ನಾನಿಯ ಗಜಲ್,ಅಂತರಂಗದ ಧ್ಯಾನ,

ಪುಸ್ತಕ ಸಂಗಾತಿ

ಅಂತರಂಗದ ಧ್ಯಾನ

 ನಾನಿಯ ಗಜಲ್,ಅಂತರಂಗದ ಧ್ಯಾನ,

ಲೇಖಕರು: ನಾರಾಯಣಸ್ವಾಮಿ ವಿ (ನಾನಿ )

ಆಶಾ ಪ್ರಕಾಶನ

ಕೋಲಾರ ಜಿಲ್ಲೆ

Price :120₹

 ಸಾಹಿತ್ಯ ಎಂಬ ಸಾಗರದಲ್ಲಿ ಕವನ, ಕಥೆ,ಲೇಖನ, ಚುಟುಕು ಹಾಯ್ಕು, ಶಾಯರಿ, ಜಡೆ ಕವನ, ಜಾನಪದ ಗೀತೆಗಳು, ಶಿಶು ಗೀತೆಗಳು, ಭಾವಗೀತೆಗಳು, ಪಂಚ ಲೈನು ಟ್ಯಾಗ್ ಲೈನ್, ಗಜಲ್ ಹೀಗೆ ಅನೇಕ ಸಾಹಿತ್ಯದ ಪ್ರಕಾರಗಳು ತುಂಬಿವೆ.ಸಾಹಿತ್ಯದ ಆಳದಲ್ಲಿ ಬಿದ್ದಾಗ ನಾವು ಯಾವುದನ್ನು ಹಿಡಿಯಬೇಕೆಂಬುದು ತಿಳಿಯುವುದಿಲ್ಲ ಮನಸ್ಸಿಗೆ. ಅವರವರ ಮನಸ್ಸಿನ ಪುಟದಲ್ಲಿ ಯಾವುದಾದರೂ ಬಗೆಯ ತುಂಬಾ ಆಸಕ್ತಿ ಇರುತ್ತದೆ ಅದನ್ನು ಬೇಗ ಸರಿ ಹಿಡೀಬಹುದು. ಅದೇ ರೀತಿ ನಾರಾಯಣಸ್ವಾಮಿ ಸರ್ ಅವರು ಗಜಲ್ ಎಂಬ  ಸಾಹಿತ್ಯವನ್ನು ತಮ್ಮ ತಮ್ಮ ಬದುಕಿನಲ್ಲಿ ಅಳವಡಿಸಿಕೊಂಡಿದ್ದಾರೆ. ಇದೇ ತಿಂಗಳಲ್ಲಿ ಬಿಡುಗಡೆ ಆದ ಪುಸ್ತಕವು ಓದುಗರ  ತುಂಬಾ ಮೆಚ್ಚುಗೆಯನ್ನು ಜಾಲತಾಣದಲ್ಲಿ ಹೊಂದಿದೆ.

 ಗಜಲನ್ನು ಓದಲು ಶುರು ಮಾಡಿದರೆ ಪುಸ್ತಕವನ್ನು ಮುಗಿಸುವ ತನಕ ಓದುವ ತಲ್ಲಣ  ನಿಲ್ಲುವುದಿಲ್ಲ ಆ ರೀತಿಯಲ್ಲಿ ಗಜಲುಗಳು ಒಂದಕ್ಕಿಂತ ಒಂದು ಸೊಗಸಾಗಿದೆ.

 ಲೇಖಕರು ತಾವು ಬೆಳೆದು ಬಂದ ಹಾದಿಯಿಂದ ತಾವು ಸಾಧಿಸಿದ ಸಮಯದವರೆಗೂ ಆತ ಘಟನೆಗಳನ್ನೆಲ್ಲ ತಮ್ಮ ಗಜಲ್ ರೂಪದಲ್ಲಿ ಪುಸ್ತಕದ ರೂಪದಲ್ಲಿ ತೆರೆ ತಂದಿದ್ದಾರೆ.

ಬಣ್ಣವೇ ಮಾಸಿ ಹೋದ ಅಂಗಿಯನ್ನು  ಅದೆಷ್ಟು ಬಾರಿ ಹೊಲಿಯುವೆ  ಅಮ್ಮ

ಹರಿದು ಕುಂಡಿಯ ಕಾಣುವ ಪ್ಯಾಂಟಿಗೆ ಎಷ್ಟು ಬಾರಿ ತ್ಯಾಪೆ ಹಾಕುವೆ ಅಮ್ಮ

 ಈ ಮೇಲಿನ ಎರಡು ನುಡಿಯ ಗಜಲ್ ನಲ್ಲಿ ತಮ್ಮ ತಾಯಿಯು ಹರಿದ ಬಟ್ಟೆಯನ್ನು ಒಲಿದು ತನಗೆ ಉಡಿಸುವ ಪರಿಯನ್ನು ಹಾಗೂ ಬಡತನದ ಬೇಗೆಯನ್ನು ಈ ರೀತಿ ತಿಳಿಸಿದ್ದಾರೆ. ಯಾವುದೇ ತಾಯಿಗಾದರೂ ತಮ್ಮ ಮಕ್ಕಳಿಗೆ ಹೊಸ ಬಟ್ಟೆಗಳನ್ನು ತೊಡಿಸಿ ನೋಡುವ ಸಂಭ್ರಮ ಮನದಲ್ಲಿ ಇರುತ್ತೆ.

 ಜ್ಞಾನವೆಂಬ ಬೆಳಕನ್ನು ಹುಡುಕಲು ಬಯಲಿಗೆ ಹೊರಟಿದ್ದೇನೆ,ಬುಡ್ಡಿ ದೀಪದ ಬೆಳಕಿನಲ್ಲಿ ಅಕ್ಷರಗಳ ತಡುಕಾಡುವ ಬದುಕು ನನ್ನದು

 ಈ ಎರಡು ನುಡಿಯಲ್ಲಿ ಲೇಖಕರು ಬಯಲಿನಲ್ಲಿ ಏನು ಸಿಗುತ್ತೆ ಗೊತ್ತಿರುವುದಿಲ್ಲ ಆದರೆ ಜ್ಞಾನವೆಂಬ ಬೆಳಕನ್ನು ಹುಡುಕಲು ಹೋಗುತ್ತಿರುವೆಂಬುದು ತಿಳಿಯುತ್ತದೆ.

 ಬುಡ್ಡಿ ದೀಪದ ಬೆಳಕಿನಲ್ಲಿ ಅಕ್ಷರಗಳ ಕಷ್ಟಪಡುವ ಬದುಕಿನ ಬಗ್ಗೆ ತಿಳಿಸಿದ್ದಾರೆ. ಈ ಲೈನ್ ಅನ್ನು ಓದಬೇಕಾದರೆ ಡಾಕ್ಟರ್ ಬಿ ಆರ್ ಅಂಬೇಡ್ಕರ್ ನನ್ನ ಕಣ್ಣ ಮುಂದೆ ಬರುತ್ತಾರೆ.

 ತುಂಬಾ ಸುಂದರವಾದ ಗಜಲ್ಗಳು ಒಂದಕ್ಕಿಂತ ಒಂದು ವಿಭಿನ್ನವಾಗಿವೆ ಇದನ್ನು ಖಂಡಿತ ಎಲ್ಲರೂ ಓದಬೇಕೆಂಬುದು ನನ್ನ ಅನಿಸಿಕೆ.


 ಸವಿತಾ ಮುದ್ಗಲ್

One thought on “ನಾನಿಯ ಗಜಲ್,ಅಂತರಂಗದ ಧ್ಯಾನ,

Leave a Reply

Back To Top