ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಇತರೆ

ಗೌರವಾನ್ವಿತ ಪ್ರಶಸ್ತಿಗೆ ಬಿ.ಎನ್.ಮಲ್ಲೇಶ್ ಆರ್ ಜಿ ನಾಗರಾಜ್

ರಾಜ್ಯದ ಪತ್ರಕರ್ತರ ಪ್ರಾತಿನಿಧಿಕ ಸಂಸ್ಥೆ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ (ಕೆಯುಡಬ್ಲ್ಯೂಜೆ) ಪ್ರತಿಭಾನ್ವಿತ ಪತ್ರಕರ್ತರಿಗೆ ಪ್ರತಿ ವರ್ಷ ಕೊಡಮಾಡುವ ಪ್ರಶಸ್ತಿಗೆ ಜಿಲ್ಲೆಯ ಹಿರಿಯ ಪತ್ರಕರ್ತ ಸಾಹಿತಿ ಬಿ ಎನ್ ಮಲ್ಲೇಶ್ ಭಾಜನರಾಗಿದ್ದಾರೆ . ಅಲ್ಲದೆ ಮೂಲತಃ ದಾವಣಗೆರೆ ತಾಲೂಕಿನ ರಾಮಗೊಂಡನ ಹಳ್ಳಿಯವರಾದ ನಾಡಿನ ಹಿರಿಯ ಪತ್ರಕರ್ತ ಸಾಹಿತಿ ಆರ್ ಜಿ ಹಳ್ಳಿ ನಾಗರಾಜ್ ಅವರಿಗೂ ಪ್ರಶಸ್ತಿ ದೊರೆತಿದೆ ಎಂದು ಸಂಘದ ಜಿಲ್ಲಾಧ್ಯಕ್ಷ ಇ ಎಂ ಮಂಜುನಾಥ್ ತಿಳಿಸಿದ್ದಾರೆ. ಪತ್ರಿಕೋದ್ಯಮ ಕ್ಷೇತ್ರದ ವಿವಿಧ ವಿಭಾಗಗಳ ಸಾಧಕರಿಗೆ ನಾಡಿನ ಅನೇಕ ಮಹನೀಯರ ಹೆಸರಿನಲ್ಲಿ ಒಟ್ಟು 21 ದತ್ತಿ ಪ್ರಶಸ್ತಿಗಳನ್ನು ಪ್ರತಿ ವರ್ಷ ನೀಡಲಾಗುತ್ತಿದ್ದು, 2023ನೇ ಸಾಲಿನ ಪ್ರಶಸ್ತಿಗಳಿಗೆ ಬಿ ಎನ್ ಮಲ್ಲೇಶ್ ಮತ್ತು ಆರ್ ಜೆ ಹಳ್ಳಿ ನಾಗರಾಜ್ ಆಯ್ಕೆಯಾಗಿದ್ದಾರೆ.

ಪತ್ರಿಕೋದ್ಯಮ ಕ್ಷೇತ್ರದಲ್ಲಿ ಗಣನೀಯವಾಗಿ ಸೇವೆ ಸಲ್ಲಿಸುತ್ತಿರುವ ನಾಡಿನ ಹಿರಿಯ ಪತ್ರಕರ್ತರಿಗೆ ಗೌರವ ಪೂರ್ವಕವಾಗಿ ಕೊಡ ಮಾಡುವ “ನಾಡಿಗೇರ ಕೃಷ್ಣರಾಯ”ರ ಪ್ರಶಸ್ತಿಯನ್ನು ಬಿ ಎನ್ ಮಲ್ಲೇಶ್ ಅವರಿಗೂ “ನಾಡಪ್ರಭು ಕೆಂಪೇಗೌಡ” ಪ್ರಶಸ್ತಿಯನ್ನು ಆರ್ ಜಿ ಹಳ್ಳಿ ನಾಗರಾಜ್ ಅವರಿಗೂ ನೀಡಲಾಗಿದೆ

ಬಿ ಎನ್ ಮಲ್ಲೇಶ್ ಅವರು ರಾಜ್ಯ ಸರ್ಕಾರದ ಕರ್ನಾಟಕ ಮಾಧ್ಯಮ ಅಕಾಡೆಮಿ ಪ್ರಶಸ್ತಿ, ಅಮ್ಮ ಸಾಹಿತ್ಯ ಪ್ರಶಸ್ತಿ ಗುಲ್ಬರ್ಗ, ಮಹಾಲಿಂಗ ರಂಗ ಪ್ರಶಸ್ತಿ ದಾವಣಗೆರೆ, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪಡೆದುಕೊಂಡಿರುವುದನ್ನು ಇಲ್ಲಿ ಸ್ಮರಿಸಬಹುದು .

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಅವರು ಬೆಂಗಳೂರಿನಲ್ಲಿ ಇಂದು ನಡೆದ ಪತ್ರಿಕಾಗೋಷ್ಠಿಯಲ್ಲಿ ಪ್ರಶಸ್ತಿಗಳ ವಿಜೇತರ ಪಟ್ಟಿಯನ್ನು ಬಿಡುಗಡೆ ಮಾಡಿದರು.

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದಿಂದ ಬರುವ ಫೆಬ್ರವರಿ ೪ ಮತ್ತು ೫ ರಂದು ವಿಜಯಪುರದಲ್ಲಿ ಏರ್ಪಾಡಾಗಿರುವ 37ನೇ ರಾಜ್ಯಮಟ್ಟದ ಪತ್ರಕರ್ತರ ಸಮ್ಮೇಳನದಲ್ಲಿ ಸಾಧಕರಿಗೆ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಗುತ್ತದೆ ಎಂದು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎ ಫಕ್ರುದ್ದೀನ್ ತಿಳಿಸಿದ್ದಾರೆ.

ಪ್ರಶಸ್ತಿ ವಿಜೇತರನ್ನು ಸಂಘದ ರಾಜ್ಯ ಘಟಕದ ಸದಸ್ಯ ಕೆ ಚಂದ್ರಣ್ಣ, ಜಿಲ್ಲಾಧ್ಯಕ್ಷ ಇ ಎಂ ಮಂಜುನಾಥ, ಪ್ರಧಾನ ಕಾರ್ಯದರ್ಶಿ ಎ ಫಕ್ರುದ್ದೀನ್, ಜಿಲ್ಲಾ ಖಜಾಂಚಿ ಎಂ ವಿ ಬದರಿನಾಥ್ ಅಭಿನಂದಿಸಿದ್ದಾರೆ.


About The Author

Leave a Reply

You cannot copy content of this page

Scroll to Top