ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಯಾನ

ಮನುಷ್ಯರಾಗೋಣ ಬನ್ನಿ

ಜಿ.ಎಸ್.ಶರಣು

ನೇಕಾರನೊಬ್ಬ ನೇಯ್ದ ಬಟ್ಟೆ
ಹಿಂದೂಗಳಿಗಾಗಿಯಲ್ಲ
ಮುಸಲ್ಮಾನರಿಗಾಗಿಯಲ್ಲ
ತೋಡುವ ಮನುಷ್ಯರಿಗಾಗಿ

ಮೈ ಮುಚ್ಚುವ ನೇಕಾರನ ಬಟ್ಟೆ
ಜಾತಿ-ಮತ ಇಲ್ಲದೆ ಬದುಕುತ್ತಿದೆ
ಮೈ ಮುಚ್ಚಿಕೊಳ್ಳುವ ಮನುಷ್ಯರು ಮಾತ್ರ
ಜಾತಿ-ಮತಕ್ಕಾಗಿ ಹೊಡೆದಾಡುತ್ತಿದ್ದಾರೆ

ಅವನು ಗರ್ವದಿಂದ ಹೇಳುತ್ತಿದ್ದ
“ನನ್ನ ಜಾತಿಯೇ ನನಗೆ ಮುಖ್ಯ” ಎಂದು
ಬಟ್ಟೆ ನೇಯ್ದವನ ಜಾತಿ ಬೇರೆ
ಅವನು ತಯಾರಿಸಿದ ಬಟ್ಟೆ ತೋಡುವೆ ಯಾಕೆ?
ಎನ್ನುವ ಪ್ರಶ್ನೆಗೆ ಬಾಯಿ ಮುಚ್ಕೊಂಡು ನಿಂತಿದ್ದ

ಅವಶ್ಯಕ ವಸ್ತುಗಳಿಗೆ ಇರದ ಜಾತಿ-ಮತ
ಮನುಷ್ಯ-ಮನುಷ್ಯನಲ್ಲಿ ಯಾಕೆ?
ನೀಚ ಮನಸ್ಥಿತಿಯ ಬೇರು ಕಿತ್ತೆಸೇದು
ಮನುಷ್ಯರಾಗಿ ಬದುಕೋಣ ಬನ್ನಿ

About The Author

Leave a Reply

You cannot copy content of this page

Scroll to Top