ಅನುವಾದ ಸಂಗಾತಿ
ಪ್ರಪಂಚವನ್ನು ಓದಿದಾಗ….!?.
ಮಲಯಾಳಂ ಮೂಲ: ಸುನಿಲ್
ಕನ್ನಡ ಅನುವಾದ:ಐಗೂರು ಮೋಹನ್ ದಾಸ್, ಜಿ.
ವಂಚಿಸಿದ ‘ಪ್ರಣಯ’ವು
ಒಂಟಿಯಾಗಿ ಬದುಕುವಂತೆ
ಮಾಡಿದ ದುರಂತ ಬಾಳಿಗೆ
ಬೇಲಿ ಹಾಕಿದಾಗ….
ನೊಂದ ಹೆಣ್ಣು
‘ಆಕಾಶ’ವನ್ನು ನೋಡುತ್ತಾ
ಪ್ರಪಂಚವನ್ನು ಓದಿದ್ದಳು…!
ಕಲ್ಲು ಹೃದಯದ ‘ಮಕ್ಕಳು’
ಒಂಟಿಯಾಗಿ ಬದುಕುವಂತೆ
ಸಂಬಂಧಗಳಿಂದ ದೂರ ಮಾಡಿದಾಗ…
ಪಾಪ ಜನ್ಮದ ‘ಮಹಾತಾಯಿ’
ತನ್ನ ಹೊಟ್ಟೆಯ ಮೇಲೆ
ಆಳಿಸಿ ಹೋಗದ ಹಲವು
‘ ಗೆರೆ’ಗಳನ್ನು ನೋಡುತ್ತಾ
ಪ್ರಪಂಚವನ್ನು ಓದಿದ್ದಳು…!
ಕೊನೆಯ ದಿನದ
‘ನಿರೀಕ್ಷೆ’ಯಲ್ಲಿ
ತಂಪುವಾದ ‘ಗಾಳಿ’ಯನ್ನು
ನೋಡುತ್ತಾ……
ಒರ್ವ ‘ಅಸ್ಪತ್ರೆ’ಯ
‘ಕಿಟಕಿ’ಗಳ ಮೂಲಕ
ಪ್ರಪಂಚವನ್ನು ಓದಿದ್ದ…!
ಓದು ಮುಗಿದ ಮೇಲೆ…..,
ಬರ ಹಿಡಿದಿದ್ದ ‘ಸ್ತನ’ಗಳಲ್ಲಿ
ಸಣ್ಣ ಮಳೆ…!
ಒಣಗಿದ ಹೊಟ್ಟೆಯ
ಮೇಲೆ ನೋವಿನ ಬೆವರು…!
ಕತ್ತರಿಸಿದ ಹೊಟ್ಟೆಯ
ಗೆರೆಗಳ ಮೇಲೆ….
ಅರಳದ ಕಣ್ಣುಗಳಲ್ಲಿಯೂ
ಬೆಳಕು…!
ಬತ್ತಿ ಹೋಗಿದ್ದ
ಸಮುದ್ರದಲ್ಲಿ
ಅಲೆಗಳ ಸದ್ದು….!!!
ಮಲಯಾಳಂ ಮೂಲ: ಸುನಿಲ್
ಕನ್ನಡ ಅನುವಾದ:ಐಗೂರು ಮೋಹನ್ ದಾಸ್, ಜಿ.
ಐಗೂರು ಮೋಹನ್ ದಾಸ್, ಜಿ.
ಅಬ್ಬಬ್ಬಾ ಏನೀ ದಾರುಣ ಚಿತ್ರಣ !!!!
ಸುಂದರ ಕಲ್ಪನೃ.ಓದುಗರ ಮನವನು ತಣಿಸುವ ಕವಿತೆ.