ಆಶಾ ಯಮಕನಮರಡಿ ಗಜಲ್

ಕಾವ್ಯ ಸಂಗಾತಿ

ಗಜಲ್

ಆಶಾ ಯಮಕನಮರಡಿ

ಹೊಸ ಬೆಳಕು ಬರುತಿಹುದು ಕತ್ತಲೆಯೇ ದಾರಿ ಬಿಡು
ಆವರಿಸಿದ ತಮವನು ಕಿರಣವೇ ತೂರಿ ಬಿಡು

ನಡೆವವರ ಕಾಲುಗಳಿಗೆ ಏಕೆ ತೊಡಕಾಗುವಿರಿ
ನಿಲ್ಲದಾ ನಡಿಗೆಯಲ್ಲಿ ಗುರಿ ಸೇರಿ ಬಿಡು

ನುಡಿದಂತೆ ನಡೆದರೆ ಎಷ್ಟು ಚೆಂದ ಸಖಿ
ನಿಷ್ಟೆಯಾ ಬದುಕನ್ನು ಬದುಕಿ ತೋರಿ ಬಿಡು

ಅನವರತ ಇಲ್ಲಾರು ಇರಲು ಬಂದಿಲ್ಲಾ ಕೇಳು
ಎಲ್ಲರ ಪರವಾಗಿ ದೇವರಲ್ಲಿ ಕ್ಷಮೆಯ ಕೋರಿ ಬಿಡು

ಜಗದ ನಿಯಮಕ್ಕೆ ತಲೆ ಬಾಗಲೇ ಬೇಕು ಆಶಾ,
ಪಡೆದುದರಲ್ಲಿಯೆ ಸುಖವಿದೆ ಎಂದ ಸಾರಿ ಬಿಡು


Leave a Reply

Back To Top