ಕಾವ್ಯ ಸಂಗಾತಿ
ನಲ್ಲನಿಲ್ಲದ ಜೀವನ
ಪ್ರೊ ರಾಜನಂದಾ ಘಾರ್ಗಿ
ಕ್ಷಣದಲ್ಲಿ ಮನಸನ್ನು ಕದ್ದ ಚೋರ
ಕನಸುಗಳನೆಲ್ಲ ನನಸಾಗಿಸಿದ ಧೀರ
ಅಸ್ತಿತ್ವವನ್ನೇ ಸೂರೆಗೊಂಡ ಮಾಟಗಾರ
ಕತ್ತಲೆಯಲಿ ಬೇಳಕಾಗಿ ಬಂದವ
ಭಾವ ಬಂಧನದಲ್ಲಿ ಅಪ್ಪಿ ನಿಂತವ
ಸ್ವೀಕೃತಿ ಯಲ್ಲಿ ಸಾಕ್ಷಾತ್ಕಾರ ತಂದವ
ಹೇಳದೇ ಮರೆಯಾಗಿ ಹೋದ
ಕಟ್ಟಿದ ಕನಸಿನ ಸೌಧವ ಕರಗಿಸಿದ
ಮರಳಿ ಬಾರದ ತಾಣವ ಸೇರಿದ
ಮತ್ತೆ ಅಂಧಕಾರ ಕವಿದಿದೆ ಸುತ್ತಲೂ
ವಿಷಾದ ಕಾಯುತ್ತಿದೆ ಮನವ ಮುತ್ತಲು
ನೆನಪುಗಳು ಕಾಡುತಿವೆ ಏಣಿ ಹತ್ತಲು
ಸಾಮಾಜಿಕ ಬಂಧನಗಳ ತಾಕಲಾಟ
ಮುಖವಾಡದ ಅಡಿಯಲ್ಲಿ ನರಳಾಟ
ಸುತ್ತುವರೆದ ಪರಿಧಿಯ ಹುಡುಕಾಟ
ಕಿಚ್ಚಿಲ್ಲದ ಬೇಗೆ ಸುಡುತಿಹುದು
ಕಾಣದ ನೂವು ಹಿಂಡುತಿಹುದು
ನಲ್ಲನಿಲ್ಲದೇ ಜೀವನ ಸಾಗುತಿಹುದು