ಇಮಾಮ್ ಮದ್ಗಾರ-ನಾನೇನು ಮಾಡಲಿ(ಪಿಸುಮಾತು)

ಕಾವ್ಯಸಂಗಾತಿ

ನಾನೇನು ಮಾಡಲಿ(ಪಿಸುಮಾತು)

ಇಮಾಮ್ ಮದ್ಗಾರ

ಭಾವಗಳನ್ನೆಲ್ಲಾ ಸಾರಾಯಿಗ್ಲಾಸಿನಲ್ಲಿ ಬೆರೆಸಿ ಒಂದೇಗುಟುಕಿಗೆ ಗುಟುಗಿಸಬಲ್ಲೇ ನೀನು ನಾನೇನುಮಾಡಲಿ

ನೋವುಗಳನ್ನೇಲ್ಲಾ ಸೇರಿಸಿ ಬಿಳಿಯಹಾಳೆಯ ನಡುವಿನ ತಂಬಾಕಿನಲ್ಲಿಟ್ಟು ಸುಟ್ಟುಬಿಡಬಲ್ಲೆ ನೀನು ನಾನೇನು ಮಾಡಲಿ

ಕನಸುಗಳನ್ನೆಲ್ಲಾ ಕಟ್ಟಿಹಾಕಿ ಮದಿರೆಯೊಂದಿಗೆ ಮೈತ್ರಿಯಾಗಿ ನಶೆಯಮಲಿನಲ್ಲಿ ನಿದಿರಿಸುವೆ ನೀನು ನಾನೇನು ಮಾಡಲಿ

ಮನಸಿನೊಂದಿಗೆ ಮುನಿಸಿಕೊಂಡು
ಸಿಗಾರಿನಹೊಗೆಯಲ್ಲಿ ಮನದನೋವು ತೇಲಿಸಬಲ್ಲೆ ನೀನು ನಾನೇನು ಮಾಡಲಿ

ಮೆಲ್ಲ..ಗೆ ನೆನಪುಗಳಮೈಸವರಿ ಮಲಗಿಸಿಬಿಡುವೆ
ವಿರಹಕ್ಕೂ ನಿದ್ದೆತರಿಸುವೆ ಮತ್ತೇರಿಸಿನೀನು
ನಾನೇನು ಮಾಡಲಿ


Leave a Reply

Back To Top