ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ಯ.ಮಾ.ಯಾಕೊಳ್ಳಿ

ಕವಿತೆಯೂ….

ಕವಿತೆಯೂ
ಏಕಿಷ್ಟು ತುಟ್ಟಿಯಾಗೇಕು
ಮನುಷ್ಯರ ಹಾಗೆ
ಅದಕ್ಕೀಗ ನಮ್ಮದೇ ಚಾಳಿ!

ಅದೀಗ ಜನರ ನಡುವೆ
ದ್ವೇಷದ ಬೀಜ ಬಿತ್ತುವ
ಸಾಧನವಾಗಿದೆ
ಒಂದಾಗಿಸಬೇಕಿದ್ದ
ಪೆನ್ನು ಪೇಪರುಗಳೇ
ಚೂರಿ ಚಾಕುಗಳಾಗಿ
ಇರಿಯಲು ದಾರಿ ಹುಡುಕುತಿವೆ

ಒಂದೊಮ್ಮೆ
ದೇಶ ಕಾಲಗಳಾಚೆ
ಭಾವದ ಬೆಸುಗೆ ಬೆಸೆದಿದ್ದ
ಕವಿತೆಯೇ ಈಗ
ಕೊಂಡಿ ಕಳಚಲು
ಉಳಿ ಸುತ್ತಿಗೆಗಳಾಗಿದೆ

ಕವಿಗಳಲೂ ಈಗ
ಬಣಗಳು
ಕೆಂಪು ,ಬಿಳಿ, ಹಸಿರು
ಇನ್ನೇನೇನೋ…
ಅವರ ಕವಿತೆಗಳು
ಪಕ್ಷಗಳಿಗೆ ಪ್ರಣಾಳಿಕೆ
ಬರೆಯುತ್ತಿವೆ
ಅವನ್ನು ಉದ್ದರಿಸಿದ
ನಾಯಕರು
ತಮ್ಮ ಬಣದ ಕವಿಗೆ
ಪ್ರಶಸ್ತಿ ಮೆಡಲುಗಳೆಂದು
ಧರಣಿ ಹೂಡಿದ್ದಾರೆ..!

ನಿಜದ ಕವಿತೆ ಅನಾಥವಾಗಿದೆ.
ನಿಜದ ಕವಿಗಳನ್ನೂ
ಯಾರೂ ಕೇಳುತ್ತಿಲ್ಲ.


About The Author

3 thoughts on “ಯ.ಮಾ.ಯಾಕೊಳ್ಳಿ ಕವಿತೆ-ಕವಿತೆಯೂ….”

  1. NARAYAN RAMAPPA RATHOD

    ಡಾ. ಯಾಕೊಳ್ಳಿ ಸರ್ ಅವರ *ಕವಿತೆಯು* ಎಂಬ ಕವಿತೆ ಅಥ೯ಪೂಣ೯ವಾಗಿದೆ.

  2. ಡಾ ಶಶಿಕಾಂತ ಪಟ್ಟಣ ರಾಮದುರ್ಗ

    ಸುಂದರ ಭಾವ ಪ್ರಜ್ಞೆ ತುಂಬಿದ ಕವನ ಸರ್

Leave a Reply

You cannot copy content of this page

Scroll to Top