ಎಚ್ ಎಸ್ ಭವಾನಿ ಉಪಾಧ್ಯ ಸಣ್ಣ ಕಥೆ

ಕಥಾ ಸಂಗಾತಿ

ವಾಸ್ತವತೆ.

ಎಚ್ ಎಸ್ ಭವಾನಿ ಉಪಾಧ್ಯ

ಓಹ್ ಗೀತಾ ಯಾವಾಗ ಬಂದೆ ಎನ್ನುತ್ತಾ ಅಡಿಗೆ ಮನೆಯಿಂದ ಹೊರ ಬಂದ ಮೈತ್ರೇಯಿ ಗೆ ಗೀತ ಈಗಷ್ಟೇ ಬಂದೆ ಮೈತ್ರಿ..ಹೇಗಿದ್ದೀಯಾ ಮಕ್ಕಳು ಶಾಲೆಗೆ ಹೋದರ ಏನು ವಿಶೇಷ ,ಯಜಮಾನರು ಆಫೀಸಿಗೆ ಹೋಗಿದ್ದಾರೆ ಅನ್ನಿಸುತ್ತೆ ಅಂದಳು ಗೀತಾ.
ಹುಂ ಗೀತಾ ಯಾರು ಮನೆಯಲ್ಲಿಇಲ್ಲ ಕಣೆ..ನಾನೊಬ್ಬಳೇ ಇನ್ನು ಎಲ್ಲಾರು ಸಂಜೆಗೆ ಮನೆ ಸೇರುವುದು.
ಏನು ಮಾಡ್ತಾ ಇರುತ್ತಿಯಾ ಅಷ್ಟರ ವರೆಗೆ ಗೀತಾ ಅಂದಾಗ
ಮನೆಕೆಲಸ ಮುಗಿಸಿ ಏನಾದರು ಕಸೂತಿ ಮಾಡ್ತೀನಿ.
ಓದುವುದು ಬರೆಯುವುದು ನನ್ನ ನೆಚ್ಚಿನ ಹವ್ಯಾಸ ಕೂಡ
ಇತ್ತೀಚೆಗೆ ಸಾಮಾಜಿಕಜಾಲತಾಣಗಳಲ್ಲಿ ಬ್ಲಾಗ್ ನಲ್ಲಿ ಬರೆಯುತ್ತೇನೆ ಕಣೆ.
ನೀನು ಬಿಡು ಮೊದಲಿನಿಂದಲೂ ಬುದ್ಫಿವಂತೆ ಅಂದ ಗೀತ ಮಾತಿಗೆ ,ಯಾರು ಎಷ್ಟೇ ಬುದ್ದಿವಂತರಾದರು ಬದುಕು ಕಟ್ಟಿಕೊಳ್ಳಲು ಎಲ್ಲರೂ ಕಷ್ಟ ಪಡಬೇಕು ತಾನೇ ಗೀತ ಬಿಡು ಹೋಗಲಿ ಏನು ವಿಶೇಷ ಕುಡಿಯಲು ಏನು ಮಾಡುವುದು ಹೇಳು ಹಾಗೆ ಬಾ ತಿಂಡಿ ತಿನ್ನೋಣ ,ನನ್ನದು ತಿಂಡಿ ಆಗಿಲ್ಲ
ಈಗಷ್ಟೇ ತುಳಸಿ ಪೂಜೆ ಮುಗಿಸಿ ಬಂದೆ ಬಾ ಬಾ ಮಾರಾಯಿತಿ ಎಂದು ಒಳ ಕರೆದಳು ಮೈತ್ರಿ.

ತಟ್ಟೆಗೆ ಉಪ್ಪಿಟ್ಟು ಚಟ್ನಿಪುಡಿ ಹಾಕಿ ಕೊಟ್ಟು ತಾನು ತೆಗೆದು ಕೊಂಡು ಚಾಯ್ ಕಪ್ ಹಿಡಿದು ಬಂದು ಮಾತಿಗೆ ಕುಳಿತಳು.
ಹೇಳು ಗೀತಾ ಬಂದ ವಿಶೇಷವೇ ಹೇಳಲಿಲ್ಲ ಎಂದಾಗ
ಹೂ ನನ್ನ ಮಗಳಿಗೆ ಮದುವೆ ಗೊತ್ತಾಗಿದೆ ಕಣೆ ,ಕರೆಯಲು
ಬಂದೆ ,ಓಹ್ ಹೌದಾ ಏನು ಮಾಡ್ತಾನೆ ಅಳಿಯ? ಎಂದಳು ಮೈತ್ರೇಯಿ.
ಅಳಿಯ ಹಳ್ಳಿಯಲ್ಲಿ ಇರೋದು,ಓದಿದ್ದಾನೆ ಆದರೆ ಕೃಷಿ ಮಾಡುತ್ತಾನೆ, ತೋಟ ಗದ್ದೆ ಇದೆ ಸ್ವಂತದ್ದು ಅಂತ
ಹಿರಿಯರು ಮಾಡಿದ ಮನೆ ಇದೆ .ಅವಳೇ ಇಷ್ಟ ಪಟ್ಟು
ಹುಡುಕಿಕೊಂಡು ಬಂದ ಗಂಡು ಕಣೆ.
ನನ್ನ ಗಂಡನಿಗೆ ಇಷ್ಟ ಇಲ್ಲ ,ನಂಗೂ ಮಗಳು ಹಳ್ಳಿ
ಸೇರುತ್ತಾಳೆ ಅಂತ ಬೇಸರ ಕಣೆ .
ನೀವೆಲ್ಲ ಓದಿದಿರಿ ಆದ್ರೆ ನಾನು ಪಿ ಯು ಸಿ ಮುಗಿಸಿ
ಮದುವೆ ಆಗಿ ಹಳ್ಳಿನೆ ಸೇರಿದೆ ..ನನ್ನ ಮಕ್ಕಳು ಪಟ್ಟಣ ಸೇರಲಿ ಅನ್ನೋ ಆಸೆ ನೆರವೇರಲೇ ಇಲ್ಲ..ಬೇಸರದಿಂದ
ಮನದಾಳದಮಾತು ಹೊರ ಹಾಕಿದಳು ಗೀತ.

ಗೀತಾಳ ಮಾತಿಗೆ ನಕ್ಕು ಮೈತ್ರೇಯಿ ಅಲ್ಲವೇ ನಾಯಿ ಕೊಡೆಗಳಂತೆ ಎದ್ದಿರೋ ಇಂಜಿನಿಯರಿಂಗ್ ಕಾಲೇಜುಗಳು
ಮೆಡಿಕಲ್ಕಾಲೇಜುಗಳು ಯಾವುದೋ ಒಂದು ಓದಿ ವಿದೇಶ ಕ್ಕೆ ಹೋಗ್ತಾರೆ ,ವಾಪಸ್ ಬರೋದೆ ಇಲ್ಲ..ಅಪ್ಪಅಮ್ಮನ ನೆನಪೆ ಇರೋಲ್ಲ ಮಕ್ಕಳಿಗೆ ,ತಂದೆ ತಾಯಿ ವೃದ್ದಾಶ್ರಮ ಸೇರುತ್ತಾ ಇದ್ದಾರೆ.
ಅಂತಾದ್ರಲ್ಲಿ ಈ ಹುಡುಗ ತಂದೆ ತಾಯಿ ಜೊತೆಗೆ ಇರೋ ದು ಮತ್ತೆ ದೇಶ ಭಾಷೆ ತಾಯಿ ನೆಲ ಅನ್ನೋ ಅಭಿಮಾನ ನಿನ್ನ ಮಗಳಿಗೂ ಆ ಸ್ವಭಾವ ಇಷ್ಟ ಆಗಿದೆ ಬಿಡು ಅವರೇ
ಒಪ್ಪಿ ರುವಾಗ ನಿಮ್ಮದೇನು ಸಮಸ್ಯೆ ಎಂದ ಮೈತ್ರೇಯಿ

ನೋಡು ಗೀತಾ ಸಿಟಿ ಅನ್ನೋದು ನಾವು ಅಂದುಕೊಂಡಷ್ಟು ಒಳ್ಳೇದಲ್ಲ ,ಇಲ್ಲಿ ಎಲ್ಲ ಸಿಗುತ್ತೆ ಆದರೆ ಕೈ ತುಂಬಾ M ವಿಟಮಿನ್ ಇರಬೇಕು…ಓಹ್ ಕನ್ಫ್ಯೂಸ್
ಅಗಬೇಡ ಅಂದ್ರೆ ಹಣ ಇರಬೇಕು. ಇಲ್ಲಿ ಎಲ್ಲವೂ ಅಯೋಮಯ,ತಿಂಗಳಿಗೆ ಪಗಾರ ಸರಿಯಾಗಿ ಬಂದ್ರೆ ಮಾತ್ರವೇ ಜೀವನ ಒಬ್ಬರ ದುಡಿಮೆ ಏನೇನು ಸಾಲದು.
ಕೆಲವೊಮ್ಮೆ ಹೆಂಡತಿ ಹೊರಗೆ ಹೋಗಿ ದುಡಿಯಲು ಆಗೋಲ್ಲ.
ಈಗ ಬಿಡು ವರ್ಕ್ ಫ್ರಮ್ ಹೋಮ್ ಅನ್ನೋ ಕಾನ್ಸೆಪ್ಟ್ ಬಂದಿದೆ..ನೋಡು ನಾನು ಇಷ್ಟೆಲ್ಲಾ ಓದಿದರು ಪ್ರಯೋಜನ ಇಲ್ಲ.
ಮನೆಯಲ್ಲಿ ಕುಳಿತೆ . ಅವರ ದುಡಿಮೆಲಿ ಜೀವನ ನೆಡೆಯಬೇಕು..ಓದಿ ಎಷ್ಟೋ ವರ್ಷ ಆಗಿದೆ ಹಾಗಾಗಿ ನಾನೀಗ ಕೆಲ್ಸ ಮಾಡೋಕು ಆಗಲ್ಲ..ಎನಿದ್ರೂ ಸಣ್ಣ ಪುಟ್ಟಖರ್ಚು ವೆಚ್ಚ ನೋಡಿಕೊಂಡುಹೋಗಬಹುದು.
ಇಲ್ಲದ್ದೆಲ್ಲ ತಲೆ ಕೆಡಿಸಿಕೊಳ್ಲಬೇಡ ನೋಡು ನಾವಿಬ್ಬರೂ ಒಟ್ಟಿಗೆ ಓದಿದ್ದು ಒಂದೇ ವಯಸ್ಸು .ನಿನ್ನ ಮಗಳು ಆಗಲೇ ಮದುವೆಗೆ ಬಂದ್ರು. .ನನ್ನ ಮಕ್ಕಳು ಈಗಷ್ಟೇ ಕಾಲೇಜ್
ಮೆಟ್ಟಿಲು ಹತ್ತಿದ್ದಾರೆ.
ಜವಾಬ್ದಾರಿ ಮುಗಿತ ಇದೆ ನೆಮ್ಮದಿಯಿಂದ ಬದುಕುವುದು ಕಲಿ.ಇಷ್ಟು ವರ್ಷ ಅತ್ತೆ ಮಾವ ಗಂಡ ಮಕ್ಕಳು ,ಜೊತೆಗೆ
ಬ್ಯುಸಿನೆಸ್ ,ತೋಟ ಅಂತ ಮನೆಯಲ್ಲಿ ಸಾತ್ ಕೊಟ್ಟಿದ್ದಿಯ .ಈಗ ಮಗಳು ಅವಳ ಬದುಕು ಕಟ್ಟಿಕೊಳ್ಳಲು ಹೊರಟಿದ್ದಾಳೆ ಪ್ರೋತ್ಸಾಹನೀಡಬೇಕು.
ಅದು ಬಿಟ್ಟು ಏನೇನೋ ಯೋಚಿಸುವ ಸಾಹಸ ಬೇಡ.
ಸಿಟಿ ಅನ್ನೋ ಭ್ರಮೆಯಿಂದ ಹೊರಗೆ ಬಾ .
ಅದೆಲ್ಲ ಇರಲಿ ಬಿಡು ಎಲ್ಲಿ ಮದುವೆ ಎಂದ ಮೈತ್ರೇಯಿ ಮಾತು ಕೇಳಿ
ಗೀತಾ ವಾಸ್ತವಜಗತ್ತಿಗೆಬಂದಳು.

ಮೈತ್ರಿ ಏನೇ ನೀನು ಎಷ್ಟು ಆಲೋಚನಾ ಶಕ್ತಿ ಇದೆ ನಿನಗೆ
ಗ್ರೇಟ್ ,ಅಂತೂ ಇಂತೂ ಹಠ ಹಿಡಿದು ಓದಿದ ಸಿಟಿ ಹುಡುಗನ್ನ ಮದುವೆ ಆದೇ ಅದೇ ಅನುಭವ ನನ್ನ
ಮುಂದಿಟ್ಟೆ ನೀನು.
ಆಗಲಿ ನಿನ್ನ ಅನುಭವ ಇನ್ನೊಬ್ಬರಿಗೆ ಒಳ್ಳೆ ಪಾಠ ಕಣೆ ಎಂದ ಗೀತಾ ಮಾತಿಗೆ ಮೈತ್ರೇಯಿ ಇರಲಿ ಬಿಡು ಅದೆಲ್ಲಾ
ಹಂ ಎಲ್ಲಿ ಇನ್ವಿಟೇಶನ್…ತೋರಿಸು,ಒಡವೆ ಜವಳಿ
ತಂದಾಯಿತ ,ಎಲ್ಲಿ ತಂದ್ರಿ .?.
ಹಂ ಎಲ್ಲಾ ಹಾಸನಲ್ಲೆ ತಂದ್ವಿ ಈಗ ಅಲ್ಲಿಯೂ ಸಮೃದ್ಧಅಂಗಡಿ ಇವೆ .ಒಡವೆ ಎಲ್ಲ ಮೊದಲೇ ಮಾಡಿಸದ್ವಿ.
ಮದುವೆ ಸಕಲೇಶಪುರದಲ್ಲಿ ಕಣೆ 2 ದಿನದ ಮದುವೆ ಅಳಿಯ ಒಂದೇ ದಿನ ಸಾಕು ಅಂದ ,ಅವರ ಊರು ಅಲ್ಲಿಯೇ ಹತ್ತಿರ ಕಣೆ ಮೈತೃ, ಮರೆತೇ ಬಿಟ್ಟಿದ್ದೆಭಾನುವಾರ
ನಾಂದಿ ಚಪ್ಪರ ಪೂಜೆ ಇದೇ ಗಂಡ ಮಕ್ಕಳು ಬೇಕಿದ್ದರೆ ಬುಧುವಾರ ಮದುವೆಗೆ ಬರಲಿ ,ಮೈಸೂರು ಏನು ದೂರ ಅಲ್ಲವಲ್ಲ ಅಲ್ಲವಾ ,ನೀನು ಮಾತ್ರ ಶನಿವಾರ ರಾತ್ರಿ ಬಂದು ಬಿಡು ಎಂದಳು .
ತಟ್ಟೆ ತೆಗೆದುಕೊಂಡು ಸೀರೆ ಶರ್ಟ್ ಇಟ್ಟು ತಾಂಬೂಲ ಸಮೇತ ಪತ್ರಿಕೆ ಯನ್ನ ಇಟ್ಟು ಮೈತ್ರೇಯಿಗೆ ಕೊಟ್ಟು ಆತ್ಮೀಯತೆಯಿಂದ ಮೈತ್ರಿ ನನ್ನ ಮಗಳು ಸ್ಮಿತಳ ಮದುವೆ ಕಣೆ ,ಖಂಡಿತ ಬರಬೇಕು ಎಂದು ಆಹ್ವಾನವಿತ್ತಳು.

ಕೊಟ್ಟದ್ದನ್ನ ದೇವರ ಮುಂದಿಟ್ಟು ಪತ್ರಿಕೆ ತೆಗೆದು ಕಣ್ಣಾಡಿಸಿ ‘ಸೌರವ ‘ ಹುಡುಗನ ಹೆಸರು ಚೆನ್ನಾಗಿದೆ ಎನ್ನುತ್ತಾ ಇನ್ನೊಂದು ತಟ್ಟೆಗೆ ಬೆಳ್ಳಿ ಬಟ್ಟಲು ರವಿಕೆ ಕಣ ,ದಕ್ಷಿಣೆ ಇಟ್ಟು ಗೀತಾಳನ್ನ ಕೂರಿಸಿ
ಕುಂಕುಮ ಕೊಟ್ಟು ನಿನ್ನ ಆಹ್ವಾನ ಮನ್ನಿಸದಿರಲಾರೆ,
ಗೀತಾ ಖಂಡಿತ ಬರುತ್ತೇನೆ ನನ್ನವನ ಒಪ್ಪಿಗೆಪಡೆದು ನಿಂಗೆ
ಫೋನು ಮಾಡಿ ತಿಳಿಸುತ್ತೇನೆ .ತಪ್ಪಿಸದೆ ಮದುವೆಗಂತೂ ಬಂದೇ ಬರುತ್ತೇನೆ.ನಿನ್ನ ಆಹ್ವಾನ ನನಗಂತೂ ಖುಷಿ ತಂದಿದೆ.ನಂಗೂ ಒಂದು ರಿಲೀಫ್ ಸಿಕ್ಕಿತು
ಎನ್ನುತ್ತಾ ಬಾಗಿಲಿಗೆ ಬಂದು ಗೀತಾಳನ್ನು ಬೀಳ್ಕೊಟ್ಟಳು ಮೈತ್ರೇಯಿ .
ಸ್ನೇಹಾ ಶಾಶ್ವತ ಅಪರೂಪದ ಆಹ್ವಾನ ಮನಸ್ಸಿಗೆ ಹಿತ.


ಎಚ್ ಎಸ್ ಭವಾನಿ ಉಪಾಧ್ಯ

Leave a Reply

Back To Top