ರೋಹಿಣಿ ಯಾದವಾಡ-ಪಯಣ

ಕಾವ್ಯ ಸಂಗಾತಿ

ಪಯಣ

ರೋಹಿಣಿ ಯಾದವಾಡ

ಹಸಿರುಟ್ಟ ವನದಲಿ
ಸಾಗುತಿರುವೆ ಹೆಜ್ಜೆಹಾಕಿ
ಅಜ್ಜನೊಟ್ಟಿಗೆ ಪ್ರಕೃತಿಯಲಿ
ಮುಂದೆಸಾಗಿಹೆ ಬೆನ್ನುಹಾಕಿ

ವನದೇವಿ ಧರೆಗಿಳಿದು
ರಂಗುರಂಗು ಬೀಸಿಹಳು
ವನಸಿರಿಯು ಮೈದಳೆದು
ಸುತ್ತೆಲ್ಲ ಕಂಗೋಳಿಸಿಹಳು

ಹಸಿರನುಟ್ಟ ವನದೇವಿ
ಚಿತ್ತಾರ ಬರೆದಿಹಳಿಲ್ಲಿ
ಕಣ್ಮನ ತಣಿಸುತಿಹುದು
ಮುದದಿ ಹರುಷ ತಾಳಿ

ಅಜ್ಜನೊಡನೆ ಮಾತುಕತೆ
ಸುಗಮವಾಗಿ ಸಾಗಿತಿಲ್ಲಿ
ಬದುಕದು ಸಾರ್ಥಕತೆ
ಬಾಳಪಯಣ ಪಾಠವೆಲ್ಲ

ಅಜ್ಜನ ಅನುಭವವಿಲ್ಲಿ
ಅನುಭಾವದ ಅರಿವಾಗಿ
ಹೊಸತಿನತ್ತ ಕಣ್ಣತೆರೆದು
ಸಾಗುತಿರುವೆ ಭರವಸೆಯಲಿ

ಏಳುಬೀಳು ಸಹಜವಿಲ್ಲಿ
ಬಿಸಿಲನೆರಳು ಇರುವಂತೆ
ಬದುಕು ಯಾಣದಲಿ
ನಡೆದುಕಾಣು ಸಾರ್ಥಕತೆ.


Leave a Reply

Back To Top