ಕಾವ್ಯ ಸಂಗಾತಿ
ಲೀನವಾದೆವು
ಡಾ ಶಶಿಕಾಂತ ಪಟ್ಟಣ
ಹರಿದು ಹೋಗುವ ತಾಳಿ
ಒಡೆದು ಚೂರಾಗುವ ಬಳೆ
ಒಣಗಿ ಕುಂದುವ ಅರಿಶಿನ
ಕಿತ್ತು ಕೊಳ್ಳುವ ಚಿನ್ನ ರನ್ನ
ಕಿವಿ ಮೂಗು ಓಲೆ ನತ್ತು
ಕಾಲು ಉಂಗುರ ಗೆಜ್ಜೆ
ನಿನ್ನ ಕೊರಳಿಗೆ ಹಾಕಿರುವೆ
ಭಾವ ಶಬ್ದಗಳ ಮಾಲೆ
ಇಟ್ಟಿರುವೆ ನಿನ್ನ
ಕಿರು ಬೆರಳಿಗೆ ಮುತ್ತಿನ ಉಂಗುರ
ಕಳಚಿ ಭವ ಬಂಧನವ
ಲೀನವಾದೆವು ಮತ್ತೆ ಬಯಲಲಿ
ಮಧುರ ಭಾವಗಳ ಕವನ ಮಾಲೆ