ಕಾವ್ಯ ಸಂಗಾತಿ
ರಮೇಶ ಸಿ ಬನ್ನಿಕೊಪ್ಪ ಹಲಗೇರಿ
ಹಠಮಾರಿ ಬದುಕು..
ಮೊನ್ನೆ ಹೀಗೆ
ತರಕಾರಿ ಹಣ್ಣು ಹೂವು ದಿನಸಿ…
ಇನ್ನೂ ಏನೇನೋ ಕೊಂಡು ಕೊಳ್ಳಲೆಂದು
ಸಂತೆಗೆ ನಾಲ್ಕು ಹೆಜ್ಜೆ ಹಾಕುವಾಗ…
ಥೂ..ಅವನೌನು
‘ಬಲಗಾಲ’ ಚಪ್ಪಲಿಯ ಉಂಗುಷ್ಟ ಕಿತ್ತುಬಿಡಬೇಕೇ..!
‘ಎಡಗಾಲ’ ಚಪ್ಪಲಿ
ಮುಸಿ ಮುಸಿ ನಕ್ಕಿತು..
ನನಗೊ ಸಂಕಟ
ಸೂತ್ತಲೂ ಜನವೋ ಜನ
ಹೆಜ್ಜೆ ಹಾಕಲು ಆಗುತ್ತಿಲ್ಲ
ಚಪ್ಪಲಿ ಬಿಟ್ಟು ಹೋಗುವಂತಿಲ್ಲ..
ನನಗೆ ಎರಡು ಅಷ್ಟೇ
ಕಾಲು ಬೆಚ್ಚಗಿರಬೇಕು..!!
ಕ್ಷಣ ಸೂತ್ತಲು ನೋಡಿದೆ
ಚಪ್ಪಲಿ ರೀಪೇರಿ ಮಾಡುವ ಅಣ್ಣಂದಿರರಾಗಲಿ ಅಕ್ಕಂದಿರರಾಗಲಿ ತಮ್ಮಂದಿರರಾಗಲಿ
ಯಾರು ಸಿಗಲೇ ಇಲ್ಲ..!!
ಹೌದು ಮೊನ್ನೆ ಮೊನ್ನೆ
ಅಂಗಡಿಯವನ
ಬಣ್ಣದ ಮಾತಿಗೆ ಮಾರು ಹೋಗಿ
ತಂದ ಹೊಸ ಚಪ್ಪಲಿ..
ಬಿಡುವುದಾದರೂ ಹೇಗೆ..?
ಯಾರು ಏನೇ ಅನ್ನಲಿ ಬಿಡಲಿ
ಎರಡೂ ಚಪ್ಪಲಿ ಕೈಯೊಳಗಿಟ್ಟುಕೊಂಡು
ಹೆಜ್ಜೆ ಹಾಕಿದೆ
ಕಾಯಬಾರದು ಜಗತ್ತು ಒಪ್ಪಲಿ
ಎಂದು..!!
ಅಲ್ವಾ ಮತ್ತೆ ಬದುಕು
ಎಷ್ಟೊಂದು ಹಠಮಾರಿ..!!
ಹಂಗೋ ಹಿಂಗೋ
ಹೊಂದಿಕೊಂಡು ಬಾಳಬೇಕು
ಎಲ್ಲವನ್ನೂ ಬದುಕಿನಲ್ಲಿ ತಾಳಬೇಕು.
ಹೌದಣ್ಣ ಜೊತಿಯಾಗಿ ಮಾಡಿ ಕೊಂಡ ಜೊಡು
ಮತ್ತು
ಜೊಡಿ ಬಿಡಕಾಗದಿಲ್ಲ.
ನಾನಿನ್ನೂ ಕಿರಿಯ ಸರ್ , ಹಿರಿಯರಿಗೆ ಪ್ರೀತಿ ಪೂರ್ವಕ ಧನ್ಯವಾದಗಳು…
ಬದುಕೇ…..ಹೀಗೆ
ಕೆಸರಿನಲಿ ಸಿಕ್ಕ ಪಾದಗಳ ಹಾಗೆ.,
ಒಮ್ಮೆಯಲ್ಲ…….
ಮಗದೊಮ್ಮೆಯಲ್ಲ…….
ಜೀವನ ಪೂರ್ಣವೆ ಬಾಳ ಲೆಕ್ಕವಿದೆ.
ಅತ್ತ ಧರಿ.,ಇತ್ತ ಪುಲಿ.ನಟ್ಟ ನಡುವೆ ನುಸುಳುವ ಪ್ರಯತ್ನವೆ ಜೀವನ ಎಂಬ ಸದಾಶಯ ಹೇಳುವ ಪಾದರಕ್ಷೆಯ ಅವಾಂತರವನ್ನು ಬದುಕಿಗೆ ಹೋಲಿಕೆಯಾಗುವಂತೆ ಬರೆದ ತಮ್ಮ ಕವಿತೆ ಸರಳ ಸುಂದರವಾಗಿದೆ.ರಮೇಶ ಬನ್ನಿಕೊಪ್ಪ ಇವರ ಕಾವ್ಯದ ಸೊಗಡು ಹೊಂದಿಕೊಳ್ಳುವ ಪರಿಯನು ತಿಳಿಸುತ್ತದೆ.