ಕಾವ್ಯ ಸಂಗಾತಿ
ಬಿಡುವಾದರೆ
ಇಮಾಮ್ ಮದ್ಗಾರ
ಬಿಡುವಾದರೆ ಒಂದುಸಲ ಬಂದುಹೋಗು
ಬರಡಾದ ಎದೆಯ ಎಳೆನೀರಿನ ಹೊಳೆಗೆ
ಹುಣ್ಣಿಮೆ ಶಶಿಗೂ ನಾಚಿಕೆಯಂತೆ
ಹೊಳೆಯಲಿ ತನ್ನ ಪ್ರತಿಬಿಂಬ ನೋಡಲು !!
ಯಾಕೋ ಗೊತ್ತಿಲ್ಲ ಈಗೀಗ ಎಳೆನೀರ ಹೊಳೆ ಉಪ್ಪುಪ್ಪು !
ಮನಸ ಮಾತ ನಂಬಿ ತಸ್ಕರನಂತೆ ಕಾದು ಕುಳಿತ ಸ್ಥಳವೀಗ
ಸೋತು ಸತ್ತಕನಸುಗಳ ತಾಜ್ ಮಹಲಾಗಿವೆ ನೋಡಲಾದರೂ
ಬಿಡುವಾದರೆ ಒಮ್ಮೆ ಬಂದು ಹೋಗು
ನೀನೇ ಗೀಚೀದ ಗೀರುಗಳು
ಹೃದಯದ ಗಾಯ ಮಾಯುತ್ತಿಲ್ಲ
ಒಡಲಾಗ್ನಿಗೆ ತಂಪೆರೆಯ ಲಾಗುತ್ತಿಲ್ಲ ನೀನು ಬಂದರೂ ಬರದಿದ್ದರೂ ಪರಕೇನಿಲ್ಲ
ತುಂಬಾ ದಿನಗಳಾದವು ಮುಂಜಾವಿನ ಮುಗುಳ್ನಗೆ ಕಾಣುತ್ತಿಲ್ಲ
ಬಿಡುವಾದರೆ ಒಮ್ಮ ಬಂದುಹೋಗು
ಕತ್ತಲೆ ಸರಿಯುತ್ತಿಲ್ಲ ಸೂರ್ಯ ಕರಗುತ್ತಿಲ್ಲ ದೀಪ ಬೆಳಗುವದು ಹೇಗೆ
ಸಾರಾಯಿ ಬೇಡಾಗಿದೆ ನಶೆಯಾಗಲೂ ಮನಸಿಲ್ಲ ಮನಸ ಮಲಗಿಸುವದು ಹೇಗೆ
ಬಿಡುವಾದರೆ ಒಮ್ಮೆ ಬಂದು ಹೋಗು
ಎದೆಯೆಲುಬು ಕಾಗೆಯ ಗೂಡಿನಂತಾಗಿವೆ
ಕಾಗೆಯ ಗೂಡಿನಲಿ ಕೋಗಿಲೆಯ ಮೊಟ್ಟೆ
ನೋಡಲಾದರೂ…ಒಮ್ಮೆ