ಕಾವ್ಯ ಸಂಗಾತಿ
ಉದ್ಭವ
ಡಾ ಡೋ ನಾ ವೆಂಕಟೇಶ
ಕವನಗಳು ಒಂಥರಾ
ಜೀವ ಉದ್ಭವಿಸುವ ಪರಿ
ಭ್ರೂಣ ಮೈದಳೆವ ಬಯಕೆ
ಸತತ ಪರಿಶ್ರಮದ
ಕನಸಿನ ಹತ್ಯೆ
ಮತ್ತೆ ನನಸಿನ ಕಸುವು !
ತಪಾಸಿಸಿದ ವೈದ್ಯ ಧುತ್ತೆಂದು ಘೋಷಿಸಿದ
ಗರ್ಭದ ಹಾಗೆ ಕೆಲವೊಮ್ಮೆ
ತೀರದ ಕೆಲಸಕ್ಕೆ ಹೊರಟಾಗ
ಬರೆಯಲೇ ಬೇಕೆನಿಸಿದ ಆ ಅನಿವಾರ್ಯತೆ !
ಕವನೋದ್ಭವಕ್ಕೂ
ಕೂಸಿನುದ್ಭವಕ್ಕೂ ಅಂಥ
ವ್ಯತ್ಯಾಸ ಇಲ್ಲ
ಮಾತ್ರ ಅಲ್ಲಿ ಒಬ್ಬರೇ!
ಇಲ್ಲಿ ಇಬ್ಬರಾದರೂ ಬೇಕು
( ಈಗೀಗ ಇದೂ ಬದಲಾಗುವ
ಸಂಧರ್ಭದ ಸೃಷ್ಟಿ)
ಸಾರಾಂಶ ಇಷ್ಟೇ
ಕವನೋದ್ಭವಕ್ಕೂ
ಮಗುವೋದ್ಭವಕ್ಕೂ ಅಂತಿಂಥ
ವ್ಯತ್ಯಾಸಗಳಿಲ್ಲ !!
ಗೆಳೆಯ ಏನಂತೀಯಾ?
ಕವನೋಧ್ಭವಾಕ್ಕೆ ಕವಿ ಹಾಗೂ ಅವನ ಜೀವನದ ಅನುಭವಗಳು ಬೇಕು. ಇಬ್ಬರ ಪ್ರೇಮ ಕವಿತೆಯಿಂದ ಮಗುವೋಧ್ಭವ ಏನ್ನಾಭಾಹುದ??
ಹೂಂ ಕಣಮ್ಮ. ಥ್ಯಾಂಕ್ಸ್!
ಕವನುದ್ಭವಕ್ಕೆ ಬೇಕು ಪರಿಣಿತಿ,
ಬ್ರುನೋಧ್ವವ ಆಗಿ ಬಿಡಬಹುದು ಅವನತಿ.
ಎರಡರ ನಡುವಿನ ಸಂಬಂಧ ಅತೀ ಸೂಕ್ಷ್ಮ
ಮತ್ತೊಮ್ಮೆ ಚಪ್ಪಾಳೆ ❤️
ಉದ್ಭವಗಳು ನಿರಂತರ. ತದ್ಭವಗಳು ಆಕಸ್ಮಿಕ
ಸೂರ್ಯ ಥ್ಯಾಂಕ್ಸ್!!