ಕಾವ್ಯ ಸಂಗಾತಿ
ಮುಂಜಾವು
ಅಕ್ಷತಾ ಜಗದೀಶ
ತಂಪು ತಂಗಾಳಿಯ ಮುಂಜಾವು
ಚಿಗುರೆಲೆ ಮೇಲಿನ ಇಬ್ಬನಿಯೊಂದು
ಶಾಂತವಾಗಿ ಮೌನದಲಿ
ಧ್ಯಾನಸಕ್ತವಾಗಿ ತದೇಕ ಚಿತ್ತದಲಿ
ಕಾಯುತಲಿದೆ ಬೆಳಕಿನ
ಆಗಮನಕೆ…
ಚಿಲಿಪಿಲಿ ನಾದವದು
ಸ್ವಾಗತವ ಕೊರುತಿದೆ
ಮಧುರ ಸ್ವರದಲ್ಲಿ
ಸಾರ್ಥಕ ಭಾವದಲ್ಲಿ
ಮೂಡಿದೆ ನೀಲಿ ಆಕಾಶದಲ್ಲಿ
ಸುಪ್ರಭಾತ…..
ಬಾಗಿಲು ತೆರೆದ ಬಾನಲ್ಲಿ ರವಿ
ಬೆಳಕ ಚೆಲ್ಲುವ ಪರಿಯೆಂತು
ಕೆಂಪಾದ ಬಾನಿನಲಿ
ತಂಪೆರಗಿದ ನೆಲದಲ್ಲಿ
ವಾಸ್ತವಕ್ಕೆ ಸಾಕ್ಷಿಯಾಗಿ
ಕಾಲಕ್ಕೆ ಋಣಿಯಾಗಿ
ಜಗವ ಬೆಳಗುತಿಹನು
ಬಾನೆತ್ತರದಲಿ ತಾ ನಿಂತು…..
ಉರುಳುವ ದಿನವದು
ನಿಲ್ಲದು ಕಡಲ ಅಲೆಗಳಂತೆ
ಪರಿತಪಿಸದು ಯಾರದೋ
ನಿಶ್ಯಬ್ದದ ಮೌನಕೆ..
ಉದಯಿಸುವುದು ಮರಳಿ
ಮೌನದೊಳು ಅಡಗಿಹ
ಧ್ಯಾನದಂತೆ…….