ಕಾವ್ಯ ಸಂಗಾತಿ
ಇರುವೆ
ಅಕ್ಷತಾ ಜಗದೀಶ
ಪರಿಶ್ರಮದ ಹಾದಿಯದು
ಸಂಘರ್ಷವಿಲ್ಲದ ಪಯಣ
ಗರ್ವವಿಲ್ಲ…
ಎಲ್ಲಿಯೂ ನಿರಾಸೆಯಿಲ್ಲ
ತಾ ಮೊದಲು ಎನ್ನುವ
ತಾರತಮ್ಯವಿಲ್ಲ…
ನಾವೆಲ್ಲರೂ ಒಂದೆಂಬ
ಇರುವೆಯದು
ಎಲ್ಲರೊಳು ಒಂದಾಗಿರುವ
ಸಂಘಜೀವನ…
ಇರುವೆ ,ಇರುವೆಯೇ ನೀ ಹೀಗೆ
ಶಿಸ್ತಿನ ನಡೆಯಲಿ,
ಅಂತರವಿಲ್ಲದ ಬಾಳಲಿ
ನಲಿದಾಡುವೆ
ನಿನ್ನದೇ ಒಂದು ಲೋಕದಲ್ಲಿ..
ಸಾರ್ಥಕತೆಯೊಂದಿಗೆ ಸಾಗಿದೆ
ನಿನ್ನವರೊಡನೆ ನಿನ್ನ ಯಾನ..
ನಿನ್ನ ಬದುಕೆ ಒಂದು ಸೊಜಿಗ
ನೆಲದಡಿಯಲ್ಲಿ ಕೊರೆವೆ ಸುರಂಗ
ಗಾತ್ರ ಚಿಕ್ಕದಾದರು
ಸಮೂಹ ಜೀವನಕ್ಕೆ
ಪರಿಶ್ರಮದ ಬದುಕಿಗೆ ಹೆಸರಾದೆ
ಸಕ್ಕರೆನೋಡಿ ಓಡಿಬರುವ
ಓ ಇರುವೆಯೇ..
ನಿನ್ನ ಶ್ರಮಕ್ಕೆ ಮರುಳಾದೆ..
ಶಿಸ್ತಿನ ಸೀಪಾಯಿಗಳಂತೆ
ನಿಮ್ಮ ನಡಿಗೆ….
ಎಲ್ಲೆಂದರಲ್ಲಿ ನೀ ಕಾಣಸಿಗುವೆ
ನಿನ್ನಿಂದ ಕಲಿಯಬೇಕು
ಒಗ್ಗಟ್ಟಿನಲ್ಲಿಯ ಬಲ
ನಿಸ್ವಾರ್ಥ ಬದುಕಿಗೆ
ನಿನೊಂದು ಮಾದರಿ..
ಪುಟ್ಟ ಪುಟ್ಟ ಇರುವೆಯೇ
ನಿನಗೆ ನನದೊಂದು ಸಲಾಂ….