ಲಹರಿ
ಪ್ರೇಮ ಎಂಬ ಮೋಹದಲ್ಲಿ
ಕವಿತಾ ಹಿರೇಮಠ
ಪ್ರೇಮ ಎನ್ನುವುದು ಹೃದಯಗಳ ವಿಷಯ
ಮನಸ್ಸುಗಳ ಪಿಸುಮಾತು.
ಈ ಪ್ರೀತಿ ಪ್ರೇಮ ಪ್ರಣಯ ಎನ್ನುವಂತದು ಇಂದು ನಿನ್ನೆಯ ಕಥೆಯಲ್ಲ ಬಿಡಿ.
ದೇವರ ಪ್ರೇಮ ಕಥೆಯಿಂದ ಹಿಡಿದು ಈ ಫೇಸ್ಬುಕ್ ಪ್ರೇಮಿಗಳವರೆಗೆ ಸಾಕಷ್ಟು ಪ್ರೇಮ ಕಥೆಗಳು ನಮಗೆ ಸಿಗುತ್ತವೆ.
ಮೊದಲು ದೇವರ ಪ್ರೇಮ ಕಥೆ ನೋಡುವುದಾದರೆ ದಕ್ಷನ ಮಗಳು ಸತಿ ಶಿವನನ್ನು ಪ್ರೇಮಿಸಿ ತಂದೆಯ ಇಚ್ಛೆಗೆ ವಿರುದ್ಧವಾಗಿ ಶಿವನನ್ನು ವರಿಸುತ್ತಾಳೆ. ಒಂದು ಯಜ್ಞದಲ್ಲಿ ತಂದೆಯಿಂದ ಅವಮಾನಿತಳಾದ ಸತಿ ಯಜ್ಞಾ ಕುಂಡಕ್ಕೆ ಹಾರಿ ಪ್ರಾಣಬಿಟ್ಟು ಮುಂದೆ ಪರ್ವತರಾಜನ ಮಗಳಾಗಿ ಹುಟ್ಟಿ ಕಠಿಣ ತಪಸ್ಸು ಮಾಡಿ ಪಾರ್ವತಿ ಶಿವನನ್ನು ವಿವಾಹವಾಗಿ ಶಿವನ ಅರ್ಧ ಭಾಗವನ್ನು ಅಲಂಕರಿಸುತ್ತಾಳೆ. ಅದು ಸ್ತ್ರೀಯ ಶಕ್ತಿ ತಾಕತ್ತು . ಎಂದು ಹೇಳಬಹುದು.
ತ್ರೇತಾಯುಗಕ್ಕೆ ಬರುವುದಾದರೆ ಶ್ರೀರಾಮನ ತಂದೆ ಕೈಕೆಯನ್ನು ಪ್ರೇಮಿಸಿ ಮದುವೆಯಾಗುತ್ತಾನೆ. ನಂತರ ಸೀತೆಯ ಕನಸಿನಲ್ಲಿ ನಿತ್ಯ ಕಾಡುವ ಒಂದು ಮುಖವನ್ನು ನೋಡಿಲ್ಲದಿದ್ದರು ಪ್ರೀತಿಸತೊಡಗುತ್ತಾಳೆ. ಮುಂದೆ ಶ್ರೀ ರಾಮ ಜನಕ ಮಹಾರಾಜ ಏರ್ಪಡಿಸಿದ್ದ ಸ್ವಯಂವರಕ್ಕೆ ಹೋಗಿ ಬಿಲ್ಲು ಮುರಿದು ಸೀತೆಯನ್ನು ವಿವಾಹವಾಗುತ್ತಾನೆ. ಇಲ್ಲಿ ಕೂಡ ಸೀತೆಯ ಪ್ರೇಮ ಗೆದ್ದಿತ್ತು.
ಇನ್ನೂ ಪ್ರೀತಿ ಪ್ರೇಮ ಎಂದರೆ ನೆನಪಾಗುವುದು ದ್ವಾಪರಯುಗದ ಶ್ರೀ ಕೃಷ್ಣ ಬಾಲ್ಯದಲ್ಲಿ ರಾಧೆಯನ್ನು ಪ್ರೀತಿಸಿದ ಕೃಷ್ಣ ಕರ್ತವ್ಯ ಜವಾಬ್ದಾರಿ ಎದುರಾದಗ ರಾಧೆಯಿಂದ ದೂರವಾದರು ಅವರ ನಡುವಿನ ಪ್ರೀತಿ ಮಾತ್ರ ಹಾಗೆ ಇತ್ತು ಎಂದು ಕೇಳಿದ್ದಿವಿ ಕೃಷ್ಣ ತನ್ನ ಪ್ರೀತಿಸಿದ ರುಕ್ಮಿಣಿ, ಸತ್ಯಭಾಮೆ, ಮಿತ್ರಾವಿಂದ ರನ್ನು ವಿವಾಹವಾಗುತ್ತಾನೆ. ಮತ್ತೆ ಹಾಗೆ ನೋಡುವುದಾದರೆ ಕೃಷ್ಣನ ಭಕ್ತ ಗೆಳೆಯನಾದ ಅರ್ಜುನ ಚಿತ್ರಾಂಗದೆ,ಉಳುಚಿ, ಸುಭದ್ರೆಯನ್ನು ಪ್ರೀತಿಸಿ ಮದುವೆಯಾದ ಎಂಬ ಕಥೆ ಕೇಳಿದ್ದೇವೆ. ಆಗಿನ ಕಾಲದಲ್ಲಿ ಬಹುಪತ್ನಿತ್ವ ಜಾರಿಯಲ್ಲಿತ್ತು. ಮತ್ತು ಪ್ರೇಮ ಪರಿಶುದ್ಧ ನಿಷ್ಕಲ್ಮಶ ಭಾವನೆಗಳಿಂದ ಕೂಡಿದ ಕಾರಣ ಪ್ರೇಮ ವಿವಾಹಕ್ಕೆ ಅನುಮತಿ ಇತ್ತು. ಮತ್ತು ವಿರೋಧ ಕೂಡ ಇತ್ತು.
ನಂತರದ ಪ್ರೇಮ ಕಥೆಗಳನ್ನು ನೋಡುವುದಾದರೆ ನಳ ದಮಯಂತಿಯರ ಪವಿತ್ರ ಪ್ರೇಮ.
ಎರಡು ಹಂಸ ಪಕ್ಷಿಗಳು ಒಂದು ದಿನ ನೀರಿನಲ್ಲಿ ಜೊತೆಯಾಗಿ ಆಡುತ್ತಿರುವಾಗ ನೋಡಿದ ನಳ ಎಷ್ಟು ಚೆಂದದ ಜೋಡಿ ನಿಮ್ಮದು ಎಂದನಂತೆ ಅದ್ಕೆ ಆ ಹಂಸಗಳು ನೀನು ಸುಂದರ ಮನ್ಮಥನಂತೆ ಇರುವೆ ನಿನ್ನಷ್ಟೆ ಸುಂದರವಾಗಿ ಇರುವ ಒಬ್ಬ ಕನ್ಯೆ ಇದ್ದಾಳೆ ಆಕೆಯೇ ದಮಯಂತಿ ಎಂದು ಆಕೆಯ ವರ್ಣನೆ ಮಾಡಿದ ಹಂಸಗಳು ಅವನಲ್ಲಿ ದಮಯಂತಿಯ ಪ್ರೇಮ ವಾಗುವಂತೆ ಮತ್ತು ದಮಯಂತಿಯಲ್ಲಿ ನಳ ಬಗ್ಗೆ ಹೇಳಿ ಪ್ರೇಮವಾಗುವಂತೆ ಮಾಡಿ ಅವರ ಪ್ರೇಮ ಸಂದೇಶ ರವಾನಿಸುವ ಕಾರ್ಯ ಮಾಡಿ ಅವರ ಪ್ರೇಮ ಗೆಲ್ಲುಸುತ್ತವೆ.
ಕಾಳಿದಾಸ ಬರೆದ ಮತ್ತೊಂದು ಪ್ರೇಮ ಕಥೆ ಶಕುಂತಲಾ ದುಶ್ಯಂತನದು ಎಲ್ಲರಿಗೂ ತಿಳಿದೆ ಇದೆ.
ಮತ್ತೆ ಭಗ್ನ ಪ್ರೇಮಿಗಳು ಎಂದರೆ ಸಲೀಂ ಅನಾರ್ಕಲಿ, ರೋಮಿಯೋ , ಜೂಲಿಯೆಟ್, ದೇವದಾಸ್ ಪಾರ್ವತಿ, ಹೀಗೆ ನಮಗೆ ಲೆಕ್ಕವಿಲ್ಲದಷ್ಟು ,ತಿಳಿಯದಷ್ಟು ನಮ್ಮ ಜೊತೆಗೆ ಇರುವ ಪ್ರೇಮದಲ್ಲಿ ಗೆದ್ದವರು ಸೋತವರು ಪ್ರಾಣ ಕಳೆದುಕೊಂಡವರು. ಇದ್ದಾರೆ ಇರುತ್ತಾರೆ.
ಅಸಲಿಗೆ ಪ್ರೇಮ ಎಂದರೇನು
ಪ್ರೇಮ ಎಂದರೆ ಅವರವರ ಭಾವಕ್ಕೆ ಬಿಟ್ಟಿದ್ದು ಒಬ್ಬೊಬ್ಬರಿಗೂ ಒಂದೊಂದು ಬಗೆಯ ಭಾವನೆ ಇದೆ . ಗಂಡು ಹೆಣ್ಣಿನ ನಡುವೆ ಅಂಕುರಿಸುವ ಭಾವನೆ . ಪ್ರೇಮ ಎಂದರೆ ಇದು ಹೃದಯಕ್ಕೆ ಸಂಬಂಧಿಸಿದ ವಿಷಯ .
ಪ್ರೀತಿ ಎಂದರೆ ಹುಡುಗ ಹುಡುಗಿ ನಡುವಿನ ಬಂಧ ಅಷ್ಟೇ ಪ್ರೀತಿಯಲಿ ತಾಯಿ ಪ್ರೀತಿ ಸಹೋದರ , ಸಹೋದರಿಯ ಪ್ರೀತಿ , ಕಾಳಜಿ, ಕರುಣೆ, ಕರ್ತವ್ಯ,ಜವಾಬ್ದಾರಿ, ಹೀಗೆ ಇದರಲ್ಲಿ ಇರುವುದು ಕೂಡ ಪ್ರೀತಿನೇ.
ಆದರೆ ನಾವು ಈಗ ಪ್ರೀತಿ ಪ್ರೇಮ, ಪ್ರಣಯದ ಕುರಿತು ನೋಡೋಣ . ಪ್ರೇಮ ಎಂದರೆ ಒಬ್ಬ ವ್ಯಕ್ತಿಯನ್ನು ಮೊದಲ ಸಲ ಕಂಡಾಗ ವಾವ್ ಎನಿಸಿದರೆ ಅದು ಪ್ರೀತಿ ಅಲ್ಲ ಅವರು ಕೇವಲ ನಿಮ್ಮ ಕಣ್ಣಿಗೆ ಆಕರ್ಷಕವಾಗಿ ಕಂಡಾಗ ಗೊತ್ತಿಲ್ಲದೆ ಬಾಯಿಯಿಂದ ವಾವ್ ಎನ್ನುವ ಉದ್ಗಾರ ಬಂದಿದೆ. ಆತ/ಆಕೆ ನೋಡಲು ಸುಂದರವಾಗಿದ್ದ ಕಾರಣ ಅಥವಾ ಆಕರ್ಷಕವಾದ ಉಡುಗೆ ತೊಡುಗೆ ಧರಿಸದ ಕಾರಣ ಬಂದಿರಬಹುದು ಆದರೆ ಇದು ಪ್ರೀತಿ ಅಲ್ಲವೇ ಅಲ್ಲ. ಮತ್ತೊಬ್ಬರ ಸೌಂದರ್ಯಕ್ಕೆ ಮರುಳಾಗುವುದು ಪ್ರೇಮವಂತು ಆಗಲು ಸಾಧ್ಯವಿಲ್ಲ. ಅವಳ/ಅವನ ನೋಟ, ಮೈಮಾಟಕ್ಕೆ ಕಳೆದು ಹೋದೆ love is first sight ಅಂತ ಮೊದಲು ನೋಡಿದ ತಕ್ಷಣ ನನಗೆ ಲವ್ ಶುರುವಾಯಿತು ಎಂದು ಹೇಳುತ್ತಾರೆ. ಇದೆಲ್ಲಾ ಸಿನಿಮಾಗಳ ಪ್ರಭಾವ ಅಷ್ಟೇ.
ಪ್ರೇಮ ಎಂದರೆ ಅದು ಒಂದು ಸುಂದರ ಭಾವನೆ, ಅದು ತಾನಾಗಿಯೇ ಹುಟ್ಟುವಂತದು ಅಂದ,ಚೆಂದ, ಆಸ್ತಿ, ಅಂತಸ್ತು ನೋಡಿ ಬರುವಂತಹದಲ್ಲ. ಹೃದಯದ ಬಡಿತದಲ್ಲಿ ಬೆರೆತು ಕೊನೆಯವರೆಗೂ ಮರೆಯಾದರು ಮರೆಯದೆ ಉಳಿಯುವ ಮಧುರ ಬಂಧ ಪ್ರೇಮ.
ಮನೆಯಲ್ಲಿ ಇರುವ ಸಮಸ್ಯೆಯಿಂದ ಜಾತಿ ಧರ್ಮದ ಕಾರಣದಿಂದ ಪರಸ್ಪರ ತಪ್ಪು ತಿಳುವಳಿಕೆಯಿಂದ ದೂರಾದರು ಅವರಿಗೆ ತೊಂದರೆ ಕೊಡದೆ ಅವರ ಸಂತೋಷ ಬಯಸುವುದೆ ನಿಜವಾದ ಪ್ರೀತಿ.
ಆದರೆ ಇತ್ತೀಚಿನ ದಿನಗಳಲ್ಲಿ ನೋಡುವ ಪ್ರೇಮ ಕಥೆಗಳೇ ಬೇರೆ ಬೇರೆ ರೀತಿಯಲ್ಲಿ ಇವೆ. ಈಗಂತೂ ನಮಗೆ ಆಗಿರುವುದು ಪ್ರೇಮನಾ ಅಥವಾ ಆಕರ್ಷಕಣೆನಾ ಅಂತ ತಿಳಿದುಕೊಳ್ಳುವ ಸಹನೆ ಯಾರಿಗೂ ಇಲ್ಲ . ಆಧುನಿಕ ಎಷ್ಟು ವೇಗವಾಗಿ ಚಲಿಸುತ್ತಿದೆಯೋ ಅಷ್ಟೇ ವೇಗವಾಗಿ ಸಂಬಂಧಗಳು ಮುರಿದು ಬೀಳುತ್ತಿವೆ. ಎರಡು ವರ್ಷಗಳಿಂದ ಕೊರೋನಾ ಅಂತ ಬಂದು LKG ಯಿಂದ ಹಿಡಿದು ಡ್ರಿಗ್ರಿಯವರೆಗೆ ಶಾಲಾ ಕಾಲೇಜು ಫೋನಿನಲ್ಲಿ ಬಂದು ಮಕ್ಕಳನ್ನು ಯುವಕರನ್ನು ಫೋನು ಹಾಳುಮಾಡಿ ಬಿಟ್ಟಿದೆ. Facebook, Instagram, ಅಂತ ಸಾಮಾಜಿಕ ಜಾಲತಾಣಗಳಲ್ಲಿ ಅಕೌಂಟ್ ಮಾಡಿ photo filter ಮಾಡಿ ಹಾಕಿ reels, video ಮಾಡಿ ಅರ್ಧ ಮರ್ಧ ಬಟ್ಟೆ ತೊಟ್ಟು ಯುವಕ, ಯುವತಿಯರು ಪ್ರೇಮ ಎನ್ನುವ ಜಾಲಕ್ಕೆ ಸಿಲುಕುತ್ತಾರೆ. ಅವರು ಮಟ್ಟಿಗೆ ಪ್ರೇಮ ಎಂದರೆ ಚಾಟಿಂಗ್ ಡೇಟಿಂಗ್ ಅಂತ ಕಂಡ ಕಂಡ ಕಡೆ ತಿರುಗಾಡಿ ಮೈಗೆ ಮೈ ತಾಗಿಸಿ ಅಸಭ್ಯವಾಗಿ ವರ್ತಿಸಿ ಮಾನ ಕಳೆದುಕೊಂಡ ಮನೆಯಲ್ಲಿ ಗೊತ್ತಾಗಿ ವಿರೋಧ ವ್ಯಕ್ತವಾದಾಗ ಸಾವಿಗೆ ಶರಣಾಗುವುದು, ಅಥವಾ ಪಲಾಯನ ಗೈದು ದೈಹಿಕ ಆಕರ್ಷಣೆ ಕಡಿಮೆ ಆದಾಗ ಜಗಳ ರಂಪಾಟ ಮಾಡಿಕೊಂಡು ಜೀವನ ನರಕ ಮಾಡಿಕೊಂಡು ದೂರಾಗಿ ಬಿಡುತ್ತಾರೆ . ಅಥವಾ ಮತ್ತೊಂದು ಅನೈತಿಕ ಸಂಬಂಧಕ್ಕೆ ಹಾತೊರೆಯುತ್ತಾರೆ.
ಪ್ರೇಮ ಎನ್ನುವ ಪವಿತ್ರ ಬಂಧಕ್ಕೆ ಈಗಿನ ಪೀಳಿಗೆ ಕಪ್ಪು ಚುಕ್ಕೆ ಎನ್ನಬಹುದು. ಹದಿಹರೆಯದ ವಯಸ್ಸಿನಲ್ಲಿ ತಮ್ಮ ಮನಸು ಹಿಡಿತದಲ್ಲಿ ಇಟ್ಟುಕೊಳ್ಳಲು ಆಗದೆ ದೈಹಿಕವಾಗಿ ಒಂದಾಗಿ ದಾಹ ತೀರಿತು ಎಂದಾಗ ಮನಸ್ತಾಪ ಶುರುವಾಗಿ ನೀನು ಇಲ್ಲ ಎಂದರೆ ಮತ್ತೊಬ್ಬ/ಮತ್ತೊಬ್ಬಳು ಎನ್ನುವ ಮಟ್ಟಕ್ಕೆ ಬಂದು ನಿಂತಿದೆ .
ಸಾಮಾಜಿಕ ಜಾಲತಾಣಗಳಲ್ಲಿ ಹುಟ್ಟಿದ ಪ್ರೀತಿಗೆ ಆಯಸ್ಸು ಕಡಿಮೆ. ಪ್ರತಿಯೊಬ್ಬರೂ ಎಚ್ಚರಿಕೆಯಿಂದ ಇರಬೇಕು ಸಾಮಾಜಿಕ ಜಾಲತಾಣಗಳಲ್ಲಿ ಬರೀ ಯುವಕ ಯುವತಿಯರ ನಡುವೆ ಮಾತ್ರ ಅಲ್ಲ ರೀ ವಿವಾಹಿತ ಮಹಿಳೆ ಪುರುಷರಲ್ಲಿ ಪ್ರೇಮ ಹುಟ್ಟುತ್ತಿದೆ ಎನ್ನುವುದೇ ಆಶ್ಚರ್ಯದ ಸಂಗತಿ.
ಪ್ರೇಮ ಎನ್ನುವ ಪವಿತ್ರ ಬಂಧ ಅದು ಹೃದಯದಲ್ಲಿ ಒಮ್ಮೆ ಒಬ್ಬರ ಮೇಲೆ ಮಾತ್ರ ಆಗುವುದು ಕಂಡಕಂಡವರ ಮೇಲೆ ಹೇಗೆ ಪ್ರೀತಿ ಹುಟ್ಟಲು ಸಾಧ್ಯ..? ಅವರವರ ದೈಹಿಕ ಆಕರ್ಷಣೆಗೆ ಪ್ರೀತಿ ಎನ್ನುವ ಹೆಸರು ಇಡುವುದು ಎಷ್ಟು ಸರಿ..?
ಪ್ರೇಮಿಸುವುದು ಒಂದು ಪ್ಯಾಶನ್ ಮಾಡಿಕೊಂಡಿದ್ದಾರೆ.
ಮೋಹದಲ್ಲಿ ಸಿಲುಕಿ ಮನಬಂದಂತೆ ವರ್ತಿಸುತ್ತಿದ್ದಾರೆ.
ವಿವಾಹವಾಗಿ ಎರಡು ಮೂರು ಮಕ್ಕಳು ಇರುವ ವ್ಯಕ್ತಿಗಳು ಈ ಫೇಸ್ಬುಕ್ ಗಳಲ್ಲಿ ನಕಲಿ ಅಕೌಂಟ್ ತೆಗೆದು ಚೆಂದದ ಹುಡುಗಿಯ ಸ್ನೇಹ ಬೆಳೆಸಿ. ಸ್ನೇಹ ಪ್ರೀತಿಗೆ ತಿರುಗಿಸಿ ನಕ್ಕು ನಲಿದು ಪ್ರಪಂಚ ಮರೆತು ಬಿಟ್ಟಿರುತ್ತಾರೆ ಈ ಪ್ರೇಮ ಎನ್ನುವ ಮದಿರೆಯ ನಶೆಯಲ್ಲಿ ತಾವು ಮಾಡುತ್ತಿರುವುದರ ಪರಿವೇ ಇರದು. ಹುಡುಗಿಯ ಖಾಸಗಿ ಫೋಟೋಗಳ ಪಡೆದು ಬ್ಲಾಕ್ ಮೇಲ್ ಮಾಡುವುದು ದಿನನಿತ್ಯ ನಾವು ನೀವು ಕೇಳಿದ್ದೇವೆ ಓದಿದ್ದೇವೆ . ಆದರೂ ಎಚ್ಚೆತ್ತುಕೊಳ್ಳದಿರುವುದು ಮಾತ್ರ ದುರಂತ.
ಕೇವಲ ಲೈಕ್ ಕಾಮೆಂಟ್‍ಗಾಗಿ ಫೋಟೋಗಳು ಹಾಕಬೇಡಿ ಎಂದು ಎಷ್ಟು ಓದಿದ್ದೇವೆ ಆದರೂ ಹಾಕುವುದು ಮಾತ್ರ ಬಿಟ್ಟಿಲ್ಲ.
ಏನಾದರೂ ಆಗಲಿ ಪ್ರೇಮ ಎನ್ನುವುದು ಹೃದಯಗಳ ವಿಷಯ.
ಉತ್ತಮ ಬರಹ
ವಾಸ್ತವ ಸ್ಥಿತಿಯ ಬರಹ ಚೆನ್ನಾಗಿದೆ
ಪ್ರಸ್ತುತ ಪರಿಸರಕ್ಕೆ ಅತ್ಯವಶ್ಯಕವಾದ , ಅರ್ಥ ಮಾಡಿಕೊಳ್ಳಬೇಕಾದ ಬರಹ….