leave a Reply

Back To Top