ರಾಘವೇಂದ್ರ ಎಸ್‌ . ಎಸ್‌. ಕವಿತೆ-ಶಿಖರದ ಮೌನದಲಿ

ಕಾವ್ಯ ಸಂಗಾತಿ

ಶಿಖರದ ಮೌನದಲಿ

ರಾಘವೇಂದ್ರ ಎಸ್‌ . ಎಸ್‌.

ಹಿಮಾಲಯ ಶಿಖರವು ಹಾಲ್ದೆನೆಯಂತೆ ನಿಂತಿದೆ ಮೌನದಲಿ
ಯಾರಿಗೂ ತಿಳಿಯದು ಅದರ ಅಂತರ್ಯದ ಚಿಲುಮೆ
ಶಿಖರವು ಪ್ರಕೃತಿ ನಿರ್ಮಿತವು ತ್ಯಾಗದ ನೆಲೆಯಾಗಿ
ಮೌನ ವ್ರತಾಚರಣೆಯ ಯೋಗಿಗಳಿಗೆ ಕರುಣೆಯ ಬೀಡಾಗಿದೆ


ಶಿಖರದಲಿ ಅಡಗಿರುವುದು ಸುಪ್ತಾವಸ್ಥೆಯ ಸುಪ್ತಚೇತನ
ನಭವನ್ನು ಚಿಂಬಿಸುವ ಹಾಗೆ ಕಾಣುವುದು ಶಿಖರದ ಹಾದಿ
ಕೋಲ್ಮಿಂಚಿನಂತೆ ಬುವಿಯಲ್ಲಿ ನಡೆಯುವುದು ಅದರ ಚಲನೆ
ಸಾಲುಸಾಲಾಗಿ ಹರಿಯುವುದು ಗಂಗಾಮೃತದ ಚೇತನ
ರಸ – ಋಷಿಗಳಿಗೆ ವೇದ್ಯವಾಗುವುದು ಶಿಖರಾಮೃತದ ಪಾವನ
ದೇಶವಿದೇಶ ಗಡಿಗಳ ರಹದಾರಿಗಳಿಗೆ ರಕ್ಷಾಕವಚ
ಮಾನವ ಜೀವನಕ್ಕೆ ಬುವಿಯಿಂದ ದಿಗಂತದಯೆಡೆಗೆ ಬದುಕಿನ ಕವಚ
ಮೌನಕ್ಕೆ ಶರಣಾದ ಯೋಗಿ , ಭಾವಕ್ಕೆ ಶರಣಾದ ತ್ಯಾಗಿ , ಪ್ರಕೃತಿಗೆ ಶರಣಾದ ಮನುಷ್ಯ , ಜೀವನದ ಅಂತ್ಯದಲ್ಲಿ ಮೌನಕ್ಕೆ ಶರಣಾಗಲೇ ಬೇಕು ನರಮಾನವ, ಶಿಖರದ ಮೌನಕ್ಕೆ ಬೆಲೆಯನ್ನು ನಿರ್ಧರಿಸಲಾಗದು.
ಶಿಖರವು ಮೌನದಲಿ ಸೂಚಿಸುವುದು ಭಾವಾತರಂಗ

——————————-


ಇದಕ್ಕೆ ಸರಿಸಾಟಿ ನಿಲ್ಲಲಾರನು ಮಾನವನ ಅಂತರಂಗ
ಒಟ್ಟಿನಲಿ ಮಾನವನ ಹೃದಯವು ಸ್ಪಂದಿಸಬೇಕು ಮೌನದ ಸಂಕೇತದಲಿ
ಶರಣಾಗಿ …. ಶರಣಾಗಬೇಕು ……. ಪ್ರಕೃತಿಯ ಆರಾಧನೆಯಲಿ

Leave a Reply

Back To Top