ಅಂಕಣ ಬರಹ

ಕ್ಷಿತಿಜ

ಭಾರತಿ ನಲವಡೆ

ಮಾದಕ ವ್ಯಸನದತ್ತ ಯುವಜನತೆ

ಮಕ್ಕಳ ಭವಿತವ್ಯವು ಅವರ ಮೊದಲ ಪಾಠಶಾಲೆಯಾದ ಮನೆಯ ಪರಿಸರ ಹಾಗೂ ಶಾಲೆಯ ಪ್ರೋತ್ಸಾಹದಾಯಕವಾದ ಪರಿಸರವನ್ನು ಅವಲಂಬಿಸಿದೆ. ಶಾಲಾ ಪರಿಸರವು ಯಾವತ್ತೂ ಮಕ್ಕಳನ್ನು ವಿವಿಧ ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳಿಂದ ಮಗುವಿನ ಮನಸನ್ನು ಹಿಡಿದಿಟ್ಟು ಅದರಲ್ಲಿ ತೊಡಗುವ ಸುಗಮಕಾರಿಕೆಯ ಕೆಲಸವನ್ನು ಮಾಡುತ್ತಿರುವ ಸೃಜನಶೀಲ ಕೇಂದ್ರವಾಗಿದೆ. ಇದರ ಜೊತೆ ಪಾಲಕರ ಸಹಕಾರ, ಕಾಳಜಿ ಕೂಡ ತುಂಬ ಮುಖ್ಯ.ಇದಕ್ಕೆ ಪೂರಕವಾದ ಒಂದು ಘಟನೆಯ ವಿಶ್ಲೇಷಣೆಯ ಒಂದು ಪ್ರಸಂಗ ನನ್ನನ್ನು ನಿಬ್ಬೆರಗಾಯಿಸಿತು.

ಪ್ರಾರ್ಥನೆಯ ನಂತರ ನಮ್ಮ ಶಾಲೆಯಲ್ಲಿ ಮಕ್ಕಳಿಗೆ ತರಗತಿವಾರು ಹಾಲು ನೀಡುವ ರೂಢಿ ಇದೆ. ಎಲ್ಲ ಮಕ್ಕಳು ತರಗತಿಗೆ ಹೋಗಿ ತಮ್ಮತಮ್ಮ ಲೋಟಗಳನ್ನು ಹಿಡಿದು ಕುಳಿತಿದ್ದರು.

ನನ್ನ ತರಗತಿಯ ವಿದ್ಯಾರ್ಥಿ ಪ್ರಾರ್ಥನೆಯ ನಂತರ ಓಡಿಬಂದ ನಾನಾಗ ಶಾಲಾ ವರಾಂಡದಲ್ಲಿ ಮುಖ್ಯಾಧ್ಯಾಪಕರು ತುರ್ತಾಗಿ ಕಳಿಸಬೇಕಾದ ವರ್ಗವಾರು ಮಕ್ಕಳ ಮಾಹಿತಿಯನ್ನು ಎಲ್ಲ ಶಿಕ್ಷಕರಿಗೆ ಹೇಳುತ್ತ ಬೇಗನೇ ನೀಡಲು ತಿಳಿಸಿದರು. ಮಕ್ಕಳಿಗೆ ಹಾಲು ಕೊಡುವ ವೇಳೆಯಾದ್ದರಿಂದ ನಮ್ಮ ಅಡುಗೆಯವಳು ಒಂದು ಕೈಯಲ್ಲಿ ಹಾಲಿನ ಬಕೆಟ್ ಇನ್ನೊಂದು ಕೈಯಲ್ಲಿ ಹಾಲನ್ನು ಪ್ರತಿ ಮಗುವಿನ ಲೋಟಕೆ ಸುರಿಯಲು ಒಂದು ಚಮಚ ಹಿಡಿದು ಎಲ್ಲ ತರಗತಿಯ ಮಕ್ಕಳಿಗೆ ನೀಡಿ ನನ್ನ ತರಗತಿಗೆ ಹೋದಳು. ನಾನು ನನ್ನ ಸಹೋದ್ಯೋಗಿಗಳೊಂದಿಗೆ ನೀಡಬೇಕಾದ ಮಕ್ಕಳ ಮಾಹಿತಿಯನ್ನು ಚರ್ಚಿಸುತ್ತ ತರಗತಿಗೆ ಧಾವಿಸುತಿದ್ದೆ.ಅಷ್ಟರಲ್ಲಿ ನಮ್ಮ ತರಗತಿಯ ಓರ್ವ ವಿದ್ಯಾರ್ಥಿ ಓಡಿಬಂದ. ‘ನಿಧಾನವಾಗಿ ಬಾರೋ ಯಾಕೆ ಓಡಿ ಬರ್ತಿದಿಯಾ?’ಎಂದಾಗ “ಟೀಚರ್ ನಮ್ಮ ತರಗತಿಯ ನನ್ನ ಪಕ್ಕ ಕುಳಿತುಕೊಳ್ಳುವ ರಾಹುಲನ ಬಾಯಿಂದ ಸ್ಟಾರ್ ಗುಟಖಾ ವಾಸನೆ ತುಂಬ ಬರ್ತಾ ಇದೆ ಟೀಚರ್ ತೋರಿಸು ಅಂದ್ರೆ ನಾ ತಂದಿಲ್ಲ ನಾ ತಿಂದಿಲ್ಲ ಅಂತ ಹೇಳ್ತಿದಾನೆ ಟೀಚರ್ ” ಎಂದನು.ನಾನು ಮೊದಲು ಎಲ್ಲರ ಹಾಜರಿ ತೆಗೆದುಕೊಂಡು ನಂತರ ಅವನನ್ನು ಹತ್ತಿರ ಕರೆದು ವಿಚಾರಿಸಿದೆ.ಅವನ ಉತ್ತರದಿಂದ ಮೈ ಜುಮ್ಮೆಂದು ಅವರ ಪಾಲಕರ ಬಗ್ಗೆ ಕೋಪ ಕೂಡ ಬಂತು ಆದರೂ ಸಾವರಿಸಿ ಅವರ ಪಾಲಕರ ಮೊಬೈಲ ಸಂಖ್ಯೆ ಪಡೆದು ಫೋನಾಯಿಸಿ ತರಗತಿಯ ಕಲಿಕೆಗೆ ತೊಂದರೆಯಾಗಬಾರದೆಂದು ಮಧ್ಯಾಹ್ನ12,30ಕ್ಕೆ ಬರಲು ತಿಳಿಸಿದೆ. ಅವರು ಬಂದಾಗ ಈ ವಿಷಯ ತಿಳಿಸಿ ನಿಮ್ಮ ಮಗುವನ್ನು ನೀವು ತಿನ್ನುವ ಗುಟಖಾ ತರಲು ಕಳಿಸುತ್ತಿದ್ದಿರಂತೆ ಹೌದಾ? ಎಂದಾಗ ಅನಕ್ಷರಸ್ಥರಾಗಿದ್ದು ಕಟ್ಟಡ ಕಾರ್ಮಿಕ ಕೆಲಸಕ್ಕೆ ತೆರಳುತ್ತಿದ್ದ ಅವರು ಹೂಂ ಎಂದು ತಲೆಯಾಡಿಸಿದರು, “ಏಕೆ? ಹೀಗೆ ಮಾಡಿದ್ರಿ ಅಂದಾಗ ಅವನಿಗೆ ಪೆನ್ನು ಬೇಕಾಗಿತ್ತು ಹಣ ಕೇಳಿದ ಪೆನ್ನುತೆಗೆದುಕೊಂಡು ನನಗೆ ದಿನಕ್ಕೆರಡು ಸಲ ಸ್ಟಾರ ಗುಟಖಾ ಬೇಕು ಉಳಿದ ಹಣದಲ್ಲಿ 10 ಗುಟಖಾ ಪ್ಯಾಕೆಟ್ ತರಲು ಹೇಳಿದೆ ” ಆದರೆ ಅವನು ಅದನ್ನು ತಿನ್ನುತ್ತಾನೆಂದು ನಾನು ಭಾವಿಸಿರಲಿಲ್ಲ “ಎಂದರು ಅದಕ್ಕೆ ನಾನು”ಮಕ್ಕಳು ನಮ್ಮ ದೇಶದ ಆಸ್ತಿ ಆ ಮಕ್ಕಳಿಗೆ ಒಳ್ಳೆಯ ಸಂಸ್ಕಾರ ಕಲಿಸಬೇಕೇ ವಿನಃ ನಮ್ಮ ದುಶ್ಚಟಗಳನ್ನು ಮಕ್ಕಳಿಗೆ ನಾವೇ ಕಲಿಸಿದಂತಾಗುತ್ತದೆ.ಆರೋಗ್ಯಕ್ಕೆ ಮಾರಕವಾದುದನ್ನು ತ್ಯಜಿಸಿ, ಅದಕ್ಕೂ ಪೂರ್ವ ಪಾಲಕರಾದ ನಮ್ಮ ಆಚಾರವಿಚಾರಗಳು ಸರಿಯಾಗಿರಬೇಕು “ಎಂದಾಗ ಅವರು ಇನ್ನೆಂದೂ ಹಾಗೆ ಮಾಡುವದಿಲ್ಲ ಅಂದಾಗ ಆ ವಿದ್ಯಾರ್ಥಿಕೂಡ ಬೇಸರದಿಂದ ನನ್ನದು ತಪ್ಪಾಯ್ತು ಟೀಚರ್ ಇನ್ನೆಂದೂ ತಿನ್ನುವದಿಲ್ಲ”ಎಂದು ಹೇಳಿದನ್ನು ಕೇಳಿ ತುಂಬಾ ಸಂತೋಷವಾಯಿತು.


ನಮ್ಮ ದೇಶವನ್ನು ಬೇರೆ ದೇಶಕ್ಕೆ ಹೋಲಿಸಿದರೆ ನಮ್ಮ ದೇಶದಲ್ಲಿ ಯುವಜನತೆ ಸಂಖ್ಯೆ ಹೆಚ್ಚಿದೆ ಎಂಬುದು ಹೆಮ್ಮೆಯ ವಿಷಯ. ಆದರೆ ಈ ಯುವಜನತೆ ಜೀವನದಲ್ಲಿ ದಿಕ್ಕುದೆಸೆ ಇಲ್ಲದೇ ಮಾದಕವ್ಯಸನಿಗಳಾಗಿ ವಿಕೃತ ಮನೋಭಾವ ತಳೆದು ಹೆತ್ತವರಿಗೆ ಹಾಗೂ ಸಮಾಜಕ್ಕೆ ಕಂಟಕಪ್ರಾಯರಾಗುತ್ತಿರುವದು ಬಹಳ ಖೇದಕರವಾದ ಸಂಗತಿಯಾಗಿದೆ.ಮಕ್ಕಳಿಗೆ ಬಯ್ಯಬಾರದು ಹೊಡೆಯಬಾರದು, ಅನುತ್ತೀರ್ಣಗೊಳಿಸಬಾರದುಎಂಬುವ ಕಾನೂನು ಮಕ್ಕಳು ಬೇಕಾಬಿಟ್ಟಿಯಾಗಿಮನಸ್ಸಿಗೆ ಬಂದಂತೆ ನಡೆದುಕೊಳ್ಳುವ ಹಾಗೆ ಮಾಡಿದೆ ಎಂದರೆ ಅತಿಶಯೋಕ್ತಿಯಾಗಲಾರದು.ಸಾಮಾಜಿಕ ಜಾಲತಾಣದಲ್ಲಿ ಐದು ,ಆರನೇ ತರಗತಿಯಿಂದಲೇ ಅಕೌಂಟನ್ನು ಹೊಂದಿದ ಮಕ್ಕಳ ಭವಿಷ್ಯ ಏನಾಗಲು ಸಾಧ್ಯ ಊಹಿಸಲು ಅಸಾಧ್ಯ.ಕಾಲೇಜು ಹಂತದಲ್ಲಿ ಪ್ರೇಮಕ್ಕೆ ಒಳಗಾಗುವ ಮಕ್ಕಳಿಂದು ಪ್ರಾಥಮಿಕ ತರಗತಿಯಿಂದಲೇ ಪ್ರೇಮ ಜಾಲದಲ್ಲಿ ಬೀಳುವ ಘಟನೆ ಪಾಲಕರಲ್ಲಿ ಭೀತಿಯಯನ್ನುಂಟು ಮಾಡಿದೆ. ಜೀವನವೆಂದರೆ ಮೋಜು ಮಸ್ತಿ ಅದನ್ನು ಅನುಭವಿಸುವುದೇ ಜೀವನ ಎಂದು ತಿಳಿದು ವಿದ್ಯಾರ್ಥಿ ದೆಸೆಯಿಂದಲೇ ಮಾದಕ ವಸ್ತುಗಳ ಚಟಕ್ಕೆ

ದಾಸರಾಗುತ್ತಿದ್ದಾರೆ. ಸಾಮಾಜಿಕ ಜಶಾಲೆ ಕಾಲೇಜುಗಳ 100 ಮೀಟರ ಅಂತರದಲ್ಲಿರುವ ಪ್ರದೇಶದ ಅಂಗಡಿಗಳಲ್ಲಿ ಇವುಗಳ ಮಾರಾಟ ನಿಷೇಧ ಎಂದು ಕಾನೂನು ಇದ್ದರೂ ಸದ್ದಿಲ್ಲದೆ ಇದೊಂದು ವ್ಯಾಪಾರವಾಗಿ ಯುವಜನತೆಯನ್ನು ಹಾಳುಮಾಡುತ್ತಿದೆ. ಭಾರತಸಂವಿಧಾನದ 41, 47ನೇ ವಿಧಿಯ ಪ್ರಕಾರ ಇದು ಅಪರಾಧವಾಗಿದೆ ಆದರೂ ಈ ನಿಯಮವನ್ನು ಗಾಳಿಗೆ ತೂರಿ ಸದಾ ಖುಷಿಯಾಗಿರಬೇಕು ಒತ್ತಡರಹಿತವಾಗಿರಬೇಕು ಎಂಬುದು ಮನೆಯಲ್ಲಿ ದೊಡ್ಡವರ ಆಶಯವಾದರೆ ಮನೆಯಲ್ಲಿ ಅಥವಾ ಸುತ್ತಮುತ್ತಲಿನ ಸಹವಾಸ ದೋಷದ ಈ ಚಟದ
ಬಗ್ಗೆ ಅರಿತು ಇಂದಿನ ವಿದ್ಯಾರ್ಥಿಗಳು ಯುವಕರು ತಾವು ಅದನ್ನು ಅನುಭವಿಸಬೇಕು ಆ ನಶೆಯಲಿ ನಲಿದಾಡಬೇಕು ಎಂಬ ಬಯಕೆಯಿಂದ ಗುಟ್ಕಾ ,ಚರಸ್ ಬ್ರೌನ್ ಶುಗರ್ ,ಗಾಂಜಾ, ತಂಬಾಕು ,ಬೀಡಿ ,ಸಿಗರೇಟು ಹೆರಾಯಿನ್ ನಂತವುಗಳನ್ನು ಸೇವಿಸುವ ಅಭ್ಯಾಸಕ್ಕೆ ಶರಣಾಗಿದ್ದಾರೆ. ಹಾಗಾದರೆ ಇವರ ಭವಿಷ್ಯದ ಗತಿ ಏನು? ಎಂಬುದೇ ಪಾಲಕರಿಗೆ ಚಿಂತೆಯಾಗಿದೆ ಅಂದ ಮಾತ್ರಕ್ಕೆ ಪಾಲಕರ ಬೇಜವ್ದಾರಿಯ ಪರಿಣಾಮ ಎಂದರೆ ತಪ್ಪಾಗಲಿಕ್ಕಿಲ್ಲ. ಕೈಯಲ್ಲಿ ಸಿಗರೇಟು ಗಾಂಜಾ ಪಾಟಿಚೀಲದಲ್ಲಿ ಕಾಂಡೋಮ ಎತ್ತ ಸಾಗುತಿದೆ ವಿದ್ಯಾರ್ಥಿ ಜೀವನ?ಎಂಬುದು ವಿಪರ್ಯಾಸವಾದ ಸಂಗತಿಯಾಗಿದೆ. ಮಕ್ಕಳ ಚಲನವಲನದದಲ್ಲಿ ವ್ಯತ್ಯಾಸ ಕಂಡುಬಂದಾಗ ಅದರ ಕುರಿತು ವಿಚಾರಿಸಿ ಒಂದು ವೇಳೆ ಮಕ್ಕಳು ದಾರಿ ತಪ್ಪುವ ಹಂತದಲ್ಲಿ ಇದ್ದರೆ ಅವರೊಂದಿಗೆ ಆಪ್ತ ಸಮಾಲೋಚನೆ ಮಾಡಿ ಒಳ್ಳೆಯ ಹವ್ಯಾಸ ಮೈಗೂಡಿಸಿಕೊಳ್ಳುವಂತೆ ಪ್ರೇರಣೆ ನೀಡಬೇಕು. ಜನುಮ ದಿನದ ಪಾರ್ಟಿಯನ್ನು ಪ್ರತಿಷ್ಠಿತ ಬಾರ್ ಹೊಟೇಲ್ಗಳಲ್ಲಿ ಮಾಡಿ ಪಾಲಕರ ನಂಬಿಕೆ ವಿಶ್ವಾಸಕ್ಕೆ ತಣ್ಣಿರೆರಚಿ ಅಮೂಲ್ಯವಾದ ತಮ್ಮ ಜೀವನವನ್ನು ಹಾಳುಮಾಡಿಕೊಂಡು ಕಾಲ ಮಿಂಚಿಹೋದ ಮೇಲೆ ಪೂರ್ತಿ ತಾವಂದುಕೊಂಡ ಗುರಿ ಮುಟ್ಟಲಾಗದೇ ಆತ್ಮಹತ್ಯೆಗೆ ಶರಣಾಗುವ ಘಟನೆಗಳಿಗೆ ಕೊನೆಇಲ್ಲ. ಯುವಕರೇ ದೇಶದ ಸಂಪತ್ತು ಇಂತಹ ಸಂಪತ್ತು ಉತ್ತಮವಾಗಿದ್ದರೇ ದೇಶ ಕೂಡ ಪ್ರಗತಿಸಾಧಿಸಬಹುದು. ಕೇವಲ ಸರ್ಕಾರ, ಸಂಘ ಸಂಸ್ಥೆಗಳ ಜಾಗೃತಿಯಿಂದ ಜಾಗೃತರಾಗಬೇಕೆಂದಿಲ್ಲ ಎಲ್ಲಾ ಯುವ ಜನತೆ ತಾವೇ ಸ್ವಯಂಪ್ರೇರಿತರಾಗಿ ಮಾದಕ ವಸ್ತುಗಳ ಸೇವನೆಯಿಂದ ಆರೋಗ್ಯದ ಮೇಲಾಗುವ ಕಾರಣ ತಿಳಿದು ಮಾದಕವ್ಯಸನಿಗಳಾಗದೇ ಸ್ವಸ್ಥ ಸಮಾಜ ರೂಪಿಸಿ ತಾವು ಬದುಕಿ ಬದುಕಲು ಬಿಡೋಣ ಎಂಬ ಮಾತನ್ನು ತಮ್ಮ ಜೀವನದಲ್ಲಿ ಪಾಲಿಸಿದಾಗ ಮಾತ್ರ ಯುವಜನತೆ ಆರೋಗ್ಯವಂತ ಸಮಾಜವನ್ನು ಕಟ್ಟಲು ಸಾಧ್ಯವಾಗುತ್ತದೆ. ದೇಶದ ಉತ್ತಮ ನಾಗರಿಕರಾಗಲು ನಮ್ಮ ನಡೆನುಡಿಗಳು ಕೂಡ ಉತ್ತಮವಾಗಿರಬೇಕು.ಡಾ.ಎ.ಪಿ.ಜೆ.ಅಬ್ದುಲ್ಲ ಕಲಾಂ ರವರು ಹೇಳುವಂತೆ “ನಮ್ಮ ಭವಿಷ್ಯಕ್ಕೆ ಸಾಧನೆಗೆ ಕನಸುಗಳನ್ನು ಕಾಣಬೇಕು ಅವು ಹೇಗಿರಬೇಕೆಂದರೆ ಗುರಿ ಸಾಧಿಸುವವರೆಗೂ ಮಲಗಲು ಬಿಡಬಾರದು” ಎಂದು ಸಾಧನೆಗೆ ಪ್ರೇರೆಪಿಸುತ್ತಾರೆ. ಸ್ವಾಮಿ ವಿವೇಕಾನಂದರ ವಾಣಿಯಂತೆ “ಏಳಿ ಎದ್ದೇಳಿ ಗುರಿ ಮುಟ್ಟುವವರೆಗೆ ನಿಲ್ಲದಿರಿ”ಎಂಬ ಮಾತು ಅವರ ಉತ್ತಮ ಭವಿಷ್ಯಕೆ ದಾರಿದೀಪವಾಗಲು ಸಾಧ್ಯ.ಈ ನಿಟ್ಟಿನಲ್ಲಿ ಪಾಲಕರು ಎಚ್ಚತ್ತುಕೊಂಡು ತಮ್ಮ ಮಕ್ಕಳ ಚಟುವಟಿಕೆಗಳತ್ತ ಗಮನಹರಿಸಬೇಕಾದ ಗುರುತರ ಜವಾಬ್ದಾರಿಯೊಂದಿಗೆ ಮಕ್ಕಳ ಆಸಕ್ತಿಯನ್ನರಿತು ಗುರಿಯನ್ನು ಹುಟ್ಟುಹಾಕಿ ಅದರ ಸಾಧನೆಗೆ ತಮ್ಮ ಕರ್ತವ್ಯದೊಂದಿಗೆ ಮಕ್ಕಳ ಕಲಿಯುವ ಹಕ್ಕನ್ನು ಒತ್ತಾಸೆಯಾಗಿಸಿ ಬಾಲ್ಯವನ್ನು ಉತ್ತಮವಾದ ಕಲಿಕಾ ಬುನಾದಿಯನ್ನಾಗಿಸಬೇಕಿದೆ.
——————————————

ಭಾರತಿ ನಲವಡೆ

ಶ್ರೀಮತಿ ಭಾರತಿ ಕೇದಾರಿ ನಲವಡೆ ಇವರುಸರಕಾರಿ ಹಿರಿಯ ಪ್ರಾಥಮಿಕ ಕನ್ನಡ ಶಾಲೆ ಮಂಗಳವಾಡದಲ್ಲಿ ಸಹಶಿಕ್ಷಕಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಕಥೆ, ಕವನ, ಲೇಖನ ಬರೆಯುವ ಹವ್ಯಾಸ ಹೊಂದಿದ್ದಾರೆ. ಲೇಖನಗಳು ದಿನಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಬಿಡುಗಡೆಯಾದ ಕೃತಿಗಳು :1)ಕಾವ್ಯ ಕನಸು
2)ಸಂಕಲ್ಪ
ತಮ್ಮ ಶಾಲೆಯ ಮಕ್ಕಳಿಗೆ ಮಾರ್ಗ ದರ್ಶನ ಮಾಡಿ ತಾಲೂಕು ಜಿಲ್ಲಾ ಮಟ್ಟದ ಕವಿಗೋಷ್ಠಿ, ಉಪನ್ಯಾಸದಲ್ಲಿ ಮಕ್ಕಳೊಂದಿಗೆ ಭಾಗವಹಿಸಿದ್ದಾರೆ.
ಕನ್ನಡ ಭಾಷಾಸಬಲೀಕರಣಕ್ಕೆ ಶಾಲಾ ಮಟ್ಟದಿಂದ ರಾಜ್ಯ ಮಟ್ಟದವರೆಗೂ ಕವನರಚನೆ ಹಾಗೂ ವಾಚನ ಸ್ಪರ್ಧೆಯನ್ನು ಸಂಘಟಿಸಿ ಪ್ರೋತ್ಸಾಹಿಸಿದ್ದಾರೆ.
ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕಿ ಪ್ರಶಸ್ತಿ
ರಾಜ್ಯ ಮಟ್ಟದಲ್ಲಿ 1)ಡಾ ಕಮಲಾಹಂಪನಾ ಸಾಹಿತ್ಯ ಪುರಸ್ಕಾರ 2)ಗುರುಭೂಷಣ3)ಸಾಧನಾ4)ಸಾಹಿತ್ಯ ಮಂದಾರ5)ಸಾಹಿತ್ಯ ಚೇತನ
6)ಕಾರುಣ್ಯಕನ್ನಡ ಬಳಸಿ ಬೆಳೆಸಲು ಹಲವಾರು ಸಂಘಟನೆಗಳ ಪದಾಧಿಕಾರಿಯಾಗಿ ಕನ್ನಡಸೇವೆ ಸಲ್ಲಿಸುತ್ತಿದ್ದಾರೆ

7 thoughts on “

  1. ಸಾಂದರ್ಭಿಕ ಲೇಖನ ಪಾಲಕಲ ಕರ್ತವ್ಯ ದ ಜಾಗೃತಿ ತುಂಬಾ ಚೆನ್ನಾಗಿ ಮೂಡಿ ಬಂದಿದೆ.ಅಭಿನಂದನೆಗಳು

  2. ಪ್ರಸ್ತುತ ಸನ್ನಿವೇಶಕ್ಕೆ ಹಿಡಿದ ಕನ್ನಡಿ ತುಂಬಾ ಚೆನ್ನಾಗಿ ಮೂಡಿಬಂದಿದೆ ಅಭಿನಂದನೆಗಳು

  3. ತುಂಬಾ ಚೆನ್ನಾಗಿ ಲೇಕನ ಮೂಡಿ ಬಂದಿದೆ ಟೀಚರ್

  4. ಅತ್ತ್ಯುತ್ತಮ ಸಂದೇಶ ಟೀಚರ್ ಇಂತಹ ಲೇಖನಗಳು ಸಮಾಜ ಸುಧಾರಣೆಯಲ್ಲಿ ಅತೀ ಮುಖ್ಯವಾಗಿವೆ ಇಂತಹ ಬರಹಗಳು ಮತ್ತೆ ಮತ್ತೆ ಬರಲಿ.

Leave a Reply

Back To Top