ಒಮ್ಮೆಯಷ್ಟೇ ಕೊಂದವಳಿಗೆ ಒಂದು ಪತ್ರ-ಪದ್ಯಪಾನಿ

ಕಾವ್ಯ ಸಂಗಾತಿ

ಪದ್ಯಪಾನಿಯವರ ಕವಿತೆ

ಒಮ್ಮೆಯಷ್ಟೇ ಕೊಂದವಳಿಗೆ ಒಂದು ಪತ್ರ

ತಮ್ಮ ಹೆಸರು ಮತ್ತು ಭಾವಚತ್ರಗಳನ್ನು ಪ್ರಕಟಿಸದಂತೆ ಕೋರಿಕೊಂಡ ಪದ್ಯಪಾನಿಯವರು ನಮಗೂ ತಮ್ಮ ಗುರುತುಬಿಟ್ಟು ಕೊಡದೆ ಮಿಂಚಂಚೆಯ ಮೂಲಕ ತಮ್ಮ ಕವಿತೆ ಕಳಿಸುತ್ತಿದ್ದಾರೆ

ಗೆಳತಿ
ನೀನು ಬರುವುದಾದರೆ ತಿರುಗಿ ಬಂದುಬಿಡು
ಇರುವ ಕಲೆಗಳೆಲ್ಲ ನಿನ್ನದೇ ಹೆಸರನ್ನು ಉಸುರುತ್ತಿವೆ
ಆಯುಧಗಳೂ ನಿನ್ನವೇ

ನೋಡು ಈ ದೇಹದಲಾದ ಮಾಯದ ಗಾಯಗಳ
ಬೆನ್ನ ಮೇಲಿನ ಕಲೆ ತಲೆಯ ಮೇಲಿನ ಕಲೆ
ಎದೆಯ ಮೇಲೂ
ಬಿಡು ಎಲ್ಲವನು ಕಂಡವಳು ನೀನೊಬ್ಬಳೇ

ನನ್ನ ಕಂಡು
ಹೊರಗಿನ ಮಂದಿ ಹುಚ್ಚನೆಂದರೂ
ಕಾಣಲಾರದೆ ಹೋದರು
ಬೆನ್ನ ಮೇಲಿನ ಕಲೆ ತಲೆಯ ಮೇಲಿನ ಕಲೆ
ನೀನೆ ಮಾಡಿದ ಎದೆಯ ಮೇಲಿನ ಕಲೆಯನೂ
ನಿನ್ನನ್ನೂ !


Leave a Reply

Back To Top