ಸಂತೆ ಮುಗಿಸಿದ ಸಂತ-ಇಮಾಮ್ ಮದ್ಗಾರ

ಕಾವ್ಯ ಸಂಗಾತಿ

ಇಮಾಮ್ ಮದ್ಗಾರ

ಸಂತೆ ಮುಗಿಸಿದ ಸಂತ

    ಸಂತನಾಗಬೇಕು ಯೋಗಿಯಾಗಬೇಕೆಂದು ಬದುಕಿದವರಲ್ಲ
    ಮನುಷ್ಯನಾಗಬೇಕೆಂದು ತಿಳಿಯಹೇಳಿದವರನ್ನು ಸಂತನನ್ನಾಗಿಸೇ ಬಿಟ್ಟ ದೇವರು

    ನಿರಾಕಾರವೇ ದೈವ ಅನುಭವಿಸು ಅನುಭೂತಿಯ ಭಾವ ಮರೆಯದಿರು ಮನುಷ್ಯತ್ವವ ತೊರೆಯಲೇಬೇಕು ಈ ಭವ ಎನ್ನುತ್ತಲೇ ಸಂತೆ ಮುಗಿಸಿದ ಸಂತ

    ಭಾವನೆಗಳ ದಿಬ್ಬಣದಲಿ ಈ ಭವದ ಜಂಜಡದಲಿ
    ಪದಗಳನೇ ಪುಂಜವಾಗಿಸಿ ವೇದಗಳನೇ ಉಸಿರಾಗಿಸಿ
    ಜಾತಿ ವಿಜಾತಿಗಳ ದೂರೀಕರಿಸಿ
    ಸಕಲರೊಂದೆ ಎಂಬ ಭಾವ ಭೋದಸಿ ಸಂತೆಮುಗಿಸಿದ ಸಂತ

    ಸತ್ಯವೂ ಇಲ್ಲ ಅಸತ್ಯವೂ ಇಲ್ಲ ಸಹಜವೂಇಲ್ಲ ಅಸಹಜವೂ
    ಇಲ್ಲ ನಾನೂಇಲ್ಲ ನೀನೂಇಲ್ಲ ಇಲ್ಲ ಇಲ್ಲ ಎಂಬುದೇ ತಾನಿಲ್ಲ ಗುಹೇಶ್ವರನೆಂಬುದು ತಾ ಬಯಲು ಅಂತ್ಯಃ ಪ್ರಣಾಮಾಂಜಲಿ ಎನ್ನುತ್ತಲೇ ಜಗವನೇ ಅನಾಥವಾಗಿಸಿ ಸಂತೆಮುಗಿಸಿದ ಸಂತ

    ಪಾಮರರು ನಾವು ಅಶ್ರುಗಳನರ್ಪಿಸಬಲ್ಲೆವು ದುಖಃ ತಡೆಯದೇ ..ಮರಳಿಬನ್ನಿ ಮತ್ತೋಮ್ಮೆ ಭವಕೆ ಜಗದದಾರಿಗೆ ಬೆಳಕಾಗಲು ಶರಣು ಶರಣಾರ್ಥಿ..ಶರಣು ಶರಣಾರ್ಥಿ


    ಇಮಾಮ್ ಮದ್ಗಾರ

    Leave a Reply

    Back To Top