ಕಾವ್ಯ ಸಂಗಾತಿ
ಅವಳು ಮತ್ತು ಮೇಕಪ್ ಕಿಟ್
ಅವಳು ಮತ್ತು ಮೇಕಪ್ ಕಿಟ್
ಕಣ್ಣಸುತ್ತಲಿನ ಗುಂಗುರು ಕರಿನೆರಳಿಗೆ
ನವಿರಾಗಿ ಬಣ್ಣ ಬಳಿದು
ಹುಬ್ಬು ತೀಡಿ
ಸುಳಿಗೆನ್ನೆಗಳ ಲಘು ಕೆಂಪಾಗಿಸಿ
ತುಟಿಗೆ ಹೊಳಪಿನ ಎಣ್ಣೆ ಸವರಿ
ಕೇಶ ರಾಶಿಯಲಿ ನೆರೆ ಕಾಣಲಿಲ್ಲವೆಂದು
ಖಾತ್ರಿಪಡಿಸಿಕೊಂಡು
ಹೇರ್ ಡೈ ಮನದಲ್ಲಿ ನೆನೆದು
ಹಾರಾಡದಂತೆ ಬನಾನಾ ಕ್ಲಿಪ್ ಬಿಗಿದು
ಸೀರೆ ಸರಿಪಡಿಸಿಕೊಂಡು
ನೆರಿಗೆಗಳ ಒತ್ತೊತ್ತಾಗಿಸಿ
ಪಾದದ ಕೆಳಗೆ ಬರುವಂತೆ ಮಾಡಿ
ಸೆರಗ ಮಡಚಿ ಪಿನ್ ಹಾಕಿ
ಬ್ಲೌಸ್ ಗೂ ಸೀರೆಗೆ ಮ್ಯಾಚ್
ಇದೆಯೇ ಅಂತ ಮತ್ತೊಮ್ಮೆ ನೋಡಿ
ದಿಟ್ಟಿಸಿದಳು ಅವಳು
ಎದುರಿನ ನಿಲುವುಗನ್ನಡಿಯಲಿ
“”ಎಷ್ಟು ಚೆನ್ನವೇ ನೀನು””
ಮನ ಹೇಳಿತು ಮೆಲುದನಿಯಲಿ..
ಕನ್ನಡಿ ಅಚ್ಚರಿಪಟ್ಟಿತು
ಮೇಕಪ್ ಕಿಟ್ ನಕ್ಕಿತು
“ನಗಬೇಡ”
ಮನ ಕೂಗಿತು ಜೋರು ದನಿಯಲಿ
ಈಗ
ಇಪ್ಪತ್ತು ವರ್ಷದ ಹಿಂದೆ
ನಾನು ಹೀಗೆ ಇದ್ದೆ
ಕನ್ನಡಿ ಹುಂ ಗುಟ್ಟಿತು
ಮೇಕಪ್ ಕಿಟ್ ಸುಮ್ಮನಾಯಿತು
ಎತ್ತಿಕೊಳ್ಳೆಂದು ಕೈಚಾಚಿತು
“ಹೌದು ನಿನ್ನಿರುವು ಕೆಲ ಸಮಯ ಅಂತ
ನಿನಗೂ ಗೊತ್ತು
ಭಲೆ..! ಜಾಣ..!! “
ಆಕೆ ಹೇಳಿದಳು
ಬ್ಯಾಗಿನಲ್ಲಿ ಮೇಕಪ್ ಪೆಟ್ಟಿಗೆಯ
ತಲೆ ಸವರಿ ಇರಿಸಿಕೊಳ್ಳುತ್ತಾ…,
“ನಿನಗೆ ಗೊತ್ತಾ..,ಇದೆಲ್ಲ ಏಕೆಂದು
ಇದು ನನಗಾಗಿ ಅಲ್ಲವೆಂದು”
ಆಕೆ ಮೇಕಪ್ ಕಿಟ್ ಗೆ ಹೇಳುತ್ತಾ ನಡೆದಳು
ಅಲ್ಲಿ ಉದ್ಯೋಗದಲ್ಲಿ ನಿರತಳಾದಾಗ
ನಾನು ಆಗಾಗ ನಗಬೇಕು
ನಕ್ಕಾಗ ಸುಂದರವಾಗಿ ಕಾಣಬೇಕು
ಪಕ್ಕಾ ಕಾರ್ಯ ನಿರ್ವಹಿಸಲು
ಎಲ್ಲರಿಂದ ಭೇಷ್ ಅನಿಸಿಕೊಳ್ಳಲು
ಅಗತ್ಯ ಅನಿವಾರ್ಯವಾಗಿದೆ ಈಗ..
ನಿನ್ನ ಇರುವು…!!
ತನ್ನ ಹಳೆಯ ಸ್ಕೂಟಿಯ ಏರಿ ನಡೆದಳವಳು
ಉದ್ಯೋಗಾಲಯದ ಕಡೆಗೆ..!!
ಮೇಕಪ್ ಕಿಟ್ ನ ಕಣ್ಣು ಹನಿಗೂಡಿದವು
ಕ್ಷಮೆಯಾಚಿಸಿತು
ಮೆಲ್ಲಗೆ ಅವಳಿಗೆ ಮಾತ್ರ ಕೇಳುವಂತೆ
ಪಿಸು ದನಿಯಲಿ..!
ಬೆಚ್ಚಗೆ ಅವಳ ಬ್ಯಾಗಿನಲಿ…!!
ಚೆನ್ನಾಗಿದೆ ಮಾ ಕವಿತೆ❤️
Thank you Machu (putti)
❤❤
Thank you Madhu (putti)
❤❤
ತುಂಬಾ ಮನಮುಟ್ಟುವ ಸಾಲುಗಳು ಮೇಡಂ… ಹಮೀದಾ.
ತುಂಬಾ ಮನಮುಟ್ಟುವ ಸಾಲುಗಳು ಮೇಡಂ…. ಹಮೀದಾ.
ಧನ್ಯವಾದಗಳು ಮೇಡಮ್.