ಕಾವ್ಯ ಸಂಕ್ರಾಂತಿ
ಸಂಕ್ರಮಣ
ಅಕ್ಷತಾ ಜಗದೀಶ
ಮನೆಯಂಗಳದ ತುಂಬ
ನಗುತಲಿದೆ ರಂಗವಲ್ಲಿ
ಮರೆಯಾಗಲಿ ಜಡತ್ವದ ಚಳಿ
ನವುಲ್ಲಾಸಕ್ಕೆ ಸ್ವಾಗತ ಹೇಳಿ
ಸುಗ್ಗಿ ಸಂಭ್ರಮದ ಈ ಕ್ಷಣ
ಬದುಕಿಗೆ ಹೊಸ ರೂಪ ನೀಡೋಣ….
ವರ್ಷದ ಮೊದಲನೇ ಹಬ್ಬ
ಎಲ್ಲೆಡೆ ಸಡಗರ ಸಂಭ್ರಮ
ಉತ್ತರಾಯಣದೆಡೆಗೆ
ಸೂರ್ಯದೇವನ ಪಯಣ
ಎಳ್ಳು ಬೆಲ್ಲವ ಸವಿದು
ಸಂಭ್ರಮಿಸೋಣ ಸಂಕ್ರಮಣ…
ಮಣ್ಣಿನ ಮಕ್ಕಳ ಸುಗ್ಗಿಯ ಸಂಭ್ರಮ
ಸಹೋದರತೆ ,ಸಹಬಾಳ್ವೆಗೆ ಮಾದರಿ
ಭಾವೈಕ್ಯತೆಯ ಹರಡಿದೆ ಸಂಕ್ರಾಂತಿ
ಸನಾತನ ಸಂಸ್ಕೃತಿಯ ಸಾರುತಲಿ
ರಥ ಸಪ್ತಮಿಯ ಪಥದಿ ಸೂರ್ಯನು…
ಪುಣ್ಯ ಸ್ನಾನದಲಿ ಪಾಪಾಕಳೆಯಲಿ
ಹೊಸ ತನದ ಕಿರಣವು
ಬದುಕಿಗೆ ದಾರಿ ದೀಪವಾಗಲಿ
ಮಾಗಿದ ಮನವನು ಹಸಿರಾಗಿಸಿ
ನವ ಕನಸುಗಳಿಗೆ ಉಸಿರಾಗಿ
ಮರಳಿ ಬಂದಿದೆ ಸಂಕ್ರಾಂತಿ…
ಅಕ್ಷತಾ ಜಗದೀಶ