ಹನಿಬಿಂದು ಕವಿತೆ-ನಗೆಯು ಬರುತಿತ್ತಾ

ಕಾವ್ಯ ಸಂಗಾತಿ

ನಗೆಯು ಬರುತಿತ್ತಾ (ದಾಸ ಸಾಹಿತ್ಯದಿಂದ ಪ್ರಭಾವಿತ)

ಹನಿಬಿಂದು

ನಾ ನಾ ನಾ ನಾ ನಾ ನಾ ನಾ ನಾ
ನಾ ನಾ ನಾ ನಾ ನಾ ನಾ ನಾ ನಾ
ನಗೆಯು ಬರುತಿತ್ತಾ ಗೆಳತಿ ನಗೆಯು ಬರುತಿತ್ತಾ
ಜಗದ ಜನರ ಕಾರ್ಯವ ತಿಳಿದು
ನಗೆಯು ಬರುತಿತ್ತಾ…

ಸಾಯುವ ದಿನವದು ಇಹುದು ಒಂದು
ಸಾಧಿಸ ಬೇಕು ಬಾಳಲಿ ಎಂದು
ತಿಳಿದರೂ ಯಾರೂ ನೋಡಿಲ್ಲ ಎನುತಾ
ಲಂಚಕೆ ಕೈಯೊಡ್ಡುವ ಜನರನು ನೋಡಿ
ನಾ ನಾ ನಾ ನಾ ನಾ ನಾ ನಾ ನಾ

ಮಕ್ಕಳ ಬಾಳು ಬಹಳವೆ ಇಹುದು
ಸಮಯವು ಮುಂದೆ ಕಲಿಯಲಿಕಿಹುದು
ಆದರೂ ಈಗಲೇ ಮೊಬೈಲ್ ಕೊಡುತ
ಬೇಡದ ನೋಡಿ ಕೆಡುವುದ ತಿಳಿದರೂ
ನಾ ನಾ ನಾ ನಾ ನಾ ನಾ ನಾ ನಾ

ಮೋಸ ವಂಚನೆಯು ಕೆಟ್ಟದು ಎಂದು
ಮತ್ಸರ ಕಿಚ್ಚು ಬೇಡವು ಇಂದು
ಅರಿತಿದ್ದರು ಎಲ್ಲಾ ಬೇಡದ ಮಾಡುವ
ಮಂದಿಯ ನಿತ್ಯ ನೋಡುತ ನಮಗೆ
ನಾ ನಾ ನಾ ನಾ ನಾ ನಾ ನಾ ನಾ

ಸಿಕ್ಕಿದ ಸಮಯವ ಹಾಳು ಮಾಡಿ
ತಣ್ಣನೆ ರಾತ್ರಿಯ ನಿದ್ರೆಯ ಬಿಟ್ಟು
ಜಂಗಮ ಗಂಟೆಯ ನೋಡುತ ಕಣ್ಣಿನ
ಆರೋಗ್ಯ ಕೆಡಿಸುವ ಮಂದಿಯ ನೋಡುತ
ನಾ ನಾ ನಾ ನಾ ನಾ ನಾ ನಾ ನಾ…


One thought on “ಹನಿಬಿಂದು ಕವಿತೆ-ನಗೆಯು ಬರುತಿತ್ತಾ

Leave a Reply

Back To Top