ದೇವರಾಜ್ ಹುಣಸಿಕಟ್ಟಿಕವಿತೆ-ಕಣ್ಣಾಲೆಗಳು ತುಂಬಿ ಬರ್ತಾವ್

ಕಾವ್ಯ ಸಂಗಾತಿ

ಕಣ್ಣಾಲೆಗಳು ತುಂಬಿ ಬರ್ತಾವ್

ದೇವರಾಜ್ ಹುಣಸಿಕಟ್ಟಿ

ಕಣ್ಣಾಲೆಗಳು ತುಂಬಿ ಬರ್ತಾವ್
ಯಾಕಾಗಿ ಗೊತ್ತಿಲ್ಲ…

ಒಂದಿಷ್ಟು ದುಃಖ
ಅನ್ನಲಾರದ ದುಃಖ
ಮೈಯಡರಿ ನೆನಪ
ಹಡೆವಾಗ….
ಹೃದಯದ ಗಿರಿ ಶಿಖರ
ತೀರದ ನೋವು ಮುಡಿವಾಗ…!
ಮತ್ತೆ ಮತ್ತೆ ಜಗದ ಸಂತಿಯೊಳಗೆ
ಏಕಾಂತ ಕಾಡಿ ಎದೆ ಗಡಲ ಕಡಿವಾಗ…

ಕಣ್ಣಾಲೆಗಳು ತುಂಬಿ ಬರ್ತಾವ್
ಯಾಕಾಗಿ ಗೊತ್ತಿಲ್ಲ…

ಒಮ್ಮೊಮ್ಮೆ ಈ
ಸಂಜಿ ತಣ್ಣಗೆ ಮುತ್ತಿ ಮುತ್ತಿಕ್ಕುವಾಗ…
ಕಣ್ಣ ಕಡಲೊಳಗಿನ ಮೌನದ ಹಾಯಿದೋಣಿ ಮೈ ಚಾಚಿ ಅಪ್ಪುವಾಗ…
ಜೀವಕ್ಕೆ ಅಚಾನಕ್ ಅನಸ್ತೇಶಿಯಾ
ಕೊಟ್ಟಂಗಾಗಿ…
ನಡು ನೀರಿನಲ್ಲಿ ಒಂದು ಕಿರು ಬೆರೆಳ ಹಿಡಿದ ಆಸರೆ ಕೈ ಬಿಟ್ಟಂಗಾಗಿ….
ಜೀವ ಮಣ್ಣೊಳಗ ಮಣ್ಣಾಗೋದ ಬಯಸುವಾಗ…

ಕಣ್ಣಾಲೆಗಳು ತುಂಬಿ ಬರ್ತಾವ್
ಯಾಕಾಗಿ ಗೊತ್ತಿಲ್ಲ.

ಸಂಕಟ ಗಡಿಯಿಲ್ಲದೆ ಬಿಕ್ಕುವಾಗ
ಯಾತನೆ ಮಡಿಯಿಲ್ಲದೆ ಬಿಗಿದಪ್ಪುವಾಗ….
ವರ್ಷ ಉರಳಿ ಹರ್ಷ ಕಳೆದು
ಕೊಟ್ಟು ಪಡೆದಿದ್ದುಬರೀ ಬರೀ ಇಷ್ಟ
ಅಷ್ಟಷ್ಟ………
ಅಸ್ಪಷ್ಟ ಸ್ಪಷ್ಟ ಆದಂಗ್….

ಕಣ್ಣಾಲೆಗಳು ತುಂಬಿ ಬರ್ತಾವ್
ಯಾಕಾಗಿ ಗೊತ್ತಿಲ್ಲ…


Leave a Reply

Back To Top