ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ಪ್ರಣಾಳಿಕೆ

ಡಾ ದಾನಮ್ಮ ಝಳಕಿ

ಆಶ್ವಾಸನೆಗಳು ಬೆಳೆದು
ಆಶೆ ಆಮಿಶಗಳ ಒಡ್ಡಿ
ನೆರವೇರಿಸದ ಪ್ರಣಾಳಿಕೆಗಳನು
ಬಿತ್ತಿ ಬೆಳೆಯುತಲಿರು
ಮೋಸಹೋಗುತಿಹರು ನರಮಾನವರು

ಮತದಾನದ ಹಕ್ಕನು
ಮಾರಲು ಹೇಳುತಿಹರು
ಸಿಕ್ಕಿಲ್ಲ ಬಡಪಾಯಿಗೆ ನ್ಯಾಯಯುತ ಬದುಕು
ಪ್ರಣಾಳಿಕೆಗಳ ಹುಸಿಯೆಂದು
ತಿಳಿಯಿತು ನಂತರದಲಿ

ಸ್ವಾರ್ಥಸಾಧನೆಯಲಿ
ಬಿಡಬೇಡಿ ಬತ್ತಳಿಕೆಗಳನು
ಸುಳ್ಳುಗಳ ಸರಮಾಲೆ
ಪೌರನಿಗೆ ತಿಳಿದಾಗ
ಸಿಡಿದೆದ್ದು ನಿಲ್ಲುವನು
ಜಗಕ್ಕೆಲ್ಲ ತಿಳಿಸುವನು

ವಿಧವೆಯ ಮಾಶಾಸನ
ವೃದ್ಧರ ಪಿಂಚಣೆ
ನಿರುದ್ಯೋಗಿಗೆ ಉದ್ಯೋಗ
ಬಡವನಿಗೆ ಅಕ್ಕಿ ಬೇಳೆ
ಎಂಬೆಲ್ಲ ಸುಳ್ಳುಗಳನು
ಅರಿತು ಅನುಭವಿಸುತಿಹರು

ಇನ್ನಾದರೂ ನಿಲ್ಲಿಸು
ದೀನದಲಿತರ ಶೋಷಣೆ
ದೇಶದ ಹಿತವ ಕಾಪಾಡುತ
ನುಡೆದಂತೆ ನಡೆದು
ಶರಣತತ್ವದಲಿ ಬಾಳು
ಸತ್ಯ ಶುದ್ಧದ ಪ್ರಣಾಳಿಕೆ
ಜಗದಲಿ ನೀ ಬೆಳಗು

ಮೂಡುತಿಹದು ಜನರಲಿ
ನೈಜತೆಯ ಅರಿವು
ಚುನಾವಣಾ ಸಾಕ್ಷರತೆ ದೀಪ
ಬೆಳಗುತಿದೆ ಶಾಲೆ ಕಾಲೇಜಿನಲಿ
ಮಾರಟವಾಗದು ಮತದಾನ
ಪ್ರಣಾಳಿಗಳ ಅಬ್ಬರದಲಿ


About The Author

Leave a Reply

You cannot copy content of this page

Scroll to Top