ಡಾ.ವಿಜಯಲಕ್ಷ್ಮಿ ಪುಟ್ಟಿಕವಿತೆ-ನದಿಯಂತೆ

ಕಾವ್ಯ ಸಂಗಾತಿ

ನದಿಯಂತೆ

ಡಾ.ವಿಜಯಲಕ್ಷ್ಮಿ ಪುಟ್ಟಿ

ನನಗೊಮ್ಮೆ ಅನಿಸುತ್ತದೆ 
ನಾನೊಂದು ನದಿಯಂತೆ
ಹರಿಯಬೇಕು ಪ್ರಶಾಂತವಾಗಿ 
ಯಾರ ಅಡೆತಡೆಯಿಲ್ಲದೆ 
ಯಾರ ಹಂಗಿಗೆ ಒಳಗಾಗದೆ 
ನನಗೆ ಇಷ್ಟ ಬಂದಂತೆ ….


 


ಕಟ್ಟಲಾಗದು ಆಣೆಕಟ್ಟು 
ನನ್ನ ಭಾವಗಳಿಗೆ 
ಹಾಕಲಾಗದು ಸರಪಳಿಯ 
ನನ್ನ ತನುವಿಗೆ ಹರಿಯಲಿ ಬಿಡಿ 
ಅದು ಬೇಕಾದಲ್ಲಿಗೆ 
ತನಗಿಷ್ಟಬಂದಂತೆ 
ಬೇಕಾದ ಗಮ್ಯದೆಡೆಗೆ

ಬೆಟ್ಟ-ಗುಡ್ಡಗಳ ಜಿಗಿದು
ಉಬ್ಬುತಗ್ಗುಗಳ ಸರಿದು
ಕೊರಕಲು ಸೇರಿ ಬಯಲ ಹರವಿ
ಒಮ್ಮೊಮ್ಮೆ ಆಕಸ್ಮಿಕ ಪ್ರವಾಹ ಹಾನಿ 
 ಹುಚ್ಚು ಹೊಳೆ ರಚ್ಚು ಕೊಳೆ 
ಕೊನೆಗೊಮ್ಮೆ ಮುಟ್ಟಿ
 ಗಮ್ಯ ಸ್ಥಾನ  ಶಾಂತ ಪ್ರಶಾಂತ 
ನಿಶಾಂತ ಹರವು ನದಿ ಪಾತ್ರ
ಯಾರ ಅಂಕೆಯಲ್ಲಿರದ 
ನಿರಾತಂಕತೆ,,,,


Leave a Reply

Back To Top