ಮಮತ (ಕಾವ್ಯ ಬುದ್ಧ) ಕಾವ್ಯ ಭಾವ

ಕಾವ್ಯಸಂಗಾತಿ

ಮಮತ (ಕಾವ್ಯ ಬುದ್ಧ) ಕಾವ್ಯ ಭಾವ

ಕುವೆಂಪು ನಿಮ್ಮ ನಾಮ ಎನಿತು ಕಂಪು
ನಿಮ್ಮ ತಾಣ ಎನಿತು ಇನಿತು ಎನಿತು ತಂಪು
ಸಗ್ಗ ಸುಧೆಯ ಪಾನ ಹೊತ್ತು ತಂದಿದೆ
ಇನಿತು ಇನಿತು ಅದ್ದಿ ಅದ್ದಿ ಅಕ್ಕರ ಮೂಡಿದೆ
ಏನುಭಾವ ಎಂಥ ಮಥಿತ ಆತ್ಮ ಚೇತನ
ಹನಿಹನಿ ಜೀವಸೆಲೆ ರಾಮಾಯಣ ದರ್ಶನ
ಹೊನ್ನಗಿಂಡಿಯ ಅಮೃತ ಸಿಂಚಿನ
ಬರಡು ಜೀವಕೆ ಕಾವ್ಯ ಚೇತನ
ಜಾತಕ ಬಾಯಿ ತೆರೆದು ನಿಮ್ಮ ನಾಮ ಜಪಿಸುತಿದೆ
ಕವನ ಹನಿಯ ಗುಟುಕು ಹೀರಿ ನವ ಚೇತನ
ಬಂದೇ ಬರುವೆನೆಂದು ಕಾದ ಜೀವ ಅರ್ಪಣ
ಕವನ ಸಾಲು ಮೂಡಿ ಮೂಡಿ ಬಿಳಿಯ ಮೋಡವು
ಕಾವ್ಯಕವನ ಎಲ್ಲ ಸೇರಿ ಮಹಾ ಮೋಡವು
ಸುರಿಸಿತು ಜೇನುಮಲೆ ಹನಿಹನಿ ದೊಡ್ಡಹನಿ
ಬೇಧ ಭಾವ ಮೇಲುಕೀಳು ಎಲ್ಲ ಮಾಯವು
ಸವಿಯಿರೆಲ್ಲಾ ಕಾವ್ಯ ಸುಧೆ ನಿರ್ಮಲ ಸಲೀಲಸುಧೆ
ಆಹಾ ಎಂಥ ರುಚಿ ಏನು ಮೋಡಿ ಗೆಜ್ಜೆ ಕುಣಿತ
ಕನ್ನಡಾಂಬೆಯ ಹಾಡಹಾಡಿ ಮುಕಂಕರೋತಿ ವಾಚಲಂ
ಕನ್ನಡ ಮಕ್ಕಳ ಧ್ವನಿ ಕಾಳಿದಾಸ ನಳಿಗೆ
ಅಮರವು ಆತ್ಮಭಾವವು ಕನ್ನಡ ನುಡಿ ಪ್ರೀತಿ
ನಲಿಯಿರಿ ಉಳಿಯಿರಿ ಕುವೆಂಪು ನಾಮಾಮೃತ
ಮಲೆಮಾಲೆಯ ಕುವರ ಕುವೆಂಪು ಎನ್ನುತ ಹಾಡಿರಿ
ಕನ್ನಡಾಂಬೆಯ ಮುಕುಟ ಮಣಿ ಕುವೆಂಪುವ ಕಾಣಿರಿ
ಕನ್ನಡ ಸಿರಿ ಕನ್ನಡ ಸಿರಿ ಎನುತ ಹಾಡಿರಿ


One thought on “ಮಮತ (ಕಾವ್ಯ ಬುದ್ಧ) ಕಾವ್ಯ ಭಾವ

Leave a Reply

Back To Top