ಅಂಕಣ ಸಂಗಾತಿ

ಅಮೃತ ವಾಹಿನಿಯೊಂದು

ಅಮೃತಾ ಮೆಹೆಂದಳೆ

ಖಾಲಿ ಪುಟವನ್ನೂ ಆಕ್ರಮಿಸಿಕೊಂಡೆಯಲ್ಲಾ..

ಸವತಿಯು ಅಲ್ಲ ವೈರಿಯು ಅಲ್ಲ

ನನ್ನ ಮುರಳಿಯ ಮೋಹಿಪರೆಲ್ಲ..

     ಆ ರಾಧೆ ಕೃಷ್ಣನ ಕೊಳಲಿನ ಮೇಲೆ ಅಸೂಯೆ ಪಟ್ಟ ಹಾಗೆ ನೀನೂ ಯಾಕೆ ನನ್ನ ಪ್ರೀತಿಯ ಡೈರಿ, ನೀಲಿ ಜೆಲ್ ಪೆನ್ ನೋಡಿ ಸವತಿಯನ್ನು ನೋಡಿದ ಹಾಗೆ ಮುಖ ದುಮ್ಮಿಸಿಕೊಳ್ಳೋದು? ಅದೇನು ಮಾಡಿದೆ ನಿಂಗೆ? ನನ್ನ ಮನಸ್ಸಿನ ಸಂಕಟ, ನೋವು, ಹತಾಶೆ, ನಗು, ಸಂಭ್ರಮ, ಗೆಲುವು ಎಲ್ಲವನ್ನೂ ಕವನ, ಕಥೆ, ಸಾಲುಗಳ ರೂಪದಲ್ಲಿ ತನ್ನೊಳಗೆ ಬಚ್ಚಿಟ್ಟುಕೊಂಡು ಯಾರಿಗೂ ಹೇಳದೆ, ಯಾರಲ್ಲೂ ಗಾಸಿಪ್ ಮಾಡಿದೆ ಮುದ್ದಾಗಿ ನನ್ನ ಟೇಬಲ್ ನ ಮೂಲೆಲಿ ಮುದುಡಿ ಕೂತಿರತ್ತಲ್ಲ. ಅಫ್ಕೋರ್ಸ್, ಅದರಲ್ಲಿನ ಸಾಲುಗಳು ಪ್ರಕಟವಾದಾಗ ಮೆಚ್ಚುವ ಹೆಣ್ಣುಗಳಿದ್ದಾರೆ. ಹಾಗೆಂದು ಅದೇನು ನಿನ್ನ ಶತ್ರುವಾ!!

ಅದರೊಡನೀ ಛಲವೇನೇ…

ಇನ್ನಾರನ್ನೋ ನಾ ಬಣ್ಣಿಸಿರಬಹುದು. ಯಾವುದೋ ಕಲ್ಪನೆಯನ್ನು ಕಥೆ ಕಟ್ಟಿರಬಹುದು. ಮತ್ತೊಂದು ಹೆಣ್ಣು ಪಾತ್ರವನ್ನು ಜರಿದಿರಬಹುದು. ಆದರೆ ಅದೆಲ್ಲ ನಿನಗಲ್ಲ ಮತ್ತು ನಿನ್ನನ್ಯಾರೂ ದೂರಿಲ್ಲವಲ್ಲ!

ಕರೀ ತೇರಿ ಕೌನ್ ಬುರಾಯಿ.. 

ಅರಿಯೆನು ಎಂದು ನಟಿಸುವ ಜಾಣೆ

ಕಹಾ ಛುಪಾಯಿ ಪರ್ ನಾ ಬತಾಯೆ

ಆಡುವೆ ಸುಮ್ಮನೆ ಏಕೆ ನನ್ನಾಣೆ..

      ಆಹಾ! ಕದ್ದು ಓದುವುದಲ್ಲದೆ ಮುಚ್ಚಿಟ್ಟು ಕಾಡುವುದು ಬೇರೆ. ಏಕೆ ಕೇಳಿದ್ದರೆ ನಾನೇ ನನ್ನ ಕವಿತೆಗಳನ್ನೆಲ್ಲ ನಿನಗೇ ಕೊಟ್ಟುಬಿಡಲ್ವಾ? ಮನಸ್ಸನ್ನೇ ಕೊಟ್ಟ ಮೇಲೆ ಡೈರಿ ಯಾವ ಮಹಾ? ನಿನ್ನಿಂದ ಮುಚ್ಚಿಡುವಂಥ ಖಾಸಗಿತನವಾದರೂ ನನಗೇನಿದೆಯೇ ಹೆಣ್ಣೇ! ಅಥವಾ ನಿನ್ನ ಸಮಯದಲ್ಲಿ ಅದಕ್ಕೊಂದಷ್ಟು ಕೊಟ್ಟುಬಿಟ್ಟೆ ಎಂದು ಹುಸಿಮುನಿಸಿನಿಂದ ನೀನಾಡುತ್ತಿರುವ ಆಟವಾ ಇದು?

ನಿಸ್ ದಿನ್ ತೇರೆ ಗೀತ್ ಸುನಾಯೆ

ರಾಧಾ ರಾಧಾ ಎನ್ನುತ ಕರೆದು..

ನಾನೇನೇ ಯೋಚಿಸಲಿ, ಏನೇ ಭಾವಿಸಲಿ, ಏನಾದರೂ ಬರೆಯಲಿ ಎಲ್ಲದರಲ್ಲೂ ನೀನೇ ಇರುವವಳಲ್ಲವೇನೇ. ಬರೆಯದೇ ಬಿಟ್ಟ ಖಾಲಿ ಪುಟಗಳನ್ನೂ ಆಕ್ರಮಿಸಿಕೊಂಡವಳಲ್ಲವೇನೇ. ನಿನ್ನ ಹೆಸರನ್ನೇ ಜಪಿಸುತ್ತ ನನ್ನ ಪಾತ್ರಗಳಿಗೂ ಅದೇ ಹೆಸರನ್ನಿಟ್ಟು ಪೆಚ್ಚಾದವ ನಾನಲ್ಲವಾ. ಇನ್ನೇನು ನಿನ್ನ ಕೊರಗು? ಬಿಡು ಈ ಹಟ, ಕೊಟ್ಟುಬಿಡು ಆ ಪುಟ. ಸಾಕಿನ್ನು ತುಂಟಾಟ..

ನಿನ್ನ ವಿನೋದವಿದೇನೆ ಇದೇನೆ

ರಾಧಿಕೆ ನಿನ್ನ ಸರಸವಿದೇನೇ..


 ಅಮೃತಾ ಮೆಹೆಂದಳೆ

ಅಮೃತಾ ಮೆಹೆಂದಳೆ ಅವರು ಮೂಲತಃ ಬೆಂಗಳೂರಿನವರು. ಪತಿ ಲೇಖಕ ಸಂತೋಷ್ ಮೆಹೆಂದಳೆ ಮತ್ತು ಮಗಳು ಸಂಜೀವಿನಿಯೊಂದಿಗೆ  ಕಾರವಾರದ ಕೈಗಾದಲ್ಲಿ ವಾಸ. ಇವರು ವಾಣಿಜ್ಯ ಪದವೀಧರೆ, ಕನ್ನಡ ಸ್ನಾತಕೋತ್ತರ ಪದವೀಧರೆ. ವೃತ್ತಿಯಲ್ಲಿ ಅಕೌಂಟೆಂಟ್, ಕನ್ನಡ ಟ್ಯೂಟರ್, ಶಿಕ್ಷಕಿ, ಸ್ವ ಉದ್ಯೋಗಿಯಾಗಿ ಅನುಭವವುಳ್ಳವರು.

   ಇವರ ನೂರಾರು ಹನಿಗವನಗಳು, ಲೇಖನ, ಕವನ, ಕಥೆಗಳು ನಾಡಿನ ಪ್ರಮುಖ ಪತ್ರಿಕೆಗಳಾದ ಸುಧಾ, ತರಂಗ, ಮಯೂರ, ತುಷಾರ, ಹಾಯ್ ಬೆಂಗಳೂರು, ಓ ಮನಸೇ, ವಿಜಯ ಕರ್ನಾಟಕ, ವಿಜಯವಾಣಿ, ವಿಶ್ವವಾಣಿ, ಹೊಸ ದಿಗಂತ, ಕರ್ಮವೀರ, ಕನ್ನಡಪ್ರಭ , ಸಖಿ, ಉತ್ಥಾನ, ಕರಾವಳಿ ಮುಂಜಾವು ಮುಂತಾದ  ಪತ್ರಿಕೆಗಳಲ್ಲಿ ಪ್ರಕಟವಾಗಿವೆ.

  ಭಾರತೀಯ ಕರ್ನಾಟಕ ಸಂಘ,ಬೆಂಗಳೂರು, ಸಂಕ್ರಮಣ ಸಾಹಿತ್ಯ, ವಿಶ್ವ ಕನ್ನಡಿಗ ಪತ್ರಿಕೆ, ಕಾಸರಗೋಡು ಕನ್ನಡ ಸಂಘ ಮೊದಲಾದ ಸಾಹಿತ್ಯ ಸ್ಪರ್ಧೆಗಳಲ್ಲಿ ಬಹುಮಾನ ಬಂದಿದೆ.

    2003 ರಲ್ಲಿ ” ಮೌನದ ಮಾತುಗಳು” ಕವನ ಸ0ಕಲನ ಪ್ರಕಟವಾಗಿದೆ. 2017 ರಲ್ಲಿ ” ಹನಿಯೆಂಬ ಹೊಸ ಭಾಷ್ಯ ” ಹನಿಗವನ ಸಂಕಲನ  ಪ್ರಕಟವಾಗಿದ್ದು, ” ಚೇತನಾ” ಸಾಹಿತ್ಯ ಪ್ರಶಸ್ತಿ, ” ಅಡ್ವೈಸರ್” ಸಾಹಿತ್ಯ ಪ್ರಶಸ್ತಿಗಳಿಗೆ ಭಾಜನವಾಗಿದೆ. ವಿದ್ಯಾರ್ಥಿ ಜೀವನದಲ್ಲಿ ಸಹಪಾಠಿಗಳೊಂದಿಗೆ ಸೇರಿ ಬರೆದ ” ಪರೀಕ್ಷಾ ಪದ್ಧತಿ” ಎಂಬ ಪುಸ್ತಕ ಪ್ರಕಟವಾಗಿದೆ. ಸಾಹಿತ್ಯ ಅಕಾಡೆಮಿಗಾಗಿ “ಕವಿತೆ ೨೦೧೯”  ಸಂಪಾದಿತ ಕೃತಿ ೨೦೨೧ ರಲ್ಲಿ ಬಿಡುಗಡೆಯಾಗಿದೆ. ೨೦೨೨ ರಲ್ಲಿ ” ಒಂದು ಹನಿ ಮೌನ” ಹನಿಗವನ ಸಂಕಲನ ಹೊರಬಂದಿದೆ.

ಅಮೃತಾ ಅವರಿಗೆ ಕನ್ನಡ ಭಾಷೆ-ಸಾಹಿತ್ಯ, ಭಾಷಾಂತರ,  ಪ್ರವಾಸದಲ್ಲಿ 

Leave a Reply

Back To Top