ಇಮಾಮ್ ಮದ್ಗಾರ್ ಗಜಲ್

ಕಾವ್ಯ ಸಂಗಾತಿ

ಗಜಲ್

ಇಮಾಮ್ ಮದ್ಗಾರ್

ಎದೆಯ ತೀಜೊರಿಯಲಿ ಕದಲದೇ ಕನವರಿಸುತಿದೆ ಕನಸು
ಮನಸಿನಾಚೆ ದೂಡಿ ನಿನ್ನ ಮರುಗುತಿದೆ ಮನಸು

ಅರಿವಿಗರಿವಾಗಲಿಲ್ಲ ಹುೃದಯವೇ ಬಚ್ಚಿಟ್ಟು ಕೊಂಡಿದೆ ಅಲ್ಲಿ
ಎಡವಿರಬಹುದು ತಿಳಿಮನಸು ಹುಡುಕಾಟದಲ್ಲಿ

ಸಂಷ್ಕೋಭ ವಾದೀತು ಉತ್ಪಲಿನಿಗೇಎಚ್ಚರಿರು ಸಖ ಅದೆಂದಿದ್ದರೂ ನಿನ್ನ ಪಾಲಿಗೆ
ಬಿದಿರಾಗಬೇಕು ನೀನು ಸೆಟೆಸಿ ನಿಲ್ಲಿಸಲು ನನ್ನಲತೆ ನಾನು ಸಮುಚ್ಛಿನ್ನ ಗೊಳಿಸ ಬೇಡ ನನ್ನ

ದರಕಾರ ವಿರಲಿ ನನ್ನ ಮೇಲೆವಿವಕ್ಷೆ ಕೊಡಲಾರೆ ನಾನು
ಅಭಿಗಮನವಾಗುವೆ ದಿನವೂ ಅಡಾಯಿಸಿ ಚುಂಬಿಸು ನೀನು


Leave a Reply

Back To Top