ಮಾಜಾನ್ ಮಸ್ಕಿಯವರ ಕವಿತೆ

ಕಾವ್ಯ ಸಂಗಾತಿ

ಮಾಜಾನ್ ಮಸ್ಕಿಯವರ ಕವಿತೆ

1.
ಅಧಿಕಾರದಿಂದ ಇಳಿಸುವ ಷಡ್ಯಂತ್ರಗಳು ಎಷ್ಟಿದ್ದರೇನು
ಜಾನ್!!
ಇಟ್ಟ ಗುರಿ ಬದಲಿಸದೆ ದಿಟ್ಟ ಹೆಜ್ಜೆಯಲ್ಲಿ ನಡೆಯುತ್ತಿರುವ

2.
ಭದ್ರತೆಯ ಜೀವನಕ್ಕೆ ಮೊಳಗುತಿವೆ ಆಶ್ವಾಸನೆಯ ಘೋಷಣೆಗಳು
ಜಾನ್!!
ಹೆಣದ ಮುಂದಣ ಮೆರವಣಿಗೆಯ ತಮಟೆಯಂತೆ…

3.
ಸಿಕ್ಕಾಪಟ್ಟೆ ಮಾತನಾಡುವ ಸ್ವಾತಂತ್ರ್ಯದ ಔತಣವೇನೋ ಇದೆ
ಜಾನ್!!
ಆಳವಾದ ಅಧ್ಯಯನ, ಅನುಭವಗಳ ರಸದೌತಣ ಬೇಕಾಗಿದೆ.

4.
ಬದುಕಿನ ಜಂಜಾಟ ರಂಪಾಟ ಒಲ್ಲೆನ್ನೆಂದು ಮೆಲ್ಲನೆ ಸರಿದರಾಯಿತೆ ??
ಜಾನ್!!
ದೆವ್ವಗಳೇ ಹಿತವೆಂದು ಮನುಷ್ಯನನ್ನು ಬಿಟ್ಟು ಬದುಕಲಾದೀತೇ…!?


One thought on “ಮಾಜಾನ್ ಮಸ್ಕಿಯವರ ಕವಿತೆ

  1. ಜೀವನದ ನೈಜ್ಯತೆಯ ಸಾಲುಗಳು ಮೇಡಂ ತುಂಬಾ ಅದ್ಬುತ ಅಮೋಘ ಸಾಹಿತ್ಯ

Leave a Reply

Back To Top