ಡಾ ಡೋ ನಾ ವೆಂಕಟೇಶ ಕವಿತೆ-ಏಕಿಷ್ಟು ನಾಚಿಕೆ

ಕಾವ್ಯಸಂಗಾತಿ

ಡಾ ಡೋ ನಾ ವೆಂಕಟೇಶ

ಏಕಿಷ್ಟು ನಾಚಿಕೆ

ಇಂತಿಷ್ಟು ದೇಹಕ್ಕೆ ಮತ್ತೆಷ್ಟು
ಯೌವನ
ಬುದ್ಧಿ ಬಲಿಷ್ಠ ಆಗಿದ್ದಕ್ಕೇಕಿಷ್ಟು
ಮುಜುಗರ
ದೇಹ ಕನಿಷ್ಠ ಆಗಿದ್ದಕ್ಕೇಕಿಷ್ಟು
ಸಂತಾಪ ಸಂಕೋಚ

ಮೆರೆದ
ಸುವರ್ಣ ಸಂಭ್ರಮ ನೆನಸುತ್ತ
ನಮಿಸುತ್ತ ಕಳೆದ ಮೈಲಿಕಲ್ಲುಗಳನ್ನ
ತುಳಿದ ಹಾದಿ ಬೀದಿಗಳನ್ನು
ಜತೆ ಜತೆ ಕೇಕೆ ಹಾಕಿದ ಚಡ್ಡಿ
ದೋಸ್ತುಗಳನ್ನು
ಜೀವನ ಪಾಠ ಕಲಿಸಿದ
ಆಚಾರ್ಯರನ್ನು ಆತ್ಮೀಯರನ್ನು
ಮತ್ತೆ
ಹೇಗೆ ಮರೆಯಲಿ ನನ್ನ
ನಿಂದಕರನ್ನು

ನನಸಲ್ಲಿ ಬಂದ ಸಂಗಾತಿ
ಹೊಂಗನಸ ತೋರಿ ಕಲ್ಲು ಮುಳ್ಳುಗಳ ಮರೆಸಿ
ಮತ್ತೆ ಹೂಗುಚ್ಛ ಹಾಸಿ
ಬಾಡಿ ಹೋಗುವ ಕಾಲ
ಬಂದಾಗ
ಮತ್ತದೇ ಸಂಕೋಚ
ಮತ್ತದೇ ಸಂತಾಪ

ನೆನಸಿಕೋ ನನಸನ್ನ
ನಿನ್ನದೇ ಉಸಿರಾಡುವ
ಖುಷಿಯನ್ನ !!

ಅಂತಿಮ ಚರಣವನ್ನ
ನಿನ್ನದೇ ಆತ್ಮನನ್ನ !!


12 thoughts on “ಡಾ ಡೋ ನಾ ವೆಂಕಟೇಶ ಕವಿತೆ-ಏಕಿಷ್ಟು ನಾಚಿಕೆ

  1. ನೆನಪಿಸಿಕೋ ನನಸನ್ನ,
    ಮತ್ಯಾಕೆ ಸಂತಾಪ..
    ಇದ್ದದ್ದ ಅನುಭವಿಸು, ಜೀವನವ ಸುಖಿಸು….
    ವೆಂಕಣ್ಣ.. ನಿಮ್ಮ ಜೋಳಿಗೆಯಿಂದ ಇನ್ನೊಂದು ಸುಂದರ ಬಾಣ.

    1. ಧನ್ಯವಾದಗಳು ಸೂರ್ಯ
      ನಿಮ್ಮ ಹೊಗಳಿಕೆ
      ನನ್ನ ಆಹಾರ!

  2. ನನಸನ್ನು ನೆನಪಿಸಿಕೊಂಡು ಬದುಕಿಬಿಡು ಸಙತಾಪವೇಕೆ ? ಸುಖಿಸಿಬಿಡು ಜೀವನವ ಇದ್ದದ್ದನುಭವಿಸಿ ಧನ್ಯವಾದಗಳು ವೆಂಕಣ್ಣ ಸರ್

  3. ನೆನಸಾಗಿ ಬಂದ ಸಂಗಾತಿ ಜತೆ ಸಂಕೋಚವಿಲ್ಲದೆ
    ಹೂಗುಚ್ಚಹಾಕಿ ಮೆರೆದ ಸುವರ್ಣ ಸಂಭ್ರಮಗಳನ್ನು
    ಖುಷಿಯಾಗಿ ನೆನಪಿಸುತ್ತಾ ಸಂತೋಷವಾಗಿರಲಿ ನಿಮ್ಮ ಜೀವನ ❤️‍

    1. ಧನ್ಯವಾದಗಳು ಮಂಜಣ್ಣ. ಸಂತೋಷ ನಿಮ್ಮ ಅಭಿಮಾನಕ್ಕೆ
      ಡಬಲ್ ಖುಷಿ. ನೀವೂ ಕವಿಯಾದ್ದಕ್ಕೆ!

Leave a Reply

Back To Top