ವಿಜಯಶ್ರೀ ಎಂ. ಹಾಲಾಡಿ ಕವಿತೆ ಮನುಷ್ಯ

ಕಾವ್ಯ ಸಂಗಾತಿ

‘ಮನುಷ್ಯ’

ವಿಜಯಶ್ರೀ ಎಂ. ಹಾಲಾಡಿ

ದೋಷಗಳೇ ತುಂಬಿರುವ
ನನಗೆ
ಗೂಬೆಯೊಂದನ್ನು, ಕಾಡುಕೋಳಿ
ಚಿರತೆ ಅಥವಾ ಹುಲಿಯೊಂದನ್ನು
ಪ್ರೇಮಿಸುವ ಅರ್ಹತೆಯಿಲ್ಲ

ನನ್ನ ಉಸಿರೇ ಅವುಗಳಿಗೆ ವಿಷ
ನನ್ನ ಮೈಯ್ಯ ವಾಸನೆ, ಬುದ್ಧಿವಂತಿಕೆ
ಆ ಪಾಪದವುಗಳನ್ನು ಕೊಂದು ಮುಗಿಸಬಹುದು

ಹಾಗೆಂದು, ಪ್ರಾಮಾಣಿಕ ಪ್ರೀತಿಯಿದೆ
ನನ್ನೊಳಗೆ
ಚಿಪ್ಪುಹಂದಿ ಕರಡಿ ಸಿಂಹ
ಇರುವೆ ಅಳಿಲು ಮೊಲ…
ತಬ್ಬಿ ಮುದ್ದಿಸುವ ಆಸೆ ಬೆಟ್ಟದಷ್ಟಿದೆ

ಹೌದು
ಇಂತಹ ಆಸೆಗಳೇ ವ್ರಣವೆಂದು
ಒಪ್ಪಿಕೊಳ್ಳಲೇಬೇಕು
ದೂರ ತೊಲಗಬೇಕು
…ಅಸಹಾಯಕ ; ಆದರೆ
ಉಪದ್ರವಿ ‘ಮನುಷ್ಯ’ ನಾನು!


One thought on “ವಿಜಯಶ್ರೀ ಎಂ. ಹಾಲಾಡಿ ಕವಿತೆ ಮನುಷ್ಯ

Leave a Reply

Back To Top