ಕಾವ್ಯ ಸಂಗಾತಿ
ಜ್ಞಾನಯೋಗಿಗೆ ಶರಣು
ರೋಹಿಣಿ ಯಾದವಾಡ
ನಡೆದಾಡುವ ದೇವರು ನೀವು
ನಡಿಗೆ ನಿಲ್ಲಿಸಿಬಿಟ್ಟಿರಿ ಇಂದು
ಭಕ್ತ ಜನಸಾಗರವನು ಬಿಟ್ಟು
ಹೋಗುವ ಮನಸೇಕೆ ಮಾಡಿದಿರಿ
ಅಧ್ಯಾತ್ಮದ ಬೆಳಕು ಹರಿಸಿ
ಮನ ಮನಸ್ಸುಗಳ ಬೆಳಗಿಸಿದಿರಿ
ಬಾಳ ಬದುಕಿನ ಪಯಣಕೆ
ಮನದ ನೆಮ್ಮದಿ ಅರುಹಿದಿರಿ
ಬದುಕಿನ ಸಾರ ಪ್ರವಚನದಿ
ಸಾರಿ ಹೇಳಿದಿರಿ ಲೋಕಕೆ
ಬರಿಗೈಲಿ ಬಂದಿರುವ ನಾವು
ಕೊಂಡು ಹೋಗಲೆನಿಲ್ಲವೆಂದಿರಿ
ಸರಳತೆಗೆ ಸಾಕಾರ ಮೂರ್ತಿ
ಜೇಬಿಲ್ಲದ ಅಂಗಿ ಉಟ್ಟು
ಬೇಡೆಂಬ ದೀಕ್ಷೆ ತೊಟ್ಟು
ಬೇಕೆಂಬ ಶಬ್ದವನೆ ಅಳಿದಿರಿ
ಜ್ಞಾನ ಭಂಡಾರದ ಕಣಜ
ಸುಜ್ಞಾನ ಸಾಮ್ರಾಟರು ತಾವು
ಲೋಕ ಬೆಳಗಿಸಿ ಹೊರಟಿರಿ
ಸದ್ದಿಲ್ಲದ ಸುದ್ದಿ ಆಗಿಸಿ
ಜ್ಞಾನಕ್ಕೆ ಹೊನ್ನ ಕಳಸ
ಅಮೃತ ಉಣ ಬಡಿಸಿದ
ದಾಸೋಹ ಮುಕುಟ ಮಣಿ
ಸರ್ವ ಸಮರ್ಪಿತರು ತಾವು
ಇಹದ ಗೊಡವೆಗೆ ಅಂಟದೆ
ಕರೆದಾಗ ಬರುವೆ ಎಂದಿರಿ
ದೇವನ ಅಣತಿಗೆ ಒಪ್ಪುತ
ನಿಶ್ಯಬ್ದ ನಿರ್ಗಮನಗೈದಿರಿ.
ರೋಹಿಣಿ ಯಾದವಾಡ
Superb…