ಕಾವ್ಯ ಸಂಗಾತಿ
ಹುಚ್ಚು…!.
ಐಗೂರು ಮೋಹನ್ ದಾಸ್, ಜಿ

ಐಗೂರು ಮೋಹನ್ ದಾಸ್, ಜಿ

ಈ ಜಗತ್ತು
ನನ್ನನ್ನು ಒರ್ವ ಮಹಾ
‘ಹುಚ್ಚ’ ಎಂದು ಕರೆದ್ದರೂ….
ಮುಂದೆಯೊಂದು ದಿನ
ನಮ್ಮ ದೇಶ ‘ರಾಮರಾಜ್ಯ’ವಾಗುತ್ತದೆ
ಎಂದು ‘ಕನಸು’ ಕಂಡೇ ಕಾಣುವೆ…!
ಶಾಶ್ವತವಾಗಿ ನನಗೆ
‘ಹುಚ್ಚು’ ಎಂಬ
ಹಣೆಪಟ್ಟಿ ಕರುಣಿಸಿದ್ದರೂ….
ಮುಂದೆಯೊಂದು ದಿನ
ನಮ್ಮ ಯುವಜನಾಂಗ ದೇಶದ
‘ಹಣೆಬರಹ’ಬದಲಾಯಿಸುತ್ತಾರೆ
ಎಂದು ನಂಬುವೆ….!
ಕಂಬವೊಂದಕ್ಕೆ ಕಟ್ಟಿ ಹಾಕಿ
ವೈದ್ಯರುಗಳು ಈ ಹುಚ್ಚು
ಯಾವುದೇ ಗುಳಿಗೆ – ಇಂಜೆಕ್ಷನ್ ಗಳಿಂದ
ಫಲ ನೀಡುವುದಿಲ್ಲ
ಎಂದು ಹೇಳಿದ್ದರೂ….
ಇನ್ನೂ ಕೆಲ ದಶಕಗಳಲ್ಲಿಯೇ
ನಮ್ಮ ದೇಶ ಬದಲಾಗುತ್ತದೆ ಎಂದು
ದೂಡ್ಡ ‘ಧ್ವನಿ’ಯಲ್ಲಿ ಕೂಗುವೆ…!
ಮನಸ್ಸಿಗೆ ‘ಹುಚ್ಚು’ ಹಿಡಿದಿದ್ದರೂ
ನನಗೆ ವಾಸ್ತವ ಸತ್ಯಗಳು
ಚೆನ್ನಾಗಿ ಗೊತ್ತು…!
ಏಕೆಂದರೆ ನನಗೆ ಯಾವುದೇ
‘ಹುಚ್ಚು’ಗಳ ನಡುವೆಯೂ
‘ಕನಸು’ಗಳನ್ನು ಕಾಣಲು ಗೊತ್ತು…!
ನಾನು ಒರ್ವ
ಹುಚ್ಚು ಕನಸುಗಾರ….!!!