ಅಕ್ಷತಾ ಜಗದೀಶ-ಕವಿತೆ-ಕವನ

ಕಾವ್ಯ ಸಂಗಾತಿ

ಕವನ

ಅಕ್ಷತಾ ಜಗದೀಶ

ಕರಿ ಮುಗಿಲು
ಮನದಾಳದಿ ಹುದುಗಿದ್ದ
ಪ್ರೀತಿಯ ಹೇಳಬಹುದಿತ್ತು
ಕರಿ ಮೋಡದಂತೆ
ಸುರಿವ ಮಳೆಯಾಗಿ
ಅಂದು…
ತಡೆ ಹಿಡಿಯಿತು
ಬಿಳಿಮೋಡವದು
ತಾ ಬಂದು..
ಮುಸುಕಾದ ಕಾರ್ಮೋಡ
ಮತ್ತೇಲ್ಲೋ ಕೊಂಡೊಯ್ದ
ಬಾರಿ ಬೀರುಗಾಳಿ..
ಬಯಸದ ಕಡೆ ತಾ
ಮಳೆ ಸುರಿಸದಾಯಿತು
ಮನ ಸೇರುವಲ್ಲಿಗೆ..

ಪ್ರೀತಿಯ ಕರಿಮೋಡ
ಹಾರಿತು ಬೀರುಗಾಳಿಗೆ
ದಾರ ಹರಿದ ಪಟದಂತೆ
ಸೂತ್ರವಿಲ್ಲ
ಸೂತ್ರಧಾರಿಯೂ ಇಲ್ಲ
ಕಾಣದೂರಿಗೆ ಅಲೆಮಾರಿ
ಸಾಗುವಂತೆ..

ಬಯಸದ ಊರಿಗೆ
ಒಲ್ಲದ ಮನಸಲಿ
ಮಳೆಯಾಗಿ ಸುರಿಯಿತು
ಚುಂಬಿಸಲು
ಹಸುರಾದ ಭೂಮಿಗೆ
ಮಳೆಯಾಗಿ
ಭೂಮಿಗೆ ಜೀವಜಲವಾಗಿ
ತನಗರಿವಿಲ್ಲದೆ
ಮತ್ತೆ ಕರಿಮೋಡವಾಗಿ
ಅಡೆತಡೆಗಳ ದಾಟಿ
ಮನಸಾರೆ ಭೋರ್ಗರಿಯಿತು
ತಾ ಬಯಸಿದಂತೆ
ಪ್ರೀತಿಯ ಮಳೆಯಾಗಿ…


Leave a Reply

Back To Top