ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ಕಲಿಕಾ ಹಬ್ಬ

ರಾಗ – ಚೆನ್ನಪ್ಪ ಚನ್ನೆ ಗೌಡ

ಬಂತಪ್ಪ ಬಂತು ಇಲ್ಲಿ
ಕಲಿಕಾ ಹಬ್ಬವು ನಮಗೆಲ್ಲಾ..
ಹಾಡನು ಹಾಡುವೆವೂ ನಾವು
ಆಟವ ಆಡುವೆವು…

ಊರನು ತಿಳಿಯೋಣ
ನಾವು ಬಣ್ಣವ ಹಚ್ಚೋಣ
ಮರವನು ಅರಿಯೋಣ ನಾವು
ನಕ್ಷೆಯ ರಚಿಸೋಣ..//ಬಂತಪ್ಪ//

ಹಾಡು-ಕಥೆ ಕಟ್ಟುವೆವು
ನಾವು ಗೊಂಬೆಯ ಮಾಡುವೆವು
ನೋಡಿ ಕಲಿಯುವೆವು ಚಿತ್ರವ
ಮಾಡಿ ಆಡುವೆವು …//ಬಂತಪ್ಪ//

ಕಸದಲಿ ರಸವುಂಟು..
ನಾವು ಉಪಯೋಗ ಮಾಡುವೆವು
ಮರದ ಎತ್ತರವ ನಾವು
ಇಲ್ಲಿಂದ ಅಳೆಯುವೆವು…

ಕತ್ತರಿ ಅಂಟಲ್ಲಿ
ನಮಗೆ ಮುಖವಾಡ ಮಾಡುವೆವು
ಟೋಪಿಯ ಮಾಡುತಲಿ ನಾವು
ಕುಣಿಯುತ ಕಲಿಯುವೆವು//ಬಂತಪ್ಪ//


About The Author

Leave a Reply

You cannot copy content of this page

Scroll to Top