ನೆನಪಿನ ಸಂಗಾತಿ
ನಾಳೆ ಏನೆಂಬ ಪ್ರಶ್ನೆಗಳಿಗಿಂತಲೂ ‘ಇಂದು ಹೇಗೆ? ಎನ್ನುವ ಪ್ರಶ್ನೆ ನಮಗೆ ಮಹತ್ತರವಾಗಿ ಕಾಣಬೇಕು ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕಡಲ ತೀರದ ಭಾರ್ಗವ,ನಡೆದಾಡುವ ವಿಶ್ವಕೋಶ ಶ್ರೀ ಶಿವರಾಮ್ ಕಾರಂತ್ ಅವರ ಪುಣ್ಯಸ್ಮರಣೆ
ದಿ. ಶಿವರಾಮ ಕಾರಂತರನು ನೆನೆದು
ಹಮೀದಾಬೇಗಂ ದೇಸಾಯಿ
ಕಡಲ ಗರ್ಭದಿ ಹುಟ್ಟಿ
ಬೆಳೆದ ಸಿಂಪಿಯ ಮುತ್ತು
ಹೊಳೆದಿಹುದು ಜಗದ ತುಂಬ
ಕಡಲತೀರದಿ ಜನಿಸಿ
ಬೆಳೆದೊಂದು ಜೀವ
ಬೆಳಗಿಹುದು ಜಗದ ಮನವ..
ಪೃಕೃತಿ ಮಡಿಲಿನ ಕೂಸು
ಶಿವ ಶಕ್ತಿ ಪಡೆದು
ರಾಮ ಬಾಣವನೆತ್ತಿ ಸಾಗಿ
ಕಾರ್ ಗುಣಗಳ ಮೆಟ್ಟಿ
ಅಂತ ಮಾಡುತಲದರ
ಬೆಳೆದರು ಶಿವರಾಮ ಕಾರಂತರಾಗಿ..!
ಅನ್ಯಾಯದೆದುರಿನಲಿ
ನ್ಯಾಯ ಹುಟ್ಟನು ಹಾಕಿ
ತೋರಿಹರು ಸತ್ಯತೆಯ ತೀರವ
ಪಾಶವೀ ಕೃತಿಗಳಿಗೆ
ಪಾಶಗಳ ತೊಡಿಸುತಲಿ
ಉಳಿಸಿಹರು ನಮ್ಮೀ ಪರಿಸರವ..
ಸಾಹಿತ್ಯ ದೀವಿಗೆಯ
ಹಿಡಿದು ಕೈಯಲಿ ನೀವು
ತೆರೆದಿರಿ ವಿಜ್ಞಾನ ಹೆಬ್ಬಾಗಿಲವ
ರಾಗ ತಾಳಗಳಿಂದ
ಯಕ್ಷಗಾನವ ಕುಣಿದು
ತೋರಿದಿರಿ ಜಗಕೆಲ್ಲ ಯಕ್ಷಲೋಕವ..!
ಬಿರುದುಗಳ ಹಂದರದಿ
ತಮ್ಮತನವೆತ್ತರಿಸಿ
ನಿಂದಿಹಿರಿ ಕೀರ್ತಿ ಪಾರಿಜಾತವಾಗಿ..
ಬಾಲವನದಲಿ ನಲಿವ
ಚಿಣ್ಣರೆದೆ ಹಿಗ್ಗಿಸುವ
ಜ್ಞಾನ ದಂಗಳ ಕಾರಂತಜ್ಜ ನಾಗಿ..!
ದುಷ್ಟ ಕಾಲನ ಕ್ರೂರ
ದೃಷ್ಟಿ ತಾಕಿತೆ ನಿಮಗೆ
ಸೇರಿದಿರಿ ನೀವು ಮರಳಿಮಣ್ಣಿಗೆ
ಮರೆಯಲಾರೆವು ನಿಮ್ಮ
ಅನುದಿನವು ಅನುಕ್ಷಣವು
ನಿಮ್ಮ ಚೇತನವಿರಲಿ ನಮ್ಮ ಬಾಳಿಗೆ..
ಹಮೀದಾಬೇಗಂ ದೇಸಾಯಿ
ಕಾರಂತರನ್ನು ಕವಿತೆಗಳಲ್ಲಿ ಚೆಂದ ಕಟ್ಟಿಕೊಡಲಾಗಿದೆ.
ಕಾರಂತರ ಚೊಮನ ದುಡಿಯ ಬಗ್ಗೆ, ಮೂಕಜ್ಜಿಯ ಕನಸುಗಳ ಬಗ್ಗೆ ,ಮರಳಿ ಮಣ್ಣಿಗೆ ಕಾದಂಬರಿಗಳ ಬಗ್ಗೆ ನಿಮ್ಮಿಂದ ಪುಟ್ಟ ಪುಟ್ಟ ಟಿಪ್ಪಣಿ/ ಅನಿಸಿಕೆ/ ವಿಶ್ಲೇಷಣೆ ಬರಲಿ ಎಂದು ನಿರೀಕ್ಷೆ ಮಾಡುತ್ತೇವೆ.