ಕಾವ್ಯ ಸಂಗಾತಿ
ಕಳೆದು ಹೋಗಬೇಕು ನಾನು !!
ಕಾಡಜ್ಜಿ ಮಂಜುನಾಥ
ಕಳೆದು ಹೋಗಬೇಕು ನಾನು
ಆಸೆಗಳ ಮುಂದೆ
ಪರಿಣಾಮ ಅರಿತುಕೊಳ್ಳಲು !!
ಕಳೆದು ಹೋಗಬೇಕು ನಾನು
ಕನಸುಗಳ ಮುಂದೆ
ವಾಸ್ತವ ಅರಿತುಕೊಳ್ಳಲು !!
ಕಳೆದು ಹೋಗಬೇಕು ನಾನು
ಅಕ್ಷರಗಳ ಮುಂದೆ
ಅಜ್ಞಾನವ ಅಳಿಸಿ ಕೊಳ್ಳಲು !!
ಕಳೆದು ಹೋಗಬೇಕು ನಾನು
ಮನಸುಗಳ ಮುಂದೆ
ಸತ್ಯ ಮನಗಳ ತಿಳಿಯಲು!!
ಕಳೆದು ಹೋಗಬೇಕು ನಾನು
ಮೋಹದ ಕಣ್ಗಳ ಮುಂದೆ
ಪ್ರೀತಿಯ ಅರಿಯಲು !!
ಕಳೆದು ಹೋಗಬೇಕು ನಾನು
ಸಮಾಜದ ಟೀಕೆಗಳ ಮುಂದೆ
ಸತ್ಯದಾದಿಯ ತುಳಿಯಲು!!
ಕಳೆದು ಹೋಗಬೇಕು ನಾನು
ಸಂಕಷ್ಟದ ಜನರ ಮುಂದೆ
ಖುಷಿಯ ಹುಡುಕಲು !!
ಕಳೆದು ಹೋಗಬೇಕು ನಾನು
ಪುಸ್ತಕಗಳ ಮುಂದೆ
ಶ್ರೇಷ್ಠ ಜ್ಞಾನವ ಪಡೆಯಲು !!
ಕಳೆದು ಹೋಗಬೇಕು ನಾನು
ಜಾತಿ ಧರ್ಮಗಳ ಮುಂದೆ
ನಿಸರ್ಗದ ಮಾನವನಾಗಲು !!
Excellent…. Keep it up dear