ಮಲೆಯಾಳಂ ಕವಿತೆಯ ಅನುವಾದ-ಮೌನ….!?.

ಅನುವಾದ ಸಂಗಾತಿ

ಮೌನ….!?

ಮಲಯಾಳಂ ಮೂಲ:ಎಂ.ಜೀವೇಶ್.
ಕನ್ನಡ ಅನುವಾದ:ಐಗೂರು ಮೋಹನ್ ದಾಸ್, ಜಿ.

.

ಅವಳು ಕೇಳಿದ
‘ಪ್ರಶ್ನೆ’ಗೆ ಉತ್ತರಿಸದೇ
ನಾನು ‘ಮೌನಿ’ಯಾಗಿ ಬಿಟ್ಟೆ…!

ಆ ಮೌನದಲ್ಲಿಯೇ ಇತ್ತು
ಅವಳ ಆ ಪ್ರಶ್ನೆಗೆ ಸೂಕ್ತವಾದ
ಉತ್ತರ….!

ನೀವು ರಚನೆ ಮಾಡುವ
‘ ಕವಿತೆ’ ಗಳಲ್ಲಿ ಸದ್ದು – ಗದ್ದಲ
ಕಿರುಚಾಟಗಳು ತುಸು
ಇರುವುದಿಲ್ಲ ಏಕೆ….?!

ಕಿರುಚಾಡುವುದು ನನ್ನ
ದೃಷ್ಟಿಯಲ್ಲಿ ‘ ಕವಿತೆ’ ಯೇ
ಆಗಿರುವುದಿಲ್ಲ…!

ಸದ್ದು – ಗದ್ದಲ
ಇಲ್ಲಾದೇ ಪ್ರಾರಂಭಿಸಿ…
ನಿಶಬ್ದವಾಗಿ ಸಾಗಲು
ಕವಿತೆಗೆ ಗೊತ್ತಿರಬೇಕು…!

ಹೂವು
ಯಾವಾಗ ಅರಳುವುದು…?
ರಾತ್ರಿ ಶಶಿ
ಉದಯವಾಗುವುದು
ಯಾವಾಗ..?
ಮರಣ
ಯಾವಾಗ ಬರುತ್ತದೆ..?

ಇದು ಎಲ್ಲಾ
ಯಾರಿಗೆ ಗೊತ್ತು
ಪ್ರಿಯೆ….?

ಇವುಗಳಂತೆ ಕವಿತೆಗಳು
ನಿಶಬ್ದವಾಗಿರ ಬೇಕು…!!


Leave a Reply

Back To Top