ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಹೊಸ ವರ್ಷದ ವಿಶೇಷ-2023

ಹೊಸ ವರುಷ

ಅಕ್ಷತಾ ಜಗದೀಶ.

ಮತ್ತೆ‌ ಹೊಸದೊಂದು ಕ್ಯಾಲೆಂಡರ್
ಗೋಡೆಯ‌ ಅಲಂಕರಿಸಿದೆ….
ಹೊಸತನದ ಹಂಬಲದಲಿ
ಹೊಸತನ ಬಯಸುತಿದೆ
ನವ ಚೇತನದ ಆಗಮನಕೆ…

ಮರೆಯಾಯಿತು ಹಳೆ ವರುಷ
ಕಾಲಿಟ್ಟಿತು ಹೊಸ ಹರ್ಷ
ಮರೆಯಾಗಲಿ ಹಳೆ ದ್ವೇಷ
ಉದಯಿಸಲಿ ಸ್ನೇಹ, ಪ್ರೇಮದ
ಮನೋಲ್ಲಾಸದ ನವ ಪರ್ವ..

ಹೊಸ‌ ದಿಗಂತದ ಹೊಸ ಆರಂಭ
ನನಸಾಗಿ ಬರಲಿ
ಸೊಗಸಾದ ಪುಷ್ಪದ ಹಾಗೆ…
ಚಿಗುರಲಿ ಎಲ್ಲೆಡೆಯೂ
ಪ್ರೇಮದ ಹೂತೋಟ…

ಹೊಸ ವರುಷವದು
ಹೊಸತನ ಹರಡಲಿ…
ಪ್ರೀತಿಯ ಛಾಯೆ
ಜಗದಲಿ ಹೊಸಚಿತ್ತಾರ
ಮೂಡಿಸಲಿ.‌..

ಯುದ್ದದ ‌ಕರಿಛಾಯೆ ದೂರವಾಗಿ
ಕರೋನಾದ ಕರಿ ನೆರಳು ಮರೆಯಾಗಿ
ಮೂಡಲಿ ಮೂಡಣದ ರವಿ
ಹೊಸ ಚೇತನವ ತುಂಬಿಕೊಂಡು
ನವ ಉಲ್ಲಾಸದಲಿ
ಹೊಸ ಹರುಷವ ಹರಡಲಿ…


About The Author

Leave a Reply

You cannot copy content of this page

Scroll to Top