ಒಲವ ಚೈತ್ರವನದಲ್ಲಿ…..( ಪುಸ್ತಕ ವಿಮರ್ಶೆ)

ಪುಸ್ತಕ ಸಂಗಾತಿ

ಒಲವ ಚೈತ್ರವನದಲ್ಲಿ…..( ಪುಸ್ತಕ ವಿಮರ್ಶೆ)

ಸಾಹಿತ್ಯ ಲೋಕದಲ್ಲಿ ನವಪಲ್ಲವದಂತೆ ಕೊನರಿದ ಪ್ರತಿಭೆ ಪಿತೃಸಮಾನರಾದ ಶ್ರೀ ಈಶ್ವರ ಸಂಪಗಾವಿ ಸರ್ ಅವರು ಸರಳ ಸಜ್ಜನಿಕೆಯ ವ್ಯಕ್ತಿತ್ವದ ಇವರು ಫೆಸಬುಕ ಹಾಗೂ ವಾಟ್ಸಪ ಸಮೂಹಮಾಧ್ಯಮದಿಂದ ಚಿರಪರಿಚಿತರು. ಮುಖ್ಯೋಪಾಧ್ಯಾಯ ವೃತ್ತಿಯಿಂದ ನಿವೃತ್ತರಾಗಿ ಸಾಹಿತ್ಯದ ಸರ್ವಪ್ರಕಾರಗಳಲ್ಲಿ ಬರೆಯಬಲ್ಲ ಸಶಕ್ತ ಕವಿಯಿವರು.

ಇತ್ತಿಚೆಗಷ್ಟೆ ಇವರು ಬಿಡುಗಡೆಗೊಳಿಸಿದ ಒಲವ ಚೈತ್ರವನ ಗಝಲ್ ಸಂಕಲನ ನಿಜಕ್ಕೂ ಪ್ರಶಂಸನಾರ್ಹವಾದುದು. ಮನಕೆ ಮುದನೀಡುವ ಗಝಲಗಳು ಇದರಲ್ಲಿ ಹುದುಗಿದ್ದು ಓದುಗರ

ಮನವನ್ನು ಅರಳಿಸುತ್ತವೆ. ಈಶ್ವರ ಸರ್ ಅವರು ತಮ್ಮ ಜೀವನಾನುಭವಗಳನ್ನು ಒಂದು ರೂಪ ಕೊಟ್ಟು ನಿಲ್ಲಿಸಿದ

ಅಗಮ್ಯ ಮೂರ್ತಿಯೆ ಇದು. ಒಂದೊಂದು ಗಝಲ್ ಒಂದೊಂದು ಬಗೆಯ ಅನುಭವದಲ್ಲಿ ಓದುಗಮಿತ್ರನನ್ನು ತೇಲಿಸಿ ತನ್ನ ಮೂಸೆಯಲ್ಲಿ ಮುಳುಗಿಸುವ ಕಾರ್ಯಮಾಡುತ್ತಿವೆ.

ಅದರಲ್ಲಿ,

ನಲಿವಿನ ತೋಟದಲಿ ಸುಂದರ ಸುಮಗಳ

ಸುರಿಸುತಿರು

ಒಲವಿನ ನೋಟದಲಿ ಮಧುರ ಭಾವಗಳ

ಹರಿಸುತಿರು   -( ಗ ೨)

ಬದುಕು ನಂದನವನದಂತೆ ಅದರಲ್ಲಿ ನೀನು ಒಂದು ತರುವಿದ್ದಂತೆ ಎಂಬ ಕವಿಕಲ್ಪನೆ ಭಾವಾವೇಷ ತರಿಸುತ್ತದೆ.

ಸುಂದರ ಸುಮಗಳ ಸುರಿಸು ಎಂಬ ಭಾವ ಜೊತೆಗೆ ನಲ್ಲೆಯ ಕೂಡುವ ಒಲವಿನ ನೋಟ ಓದುಗರನ್ನು ಪ್ರೇಮಲೋಕದಲ್ಲಿ ತೇಲಿಸುತ್ತದೆ ಅಲ್ಲದೆ ಕಾಫಿಯಾಗಳು ಒನಪಿನಲ್ಲಿ ನುಲಿಯುತ್ತಿದ್ದು ಒಂದು ವೈಚಿತ್ರದಲ್ಲಿ ಜಾರಿದ ಅನುಭವ

ಅಂತರಂಗ ಕದತೆರೆದು ದೇವನ ರೂಪ

ಮೆಚ್ಚಬೇಕು ಗೆಳೆಯ

ಅಂತಃಸತ್ವ ಬೆಳೆದು ಕಾಣುವ ದೀಪ

ಹಚ್ಚಬೇಕು ಗೆಳೆಯ (ಗ ೩)

ಮನಸ್ಸಿನ ಶುದ್ದತೆಯನ್ನು ಬಿಂಬಿಸುವ ಗಝಲ್ಲಿನ ಮತ್ಲಾ ಹೃದಯದೊಳಗಿನ ಗುಡಿಯಲ್ಲಿ ಆದೇವನ ಚಿತ್ರವನ್ನು ಅಚ್ಚಳಿಯದಂತೆ ಚಿತ್ರಿಸಿ ನಿರ್ಮಲ ಭಾವದಲಿ ಭಕ್ತಿಯ ದೀಪ ಹಚ್ಚಬೇಕೆಂಬ ಕವಿಯ ಆಶಾಭಾವ ದೈವದೊಲವಲಿ ಮಿಂದು ಮಡಿಯಾಗಿಸುತ್ತದೆ ಅರಿಷಡ್ವರ್ಗಗಳ ಗೆಲ್ಲುವದು ಸುಲಭವಲ್ಲ ಆ ಗೆಲ್ಲುವ ಮಾರ್ಗದಲಿ ನಾನೆಂಬ ಭಾವವಳಿದು ಜ್ಞಾನದ ದೀಪವನ್ನು ಬೆಳಗಿಸುವ ಕಾರ್ಯ ಮಾಡಿದ್ದಾರೆ ನಮ್ಮ ಕವಿಶ್ರೇಷ್ಠ ಈಶ್ವರ ಗುರುಗಳು

ಊರಜಾತ್ರೆಯಲಿ ತೇರನೆಳೆವ

ಬಾ ಸಖಿ

ಮಾರಿದೇವಿಯ ನೇರತಿಳಿವ

ಬಾ ಸಖಿ( ಗ ೧೧)

ಇನ್ನು ನವಯುವಕರಂತೆ ಪ್ರೇಮದ ಕಡಲಲ್ಲಿ ಮುಳುಗಿ ಒಲವಿನ ಸೆಳೆತದಲಿ ಸಿಲುಕಿ ಸೆಳೆಯುವ ಸೂಜಿಗಲ್ಲಿನಂತೆ ಪ್ರೇಯಸಿಯನ್ನು ಒಲವರಾಗದಲ್ಲಿ ಜಾತ್ರೆಗೆ ಕೂಗಿ ಕರೆಯುತ್ತಿದ್ದಾರೆ. ತೇರನೆಳೆಯುವ ಬಾರೆ ನೇರ ತಿಳಿವ ಬಾರೆ ವಾ ಎಂತಹ ಮಧುರನುಡಿ ಎಂತಹ ಕನ್ಯೆಯಾದರೂ ಇವರ ನುಡಿಗೆ ಸೋಲಲೆಬೇಕು

ದೇವನಿದ್ದಾನೆ ಎಂಬ ಭರವಸೆಯಲ್ಲಿ ಬರೆದ ಮಕ್ತಾ

ಈಶನು ಒಲಿದ ಬದುಕಿನಲಿ ನೀನು ಬಂದೆ ಏಕೆ

ವೇಷ ಬದಲು ಮಾಡುತಲಿ ನೀನು ಬಂದೆ ಏಕೆ( ಗ ೧೫)

ದೈವಸಾಕ್ಷಾತ್ಕಾರವಾದ ಬಾಳಿನಲ್ಲಿ ನೀನು ಬಂದಿರುವೆ ಒಂದು ಕ್ಷಣ ಖುಷಿಯಾಯಿತು ಜೊತೆಗೆ ನಿನ್ನಲ್ಲಿದ್ದ ಕ್ರೋಧಭಾವಗಳು ಅಳಿದು ವೇಷ ಬದಲಿಸಿ ಮತ್ತೇಕೆ ಬಂದೆ ಪ್ರಶ್ನೆ ಅವರ ನಲ್ಲೆಗೆ ಚಾಟಿ ಏಟಿನಂತೆ ಬೀಸುತ್ತಿದ್ದಾರೆ .ಸಿಟ್ಟು ಸರಿಯಲ್ಲ ಹಿರಿಯರೆ ಬಿಟ್ಟು ಬಿಡಿ ತಿದ್ದಿಕೊಳ್ಳಲು ಅವಕಾಶ ಕೊಡಿ ನೊಂದ ಮನವ ನೋಯಿಸುವುದು ಸರಿಯಲ್ಲವೆಂಬುದು ನಮ್ಮ ಅನಿಸಿಕೆ

ಮನದೊಳಗಿನ ಜೊತೆಗಾರ್ತಿಯ ನೆನೆದು ಬರೆದ ಸುಂದರ ಸಾಲುಗಳಿವು,

ಮನದ ಕನ್ನಡಿಯೆದುರು ನಿಂದೆಯಾ ನೀನು

ಕ್ಷಣದಿ ಮುನ್ನುಡಿ ಬರೆದು ಬಂದೆಯಾ ನೀನು( ಗ ೩೭)

ಅಚ್ಚೋದ ಸರೋವರದಲಗಲಿ ಮಹಾಶ್ವೇತೆ ತಪಗೈದಂತೆ ನಾನು ಕುಳಿತಿರುವಾಗ ಹೃದಯದಲ್ಲಿ ನೀನೆ ಮೂಡಿರುವೆ

ಬಂದು ಅಷ್ಟಕ್ಕೆ ನಿಲ್ಲಲಿಲ್ಲ ಬಾಳಿಗೆ ಜೊತೆಯಾಗಿ ಉಪೋದ್ಘಾತ ಬರೆಯಲು ಹವಣಿಸುತ್ತಿರುವೆ. ಇವರ ಈ ಸಾಲುಗಳಂತೂ ಓದುವವರ ಹೃದಯದ ಬಾಗಿಲನ್ನು ಗೊತ್ತಿಲ್ಲದೆ ತೆರೆಸುತ್ತವೆ.

ಕ್ಷಣಕ್ಷಣಕೂ ನವಿರು ಭಾವದಲ್ಲಿ ಮನವನ್ನು ತೇಲಿಸುವ ಹೆಡ್ ಮಾಸ್ತರ ಇವರು ಸರ್ವ ವಿಧಗಳನ್ನು ಕರತಲಾಮಲಕ ಮಾಡಿಕೊಂಡು ಕಟ್ಟಿದ ಪ್ರತಿಗಝಲ್ಗಳು ಓದುಗರ ಮನಮುಟ್ಟಿ

ಮತ್ತಷ್ಟು ಈ ಕವಿಗಳಿಂದ ಗಝಲಗಳು ಹೊರಹೊಮ್ಮಲಿ.

ಸಂಪಗಾವಿ ಸರ್ ನಮ್ಮ ಭಾಗದವರು ಎಂಬುದು ನಮ್ಮ ಹೆಮ್ಮೆ ಅಲ್ಲದೆ ನಿಗರ್ವಿಗಳಾದ ಇವರು ನಮ್ಮ ಗೆಳೆಯರಾಗಿ ಸಿಕ್ಕಿದ್ದೆ ನಮ್ಮ ಪುಣ್ಯ. ಇವರ ಜ್ಞಾನ ಸಾಗರಕ್ಕೆ ಸಮ ಬರೆದ ಒಂದೊಂದು ಸಾಲು ಅರ್ಥಪೂರಿತ ಇ‌ನ್ನು ಇವರ ಗಝಲ್ ಕೃತಿ

” ಒಲವ ಚೈತ್ರವನ” ಗಝಲ್ ಸಂಕಲನ ಗಝಲ್ ಕಾವ್ಯ ಲೋಕದಲ್ಲಿ ಯಶಸ್ವಿಯಾಗಲಿ ಎಂಬುದು ನಮ್ಮ ಹಾರೈಕೆ


ಶಂಕರಾನಂದ ಹೆಬ್ಬಾಳ

One thought on “ಒಲವ ಚೈತ್ರವನದಲ್ಲಿ…..( ಪುಸ್ತಕ ವಿಮರ್ಶೆ)

Leave a Reply

Back To Top