ಅಂಕಣ ಸಂಗಾತಿ
ಅಮೃತ ವಾಹಿನಿಯೊಂದು
ಅಮೃತಾ ಮೆಹೆಂದಳೆ
ಏನು ಮಾಡಲಿ ನೀನಿಲ್ಲದೇ…
ಯೆ ದಿಲ್ ತುಮ್ ಬಿನ್
ಕಹಿ ಲಗ್ತಾ ನಹಿ ಹಮ್ ಕ್ಯಾ ಕರೆ..
ನೀನಿಲ್ಲದೇ ನನಗೇನಿದೇ
ಮನಸೆಲ್ಲ ನಿನ್ನಲ್ಲೇ ನೆಲೆಯಾಗಿದೆ..
ಅಬ್ಬಾ! ನನ್ನ ಅಸ್ತಿತ್ವವನ್ನೇ ಮರೆಸುವಂತೆ ಅದು ಹೇಗೆ ನನ್ನ ಆವರಿಸಿಕೊಂಡಿದ್ದೀಯಾ! ನೀನಿಲ್ಲದೆ ಯಾವುದರಲ್ಲೂ ಮನಸ್ಸೇ ನಿಲ್ತಿಲ್ಲವಲ್ಲ. ಏನು ಮಾಡಲೂ ಆಗ್ತಿಲ್ಲವಲ್ಲ.
ತುಮ್ಹೆ ಕೆಹೆದೂ ಅಬ್ ಏ
ಜಾನೇವಫಾ ಹಮ್ ಕ್ಯಾ ಕರೆ..
ನಿನಗಾಗಿ ಕಾದು ಕಾದು
ಪರಿತಪಿಸಿ ನೊಂದೆ ನಾನು
ನಿನ್ನ ಒಂದು ಮಾತಿಗಾಗಿ,ಒಂದೇ ನೋಟಕ್ಕಾಗಿ ಕಾಯುತ್ತೇನೆ. ಸಿಗದಾಗ ಚಡಪಡಿಸುತ್ತೇನೆ. ಕೋಪಗೊಳ್ಳುತ್ತೇನೆ. ಕಣ್ಣೀರಾಗುತ್ತೇನೆ.
ಕಿಸೀ ಕೆ ದಿಲ್ ಮೆ ಬಸ್ಕೆ
ದಿಲ್ ಕೋ ತಡಪಾನಾ ನಹಿ ಅಚ್ಛಾ
ಹೀಗೆ ಒಂದು ಹೃದಯವನ್ನು ಸೂರೆ ಮಾಡಿ, ಕಾಡುವುದು ಸರಿಯಾ ನಿನಗೆ? ಏನೂ ಅರಿಯದ, ಏನೇನೂ ನಿರೀಕ್ಷಿಸದ ಮುಗ್ಧ ಮನಕ್ಕೆ ಭರವಸೆಯ ಕಿರಣ ಮೂಡಿಸಿದ್ದು ನೀನೇ ಅಲ್ಲವಾ?
ಒಲವೆಂಬ ಕಿರಣ ಬೀರಿ
ಒಳಗಿರುವ ಕಣ್ಣ ತೆರೆಸಿ
ಒಣಗಿರುವ ಎದೆ ನೆಲದಲ್ಲಿ
ಭರವಸೆಯ ಜೀವ ಹರಿಸಿ..
ಮತ್ತೆ ಇಷ್ಟೆಲ್ಲ ಆದ ಮೇಲೆ, ಜೀವಕ್ಕೆ ಜೀವವಾದ ಮೇಲೆ ಮರೆಯಾಗುವುದು ತರವಾ ನಿನಗೆ?
ಉಮ್ಮೀದೋ ಕೆ ಝಲಕ್ ದೇಕರ್
ಉಸೆ ಮುರ್ಝಾನಾ ನಹೀ ಅಚ್ಛಾ..
ಎದೆಯಲ್ಲಿ ನೀ ಹೊತ್ತಿಸಿದ ಬೆಂಕಿಯನ್ನೀಗ ನೀನೇ ಆರಿಸಬೇಕು. ಇಲ್ಲಾ, ಕೆಂಡಕ್ಕೆ ಗಾಳಿಯೂದಿ ಧಗಧಗಿಸಿಬಿಡಬೇಕು. ಹೇಳು ಏನು ಮಾಡುವೆ? ಹೇಳಿಬಿಡು ಮನಸ್ಸಲ್ಲೇನು ಬಚ್ಚಿಟ್ಟಿರುವೆ?
ಬುಝಾದೋ ಆಗ್ ದಿಲ್ ಕಿ..
ತುಮ್ಹಾರೆ ದಿಲ್ ಮೆ ಕ್ಯಾ ಹೆ
ಬಸ್ ಹಮೆ ಇತನಾ ಬತಾ ದೇದೋ..
ಸೆರೆಯಿಂದ ಬಿಡಿಸಿ ನನ್ನ ಆತಂಕ ನೀಗು..
ಈಗೇನು ಮಾಡಲಿ ನೀನೇ ಹೇಳು? ಈ ವಿರಹ ತಾಳುವುದು ಕಷ್ಟವಿನ್ನು.
ಅಬ್ ಯೆ ತನಹಾ ಸಫರ್
ಕಟ್ತಾ ನಹಿ ಹಮ್ ಕ್ಯಾ ಕರೆ...
ಅಮೃತಾ ಮೆಹೆಂದಳೆ